ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pravasi Prapancha: ಕ್ಲಾಸ್‌ಮೇಟ್‌ ಆಗಿದ್ದವರು ಕ್ಲಾಸ್‌ ಒನ್‌ ಸಂಸ್ಥೆ ಕಟ್ಟಿದರು; ದಶಕದ ಸಂಭ್ರಮದಲ್ಲಿ ಫನ್‌ಸ್ಟೇ

Funstay: ಕಳೆದ 10 ವರ್ಷಗಳಿಂದ ಪ್ರವಾಸಿಗರ ನೆಚ್ಚಿನ ಆಯ್ಕೆಯಾಗಿ ಫನ್‌ಸ್ಟೇ ಟ್ರಾವೆಲ್‌ ಏಜೆನ್ಸಿ ಬೆಳೆದಿದೆ. ಫನ್‌ಸ್ಟೇ ಹುಟ್ಟಿನ ಹಿಂದೆ ನಿತಿನ್‌ ಅಗರ್‌ವಾಲ್‌ ಮತ್ತು ಮಹೀಮ್‌ ಮೆಹ್ತಾ ಎಂಬ ಗೆಳೆಯರ ಜಾದೂ ಇದೆ. ಇವರು ಚೆನ್ನೈನಲ್ಲಿ ಒಟ್ಟಿಗೆ ಓದಿ, ವಿದೇಶದಲ್ಲಿ ದುಡಿದು, ದೇಶ ವಿದೇಶಗಳನ್ನು ಸುತ್ತಿ ಫನ್‌ಸ್ಟೇ ಹುಟ್ಟು ಹಾಕಿದ್ದಾರೆ. ಈ ಟ್ರಾವೆಲ್‌ ಏಜೆನ್ಸಿಯ ವಿವರ ಇಲ್ಲಿದೆ.

