ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅ.22ಕ್ಕೆ ರೈತರ ಬೃಹತ್ ಹೋರಾಟ ಬೇಡಿಕೆ ಈಡೇರದಿದ್ದರೆ ಧಾರವಾಡದಲ್ಲಿ ಹೋರಾಟ: ರೈತ ಸಂಘ

ರೈತರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳ ದಿದ್ದರೆ, ಅ.22ರಂದು ಯರಿ ಕೊಪ್ಪ ಕ್ರಾಸ್ ಬಳಿ ದೊಡ್ಡಮಟ್ಟದ ಹೋರಾಟ ನಡೆಸ ಲಾಗುವುದು ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಜೋಶಿ ತೇಗೂರಿಗೆ ಆಗಮಿಸಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಅ.22ಕ್ಕೆ ರೈತರ ಬೃಹತ್ ಹೋರಾಟ ಬೇಡಿಕೆ ಈಡೇರದಿದ್ದರೆ ಧಾರವಾಡದಲ್ಲಿ ಹೋರಾಟ

-

Profile
Ashok Nayak Oct 19, 2026 10:02 AM

ಧಾರವಾಡ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಪಾದಯಾತ್ರೆ ಭಾನುವಾರ ಧಾರವಾಡ ಪ್ರವೇಶಿಸಿದೆ. ಈ ವೇಳೆ ಧಾರವಾಡದ ಯರಿಕೊಪ್ಪ ಬೈಪಾಸ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹಾಗೂ ರೈತ ಮುಖಂಡ ಚೂನಪ್ಪ ಪೂಜಾರಿ ಅವರ ನಡುವೆ ಸಭೆ ನಡೆಯಿತು.

ಇದನ್ನೂ ಓದಿ: Dharwad Agricultural University: ಧಾರವಾಡ ಕೃಷಿ ವಿವಿ ನೀರು, ಊಟ ಕಳಪೆ: ವಿದ್ಯಾರ್ಥಿನಿಯರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

ಅ.22ಕ್ಕೆ ಬೃಹತ್ ಹೋರಾಟ: ರೈತರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳ ದಿದ್ದರೆ, ಅ.22ರಂದು ಯರಿ ಕೊಪ್ಪ ಕ್ರಾಸ್ ಬಳಿ ದೊಡ್ಡಮಟ್ಟದ ಹೋರಾಟ ನಡೆಸ ಲಾಗುವುದು ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಜೋಶಿ ತೇಗೂರಿಗೆ ಆಗಮಿಸಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

image

ಕಬ್ಬಿನ ದರ ಏರಿಕೆ ಮತ್ತು ಬರ ಪರಿಹಾರ ಮೊದಲಾದ ವಿಷಯದಲ್ಲಿ ಕೇಂದ್ರ ಸರಕಾರದ ಸಹಕಾರ ಬೇಕಾಗಿದ್ದು, ಈ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಯವರ ಸಮಯ ಕೇಳಿದ್ದೇನೆ. ಸರ್ವ ಪಕ್ಷಗಳು ಒಪ್ಪಿದರೆ ಅವ ರನ್ನೂ ಕರೆದೊಯ್ಯು ತ್ತೇನೆ. ಪ್ರತಿಭಟನೆ ಕೈಬಿಡುವಂತೆ ಕಬ್ಬು ಬೆಳೆಗಾರರಲ್ಲಿ ಮನವಿ ಮಾಡುತ್ತಿದ್ದೇನೆ.

ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