Hubli News: 50 ವರ್ಷದ ಅಂಕಲ್ ಜತೆ 18ರ ಯುವತಿ ಪರಾರಿ; ಒಂದೂವರೆ ತಿಂಗಳು ಕಳೆದ್ರೂ ಪತ್ತೆಯಾಗದ ಜೋಡಿ!
Hubli News: ಹುಬ್ಬಳ್ಳಿಯಲ್ಲಿ ವಿಚಿತ್ರ ಲವ್ ಸ್ಟೋರಿ ಬೆಳಕಿಗೆ ಬಂದಿದೆ. ಯುವತಿ ನಾಪತ್ತೆಯಾಗಿ 40 ದಿನವಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ ಅಂಕಲ್ ಪ್ರಕಾಶ್ ಕೂಡ ನಾಪತ್ತೆಯಾಗಿದ್ದಾನೆ. ಮಗಳ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಪೋಷಕರು ತೀವ್ರ ದುಃಖದಲ್ಲಿದ್ದಾರೆ.
![ಹುಬ್ಬಳ್ಳಿಯಲ್ಲಿ 50 ವರ್ಷದ ಅಂಕಲ್ ಜತೆ 18ರ ಯುವತಿ ಪರಾರಿ!](https://cdn-vishwavani-prod.hindverse.com/media/original_images/Hubli.jpg)
![Profile](https://vishwavani.news/static/img/user.png)
ಹುಬ್ಬಳ್ಳಿ: 18 ವರ್ಷದ ಯುವತಿ ಜತೆ 50 ವರ್ಷದ ಅಂಕಲ್ ಲವ್ವಿ ಡವ್ವಿ ಶುರು ಮಾಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ಅಂಕಲ್‌ನ ಪ್ರೇಮ ಪಾಷದಲ್ಲಿ ಸಿಲುಕಿದ ಯುವತಿ ಹುಬ್ಬಳ್ಳಿಯಿಂದ (Hubli News) ಮಹಾರಾಷ್ಟ್ರ ಕೊಲ್ಹಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ. ಯುವತಿಯ ತಲೆಕೆಡೆಸಿ ಆಕೆಯೊಂದಿಗೆ ಅಂಕಲ್ ಊರು ಬಿಟ್ಟು ಪರಾರಿಯಾಗಿಯಾಗಿದ್ದು, ಇದರಿಂದ ಯುವತಿಯ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಜೋಡಿ ಓಡಿ ಹೋಗಿ 40 ದಿನಗಳಾದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಯುವತಿ ಮನೆಯವರು ಅಂಕಲ್ ವಿರುದ್ಧ ದೂರು ನೀಡಿದ್ದಾರೆ.
ಹುಬ್ಬಳ್ಳಿ ಚಾಲುಕ್ಯ ನಗರದ 18 ವರ್ಷದ ಯುವತಿ ಅದೇ ಏರಿಯಾದ 50 ವರ್ಷದ ಪ್ರಕಾಶ್ ಗೋಪಿ ಎಂಬಾತನ ತೆ ಓಡಿಹೋಗಿದ್ದಾಳೆ ಎನ್ನಲಾಗಿದೆ. ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂಕಲ್ ಆಕೆಯ ತಲೆ ಕೆಡಿಸಿದ್ದಾನೆ. ಯುವತಿಯ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ. ಅಂಕಲ್ ಪ್ರಕಾಶ್‌ಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ಎರಡು ಮೂರು ವರ್ಷದ ಹಿಂದೆ ಯುವತಿಯ ಹಿಂದೆ ಬಿದ್ದಿದ್ದ.
ಈ ವಿಚಾರವಾಗಿ ಕಳೆದ ವರ್ಷ ಪ್ರಕಾಶ್ ಮೇಲೆ ಪೋಕ್ಸೊ ಪ್ರಕರಣ ಸಹ ದಾಖಲಾಗಿತ್ತು. ಇದಾದ ಬಳಿಕ ಇತ್ತೀಚೆಗೆ ಯುವತಿಯು ತನ್ನ ಅಜ್ಜಿಯ ಮನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಾಸವಿದ್ದಳು. ಜನವರಿ 3 ರಂದು ಯುವತಿ ಅಜ್ಜಿ ಮನೆಯಿಂದ ಕಾಣೆಯಾಗಿದ್ದಳು. ಅಲ್ಲಿಂದಲೇ ಅಂಕಲ್ ಕರೆದುಕೊಂಡು ಹೋಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಯುವತಿ ನಾಪತ್ತೆಯಾಗಿ 40 ದಿನವಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮತ್ತೊಂದೆಡೆ ಅಂಕಲ್ ಪ್ರಕಾಶ್ ಕೂಡ ನಾಪತ್ತೆಯಾಗಿದ್ದಾನೆ. ಮಗಳ ಬಗ್ಗೆ ಯಾವುದೇ ಮಾಹಿತಿ ಸಿಗದಿರುವುದಕ್ಕೆ ಪೋಷಕರು ಕಳೆದ ಒಂದು ತಿಂಗಳಿಂದ ಊಟ , ನಿದ್ದೆ ಬಿಟ್ಟು ಕಣ್ಣಿರು ಹಾಕುತ್ತಿದ್ದಾರೆ.
ಕೊಪ್ಪಳದಲ್ಲಿ ಭೀಕರ ಅಪಘಾತ; ಗೂಡ್ಸ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಜೀವ ದಹನ
ಕೊಪ್ಪಳ: ಸಿಮೆಂಟ್ ಮಿಕ್ಸರ್ ವಾಹನ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸ್ಥಳದಲ್ಲೇ ಸಜೀವ ದಹನವಾಗಿರುವುದು ಜಿಲ್ಲೆಯ ಕುಷ್ಟಗಿ ತಾಲೂಕಿನ ನಂದಾಪುರ ಬಳಿ ನಡೆದಿದೆ. ವಾಹನಗಳ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನದಲ್ಲಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವವಾಗಿ ದಹನಗೊಂಡಿದ್ದಾರೆ. ಮೃತರನ್ನು ತೊಡಕಿ ಗ್ರಾಮದ ಸಿದ್ದಪ್ಪ (23) ಮತ್ತು ಅಂಜಪ್ಪ (30) ಎಂದು ಗುರುತಿಸಲಾಗಿದೆ. ಮೃತರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ತೊಡಗಿ ಗ್ರಾಮದ ಮೂಲದವರು ಎಂದು ತಿಳಿದು ಬಂದಿದೆ. ಘಟನೆ ಕುರಿತು ಕುಷ್ಟಗಿ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Microfinance ordinance: ಮೈಕ್ರೋ ಫೈನಾನ್ಸ್‌ಗಳು ಸಾಲಕ್ಕೆ ಭದ್ರತೆ ಕೇಳುವಂತಿಲ್ಲ, ನಿಯಮ ಮೀರಿದ್ರೆ 10 ವರ್ಷ ಜೈಲು, 5 ಲಕ್ಷ ದಂಡ!