ಫನ್‌ಸ್ಟೇ-ಇದು ಪ್ರವಾಸಿಗರ ಆಪ್ತಮಿತ್ರ

Profile Ramesh B Jul 7, 2025 7:50 PM

ಸುತ್ತಾಟದಲ್ಲಿ ನಿಜಕ್ಕೂ ಮಜವಿದೆ. ಅಲೆಮಾರಿತನ ಮೈ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಎಲ್ಲ ಜಂಜಾಟಗಳಿಂದ ನಮ್ಮನ್ನು ಹೊರಕ್ಕೆಳೆದು ತರುವ ಶಕ್ತಿ ಪ್ರವಾಸಕ್ಕಿದೆ. ಅಷ್ಟೈಶ್ವರ್ಯಗಳಿದ್ದರೂ ನಮ್ಮಲ್ಲಿ ಸುತ್ತುವ ಖಯಾಲಿ ಇಲ್ಲವೆಂದರೆ ಅದು ವ್ಯರ್ಥ. ʼದೇಶ ಸುತ್ತಬೇಕು ಕೋಶ ಓದಬೇಕುʼ ಎಂಬುದು ಸಾರ್ವಕಾಲಿಕ ಸತ್ಯ. ಅದೆಂದಿಗೂ ಕ್ಲೀಷೆಯಾಗುವುದಿಲ್ಲ. ವಿದೇಶ ಸುತ್ತುವುದು ಎಂದರೆ ಅದು ಆಡಂಬರದ ಪ್ರದರ್ಶನವಲ್ಲ. ಒಣ ಪ್ರತಿಷ್ಠೆಯೂ ಅಲ್ಲ. ಅದೊಂದು ದಿವ್ಯ ಅನುಭೂತಿ. ಮನಸ್ಥಿತಿ ಮತ್ತು ಸ್ವಲ್ಪ ಮನಿ ಸ್ಥಿತಿ ಚೆನ್ನಾಗಿದ್ದರೆ ವಿದೇಶಕ್ಕೆ ಹಾರುವ ಕನಸಿಗೆ ರೆಕ್ಕೆ ಕಟ್ಟಬಹುದು. ಅಂದಹಾಗೆ ಈಗೆಲ್ಲ ವಿದೇಶಕ್ಕೆ ಹೋಗಲು, ಜಗದ ವಿಸ್ಮಯಗಳನ್ನು ಅಂಗೈಲಿಟ್ಟು ನೋಡಲು ಅವಕಾಶಗಳಿವೆ. ವಿಮಾನದಲ್ಲಿ ಕೂರಿಸಿ, ಜಗತ್ತನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಟ್ರಾವೆಲ್‌ ಏಜೆನ್ಸಿಗಳಿವೆ. ಈಗ ಮಧ್ಯಮ ವರ್ಗದ ಜನರೂ ವಿದೇಶ ನೋಡಬಹುದು. ಅಂಥ ಟ್ರಾವೆಲ್‌ ಏಜೆನ್ಸಿಗಳ ಪೈಕಿ ಫನ್‌ ಸ್ಟೇ ನಂಬರ್‌ ಒನ್‌! ಮತ್ತು ದಿ ಬೆಸ್ಟ್.‌ ಕಳೆದ ಹತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜನ ಮನ್ನಣೆಗಳಿಸಿದೆ. ಸಾವಿರಾರು ಜನರನ್ನು ವಿದೇಶಗಳಿಗೆ ಕರೆದೊಯ್ದಿದೆ. ಹೋಗಿ ಬಂದವರ ಮುಖದಲ್ಲಿ ಸಂತೃಪ್ತಿ ಮತ್ತು ಸಂತಸವನ್ನು ಹುಟ್ಟುಹಾಕಿದೆ. ಫನ್‌ಸ್ಟೇ (Funstay) ಹುಟ್ಟಿನ ಹಿಂದೆ ನಿತಿನ್‌ ಅಗರ್‌ವಾಲ್‌ ಮತ್ತು ಮಹೀಮ್‌ ಮೆಹ್ತಾ ಎಂಬ ಗೆಳೆಯರ ಜಾದೂ ಇದೆ. ಚೆನ್ನೈನಲ್ಲಿ ಒಟ್ಟಿಗೆ ಓದಿ, ವಿದೇಶದಲ್ಲಿ ದುಡಿದು, ದೇಶ ವಿದೇಶಗಳನ್ನು ಸುತ್ತಿ ಫನ್‌ಸ್ಟೇ ಹುಟ್ಟು ಹಾಕಿದ್ದಾರೆ. ಅವರ ಕೂಸಿಗೆ ಈಗ ದಶಕದ ಸಂಭ್ರಮ.

