ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Fraud Case: ಮನಿ ಡಬ್ಲಿಂಗ್, ಸಬ್ಸಿಡಿ ಲೋನ್ ಕೊಡಿಸುವುದಾಗಿ ನಂಬಿಸಿ ವಂಚನೆ: ಮೂವರ ಬಂಧನ

Fraud Case: ಮನಿ ಡಬ್ಲಿಂಗ್ ಹಾಗೂ ಸಬ್ಸಿಡಿ ಲೋನ್ ಕೊಡಿಸುತ್ತೇನೆ ಎಂದು ನಂಬಿಸಿ ಬಹುಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ನಗರದ ಪ್ರಿಯಾಂಕ ಮಹಿಳಾ ಪತ್ತಿನ ಸಹಕಾರ ಸಂಘದ ಐದು ಜನರ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಮನಿ ಡಬ್ಲಿಂಗ್, ಸಬ್ಸಿಡಿ ಲೋನ್ ಕೊಡಿಸುವುದಾಗಿ ವಂಚನೆ- ಮೂವರ ಅರೆಸ್ಟ್‌

ಬಂಧಿತ ಮೂವರು ಆರೋಪಿಗಳು.

Profile Siddalinga Swamy Feb 14, 2025 11:05 AM

ಹೊಸಪೇಟೆ: ಮನಿ ಡಬ್ಲಿಂಗ್ ಹಾಗೂ ಸಬ್ಸಿಡಿ ಲೋನ್ ಕೊಡಿಸುತ್ತೇನೆ ಎಂದು ನಂಬಿಸಿ ಬಹುಕೋಟಿ ರೂ. ವಂಚನೆ (Fraud Case) ಮಾಡಿದ್ದಾರೆ ಎಂದು ನಗರದ ಪ್ರಿಯಾಂಕ ಮಹಿಳಾ ಪತ್ತಿನ ಸಹಕಾರ ಸಂಘದ ಐದು ಜನರ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂಘದ ಅಧ್ಯಕ್ಷೆ ಪ್ರಿಯಾಂಕ ಜೈನ್ (33), ಫೀಲ್ಡ್ ವರ್ಕ‌ರ್ ವೆಂಕಟೇಶಲು (45), ಕಾರ್ಯದರ್ಶಿ ಎಚ್.ಎಂ. ಅಂದಾನಯ್ಯ (29) ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿ ಪ್ರಿಯಾಂಕ ಜೈನ್, ಮಹಿಳಾ ಪತ್ತಿನ ಸಹಕಾರ ಸಂಘದಿಂದ ಹಂತ ಹಂತವಾಗಿ ಹಣವನ್ನು ಕಟ್ಟಿಸಿಕೊಂಡು, ಎರಡು ತಿಂಗಳ ನಂತರ ಸರ್ಕಾರದಿಂದ ಸಬ್ಸಿಡಿ ಲೋನ್ ಕೊಡಿಸುತ್ತೇವೆ ಹಾಗೂ ಮತ್ತೊಂದು ಸ್ಟೀಮ್‌ನಲ್ಲಿ ಕಟ್ಟಿದ ಹಣಕ್ಕೆ 70 ದಿನಗಳಲ್ಲಿ ಹಣವನ್ನು ದ್ವಿಗುಣ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆಂದು ಆರೋಪಿಸಲಾಗಿದೆ. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಂದಾಜು 300 ಜನರಿಂದ 3 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಪರಸ್ತ್ರೀಗಾಗಿ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಬೆಂಗಳೂರು ಡಿವೈಎಸ್‌ಪಿ

ಬೆಂಗಳೂರು: ಡಿವೈಎಸ್‌ಪಿ ಗೋವರ್ದನ್‌ ತನ್ನ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಗೋವರ್ದನ್‌ ಮತ್ತು ಅವರ ತಂದೆ-ತಾಯಿಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (Crime news). ಪರಸ್ತ್ರೀಗಾಗಿ ಗೋವರ್ಧನ್‌ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾಗಿ ಅವರ ಪತ್ನಿ ಅಮೃತಾ ದೂರು ನೀಡಿದ್ದಾರೆ. ಮಾತ್ರವಲ್ಲ ಪತಿಯ ಜತೆಗೆ ಆತ್ಮೀಯವಾಗಿದ್ದ ಪ್ರೊಬೆಷನರಿ ಮಹಿಳಾ ಡಿವೈಎಸ್‌ಪಿ ವಿರುದ್ಧವೂ ಅಮೃತಾ ದೂರು ನೀಡಿದ್ದಾರೆ. ಇನ್ನು ಅತ್ತೆ ಸೀಮೆಎಣ್ಣೆ ಸುರಿದು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದೂ ಅವರ ಆರೋಪಿಸಿದ್ದಾರೆ. ಗೋವರ್ಧನ್‌ ಜತೆ ಆತ್ಮೀಯವಾಗಿರುವ ಪ್ರೊಬೆಷನರಿ ಮಹಿಳಾ ಡಿವೈಎಸ್‌ಪಿಗೆ ಮಕ್ಕಳಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Hubli News: 50 ವರ್ಷದ ಅಂಕಲ್ ಜತೆ 18ರ ಯುವತಿ ಪರಾರಿ; ಒಂದೂವರೆ ತಿಂಗಳು ಕಳೆದ್ರೂ ಪತ್ತೆಯಾಗದ ಜೋಡಿ!

ಪರಸ್ತ್ರೀಯೊಂದಿಗೆ ಸಲುಗೆಯಿಂದ ಇದ್ದಿದ್ದನ್ನು ವಿರೋಧಿಸಿದ್ದರಿಂದ ಗೋವರ್ದನ್‌ ಹಲ್ಲೆ ನಡೆಸಿದ್ದಾರೆಂತೆ. ಇತ್ತ ಗೋವರ್ದನ್‌ ಗೆಳತಿ ಅಮೃತಾಗೆ ಡಿವೋರ್ಸ್‌ ಕೊಡುವಂತೆಯೂ ಆಗ್ರಹಿಸುತ್ತಿದ್ದಳು ಎನ್ನವ ಆರೋಪವೂ ಕೇಳಿ ಬಂದಿದೆ. ಇದನ್ನು ಅತ್ತೆ-ಮಾವ ಬಳಿ ಹೇಳಿದಾಗ ಅವರೂ ಕೊಲೆಗೆ ಯತ್ನಿಸಿದ್ದಾರೆ ಎಂದು ಅಮೃತಾ ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.