Funstay 6

ಗೆಳೆಯರ ಜಾದೂ

ಹೆಗಲಿಗೆ ಹೆಗಲು ಕೊಡುವ ಗೆಳೆಯರಿದ್ದರೆ ಅಸಾಧ್ಯವಾದ್ದನ್ನು ಸಾಧಿಸಬಹುದು. ʼಗೆಳೆಯರಿರಲಿ ಈ ಬಾಳಿನಲಿ.. ಗೆಳೆಯರಿರಲಿ ಕೊನೆತನಕʼ ಎಂಬ ಸಾಲು ಅಕ್ಷರಶಃ ಸತ್ಯ. ಕನಸನ್ನು ನನಸು ಮಾಡಲು ಶಕ್ತಿ, ಶ್ರಮ ಮತ್ತು ಪ್ರಯತ್ನ ಬೇಕು. ಅದರ ಜತೆಗೆ ಭರವಸೆಯ ಕೈಯೊಂದು ಬೇಕು. ಗೆದ್ದಾಗ ಬೆನ್ನುತಟ್ಟಲು ಮತ್ತು ಬಿದ್ದಾಗ ಹಿಡಿದು ಮೇಲಕ್ಕೆತ್ತಲು. ಈ ಜೋಡಿ ಜೀವಗಳು ಮೋಡಿ ಮಾಡಿವೆ. ಕ್ಲಾಸ್‌ಮೇಟ್‌ ಮತ್ತು ರೂಮ್‌ಮೇಟ್‌ಗಳಾಗಿದ್ದ ಸ್ನೇಹಿತರು ಕ್ಲಾಸ್‌ ಒನ್‌ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಹದಿನೈದು ವರ್ಷಗಳ ಹಿಂದೆ ಚೆನ್ನೈನಲ್ಲಿ ಎಂಜಿನಿಯರ್‌ ಪದವಿ ಓದುತ್ತಿದ್ದ ನಿತಿನ್‌ ಅಗರ್‌ವಾಲ್‌ ಮತ್ತು ಮಹೀಮ್‌ ಮೆಹ್ತಾ ಫನ್‌ಸ್ಟೇ ರೂವಾರಿಗಳು. ಅದು ಅವರದ್ದೇ ಕನಸಿನ ಕೂಸು. ಅವರ ಪ್ರಯತ್ನದ್ದೇ ಫಲ. ಕಾಲೇಜು ದಿನಗಳಲ್ಲೇ ಅತ್ಯಾಪ್ತರಾಗಿದ್ದ ನಿತಿನ್‌ ಮತ್ತು ಮಹೀಮ್‌ ಕನಸುಗಾರರು. ಖಾಲಿ ಕನಸು ಕಾಣುವ ಜಾಯಮಾನ ಅವರದ್ದಲ್ಲ. ಅದನ್ನು ಶತಾಯುಗತಾಯ ನನಸು ಮಾಡಿಯೇ ತೀರುತ್ತಿದ್ದರು. ಹಾಗೆ ಕಂಡ ಕನಸೇ ಇಂದು ಫನ್‌ಸ್ಟೇ ಮೂಲಕ ನನಸಾಗಿ ಕಣ್ಣ ಮುಂದಿದೆ. ನಿತಿನ್‌ ಅವರದ್ದು ಬ್ಯುಸಿನೆಸ್‌ ಕುಟುಂಬ. ಮಹೀಮ್‌ ಅವರದ್ದು ಸ್ವಂತ ದುಡಿಮೆ. ಆದರೆ ಇಬ್ಬರ ದಾರಿ ಒಂದೇ. ಸದಾ ಹೊಸ ಸಾಹಸಗಳತ್ತ ಹೆಜ್ಜೆ ಹಾಕುವ ಪ್ರವೃತ್ತಿಯವರು. ಸ್ಕಾಟ್‌ಲ್ಯಾಂಡ್‌ನಲ್ಲಿ ಎಂಬಿಎ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಿತಿನ್‌ ಮತ್ತು ಕೈ ತುಂಬಾ ದುಡಿಮೆಯಿದ್ದ ಮಹೀಮ್ ಎಲ್ಲವನ್ನು ಬಿಟ್ಟು‌ ಟ್ರಾವೆಲ್‌ ಕಂಪನಿಯ ಹುಟ್ಟಿಗೆ ನಿಂತರು. ಇಬ್ಬರೂ ತಿರುಗಾಲ ತಿಪ್ಪರಾದ್ದರಿಂದ ಅವರಲ್ಲಿ ಆ ಅಭಿರುಚಿಯಿತ್ತು. ಐವತ್ತು ದೇಶಗಳಿಗೆ ಒಟ್ಟಿಗೆ ಹೋಗಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಒಂದು ತಿಂಗಳಮಟ್ಟಿಗೆ ಯುರೋಪ್‌ ಪ್ರವಾಸಕ್ಕೆ ಹೋಗಿದ್ದ ಇಬ್ಬರು ಅಲ್ಲಿ ಇಷ್ಟಬಂದಂತೆ ಅಡ್ಡಾಡಿದರು. ಸ್ಥಳೀಯರೊಂದಿಗೆ ಬೆರೆತರು. ಅಲ್ಲಿಯೇ ಕನಸಿನ ಬೀಜಾಂಕುರವಾಯಿತು. ಮೊದಮೊದಲು ಹೊಟೇಲ್‌ ಬುಕ್ಕಿಂಗ್‌ಗಾಗಿ ಹುಟ್ಟಿಕೊಂಡ ಸಂಸ್ಥೆ ಟ್ರಾವೆಲ್‌ ಏಜೆನ್ಸಿಯಾಗಿ ಕವಲೊಡೆದು ಸಾಧಿಸಿತು. ಇಬ್ಬರೂ ಎಷ್ಟೋ ಬಾರಿ ಕೈ ಸುಟ್ಟುಕೊಂಡಿದ್ದಾರೆ. ಕಷ್ಟ, ನಷ್ಟ ಅನುಭವಿಸಿದ್ದಾರೆ. ಆದರೆ ವಿಚಲಿತರಾಗಲಿಲ್ಲ. ಫನ್‌ ಸ್ಟೇ ಉನ್ನತಿಗಾಗಿ ಹೊಸ ಹೊಸ ಅವತಾರ ತಾಳಿ ಇಂದು ಸಂಸ್ಥೆಯನ್ನು ಲಾಭದಲ್ಲಿಇರಿಸಿದ್ದಾರೆ.‌ ಈಗಲೂ ಅವರಿಗೆ ಸಾಧನೆಯದ್ದೇ ಧ್ಯಾನ. ಇದು ಗೆಳೆಯರಿಬ್ಬರ ಕಮಾಲ್!

Funstay 1

ಫನ್‌ಸ್ಟೇ ಹುಟ್ಟು

2015ರಲ್ಲಿ ನಿತಿನ್‌ ಅಗರ್‌ವಾಲ್ ಮತ್ತು ಮಹೀಮ್ ಮೆಹ್ತಾ‌ ಎಂಬ ಅಪ್ಪಟ ಗೆಳೆಯರ ಕನಸಿನ ಕೂಸಾಗಿ ಸ್ಥಾಪನೆಗೊಂಡ ಫನ್‌ ಸ್ಟೇ ಈಗ ದಶಕದ ಸಂಭ್ರಮದಲ್ಲಿದೆ. ಸಂಸ್ಥೆಯ ಏಳ್ಗೆಗಾಗಿ ಇಬ್ಬರೂ ಕಾಯ, ವಾಚಾ , ಮನಸಾ ಶ್ರಮಿಸಿದ್ದಾರೆ. ಫನ್‌ ಸ್ಟೇ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಹತ್ತಾರು ಮಂದಿಗೆ ಉದ್ಯೋಗ ನೀಡಿದೆ. ಸಾವಿರಾರು ಜನರಿಗೆ ದೇಶ ವಿದೇಶಗಳನ್ನು ತೋರಿಸಿದೆ. ಆದರ, ಆತಿಥ್ಯ ಮತ್ತು ಪ್ರೀತಿ ಎಂದರೆ ಫನ್‌ಸ್ಟೇ ಎಂಬುವಷ್ಟರಮಟ್ಟಿಗೆ ಸಂಸ್ಥೆಯ ಖ್ಯಾತಿ ಗಗನ ಚುಂಬಿಸಿದೆ. ಇಬ್ಬರು ಗೆಳೆಯರ ಸಾಹಸ ಮತ್ತು ಸಾಧನೆಯಿಂದಾಗಿ ಸಂಸ್ಥೆ ದೇಶದ ಪ್ರಸಿದ್ದ ಟ್ರಾವೆಲ್‌ ಏಜೆನ್ಸಿಗಳ ಪೈಕಿ ಅಗ್ರಸ್ಥಾನವನ್ನು ಗಳಿಸಿದೆ. ಫನ್‌ಸ್ಟೇ ಜತೆಗೆ ಪರಿಣತರ ತಂಡವಿದೆ. ಅದೆಷ್ಟೋ ಪ್ರವಾಸವನ್ನು ಸ್ವತಃ ಪ್ರವಾಸಿ ಪ್ರಿಯರಾದ ನಿತಿನ್‌ ಮತ್ತು ಮಹೀಮ್‌ ಯೋಜಿಸುತ್ತಾರೆ. ಪ್ರವಾಸ ಮುಗಿಯುವ ಅಷ್ಟೂ ಹೊತ್ತು ಪ್ರವಾಸಿಗರ ಜತೆಗಿದ್ದು ಅಗತ್ಯ ಸಲಹೆ ಮತ್ತು ಸಹಾಯವನ್ನು ಒದಗಿಸುತ್ತಾರೆ. ಅವಿಸ್ಮರಣೀಯ ನೆನಪುಗಳನ್ನು ನೀಡುತ್ತಾರೆ. ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡು ಗ್ರಾಹಕರಿಗೆ ಮೌಲ್ಯ ಸೇವೆಗಳನ್ನು ನೀಡುವುದು ಫನ್‌ಸ್ಟೇ ಸಂಸ್ಥೆಯ ಮೂಲ ಧ್ಯೇಯವಾಗಿದೆ. ಏರ್ ಲೈನ್ ಟಿಕೆಟ್ ಬುಕಿಂಗ್, ಗ್ರೌಂಡ್ ಟ್ರಾನ್ಸ್‌ ಪೋರ್ಟ್‌, ಹೊಟೇಲ್ ಬುಕಿಂಗ್, ವೀಸಾ ಮತ್ತು ಪಾಸ್‌ ಪೋರ್ಟ್‌ ಸೇವೆ, ವಿದೇಶಿ ವಿನಿಮಯ ಪ್ರಯಾಣ, ಟ್ರಾವೆಲ್ ಇನ್ಶೂರೆನ್ಸ್ ಸೇವೆ ಹೀಗೆ ಹತ್ತಾರು ರೀತಿಯಲ್ಲಿ ಫನ್‌ ಸ್ಟೇ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಏಕೈಕ ಶಾಖೆಯ ಮೂಲಕವೇ ಕಳೆದ ಹತ್ತು ವರ್ಷಗಳಿಂದ ಫನ್‌ ಸ್ಟೇ ಪ್ರವಾಸಿಗರ ಮನಸ್ಸನ್ನು ಗೆದ್ದಿದೆ. ʼನಮಗೆ ಹತ್ತಾರು ಶಾಖೆಗಳು ಬೇಡ. ಮುಂದೆ ಅದರ ಆಲೋಚನೆ ಖಂಡಿತ ಇದೆ. ಆದರೆ ಇರುವ ಶಾಖೆಯ ಮೂಲಕವೇ ಅದ್ಭುತ ಸೇವೆಯನ್ನು ನೀಡುತ್ತೇವೆʼ ಎನ್ನುತ್ತಾರೆ ನಿತಿನ್‌ ಮತ್ತು ಮಹೀಮ್.

ಈ ಸುದ್ದಿಯನ್ನೂ ಓದಿ: Pravasi Prapancha: ಕೆ.ಮೋಹನ್ ಸುಂದರ್ ಎಂಬ ಕನಸುಗಾರನ ಅಚ್ಚರಿಯ ಸಾಧನೆ! ಜಗತ್ತು ಸುತ್ತುವ ಕನಸಿಗೆ ರೆಕ್ಕೆ ಕಟ್ಟುವ ಟ್ರಾವೆಲ್ ಮಾರ್ಟ್

Funstay 2

ಫನ್‌ ಸ್ಟೇ ಇದು ಪ್ರವಾಸಿಗರ ಆಪ್ತಮಿತ್ರ

ಸತತ ಹತ್ತು ವರ್ಷಗಳಿಂದ ಫನ್‌ ಸ್ಟೇ ಸಾವಿರಾರು ಗ್ರಾಹಕರ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರತಿ ಹೆಜ್ಜೆಯಲ್ಲೂ ಗೆಲುವು ಸಾಧಿಸಿದೆ. ವಿದೇಶ ಸುತ್ತುವ ಜನರ ಕನಸುಗಳಿಗೆ ರೆಕ್ಕೆ ಕಟ್ಟಿ ಅವರನ್ನು ಸಂತಸದ ಉಯ್ಯಾಲೆಯಲ್ಲಿ ಜೀಕಿಸಿದೆ. ಮೈ ಮನಸ್ಸನ್ನು ಪ್ರಫುಲ್ಲಗೊಳಿಸಿದೆ. ಫನ್‌ ಸ್ಟೇ ಬ್ಯುಸಿನೆಸ್‌ ಮೈಂಡ್‌ನ ಸಂಸ್ಥೆಯಲ್ಲ. ದುಡ್ಡು ಮಾಡುವುದೂ ಅದರ ಉದ್ದೇಶವಲ್ಲ. ಜಗತ್ತಿನ ಅಷ್ಟೂ ವಿಸ್ಮಯವನ್ನು ಮಧ್ಯಮ ವರ್ಗದ ಜನರಿಗೆ ಬೊಗಸೆಯಲ್ಲಿಡಿದು ತೋರಿಸುವ ಆಸೆಯಷ್ಟೇ.. ಬಜೆಟ್ ಸ್ನೇಹಿ ಸಂಸ್ಥೆ ಇದಾಗಿದ್ದು, ಪ್ರತಿ ಪ್ರಯಾಣವನ್ನೂ ಅಚ್ಚುಕಟ್ಟಾಗಿ ಯೋಜಿಸುತ್ತದೆ. ಸಂಸ್ಥೆಯಲ್ಲಿ ಪ್ರಯಾಣದ ಕುರಿತು ಅಪಾರ ಅನುಭವವಿರುವ ಮತ್ತು ಟೂರಿಸಂ ವಿಷಯದಲ್ಲಿ ಪದವಿಗಳಿಸಿರುವ ತಜ್ಞರಿದ್ದಾರೆ. ಅವರ ಮಾರ್ಗದರ್ಶನದಲ್ಲೇ ಪ್ರವಾಸ ರೂಪುಗೊಳ್ಳುತ್ತದೆ. ಆದರೆ ಪ್ರತಿ ಪ್ರವಾಸದಲ್ಲೂ ನಿತಿನ್‌ ಮತ್ತು ಮಹೀಮ್‌ ಅವರದ್ದೇ ಲೀಡರ್‌ಶಿಪ್.‌ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆಂಬ ಹಮ್ಮು ಬಿಮ್ಮು ಇಲ್ಲದೆ ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ. ನಗು ಮುಖದೊಂದಿಗೆಯೇ ಮಾತಿಗಿಳಿಯುತ್ತಾರೆ. ಅತ್ಯಂತ ಪ್ರೀತಿಯಿಂದ ಎಲ್ಲ ಜವಾಬ್ದಾರಿಗಳಿಗೂ ಹೆಗಲು ಕೊಡುತ್ತಾರೆ. ಅದು ಅವರಿಗಿರುವ ವೃತ್ತಿ ಪ್ರೀತಿ ಮತ್ತು ವೃತ್ತಿ ಗೌರವ. ಫನ್‌ ಸ್ಟೇ ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತದೆ. 24/7 ಸೇವೆ ನೀಡುವಲ್ಲಿ ಒಂದು ದಶಕದಿಂದ ನಿರತವಾಗಿದೆ. ಗ್ರೂಪ್ ಟ್ರಿಪ್, ಕಾರ್ಪೋರೇಟ್ ಪ್ರಯಾಣ ನಿರ್ವಹಣೆ, ಪಾಸ್ ಪೋರ್ಟ್ ಮತ್ತು ವೀಸಾದಲ್ಲಿ ಗ್ರಾಹಕರಿಗೆ ಅಗತ್ಯ ನೆರವನ್ನು ನೀಡುತ್ತದೆ. ಫನ್‌ ಸ್ಟೇ ಸಂಸ್ಥೆಯ ವಿಶೇಷತೆ ಎಂದರೆ ಅವರು ಮಳೆಗಾಲದ ರಜೆಯಲ್ಲಿ ಅತ್ಯದ್ಭುತವಾದ ಪ್ಯಾಕೆಜ್‌ ಟೂರ್‌ ಯೋಜಿಸುತ್ತಾರೆ. ಜಗತ್ತಿನ ಹತ್ತಾರು ದೇಶಗಳನ್ನು ಸುತ್ತಿಸುತ್ತಾರೆ. ಗ್ರಾಹಕರು ಮಳೆಗಾಲಕ್ಕಾಗಿಯೇ ಕಾದು ಫನ್‌ ಸ್ಟೇ ಮೂಲಕ ವಿದೇಶಗಳಿಗೆ ಹಾರಿ ಅಲ್ಲಿನ ಸೊಬಗನ್ನು ಸವಿಯುತ್ತಾರೆ. ಜುಲೈ ತಿಂಗಳ ಮೊದಲ ವಾರದಿಂದ ಮಳೆಗಾಲದ ಪ್ರವಾಸ ಪ್ರಾರಂಭವಾಗಿದೆ. ನಿತಿನ್‌ ಮತ್ತು ಮಹೀಮ್‌ ಜೋಡಿ ಜೀವಗಳು ಸದ್ಯ ವಿದೇಶದಲ್ಲಿ ತಮ್ಮ ಗ್ರಾಹಕರಿಗೆ ಬೆರಗಿನ ಲೋಕ ತೋರಿಸುತ್ತಾ ಅಚ್ಚರಿಗೆ ಕೆಡವಿದ್ದಾರೆ.

Funstay 3

Experience Certainity!

ಇದು ಫನ್ ಸ್ಟೇ ಸಂಸ್ಥೆಯ ಧ್ಯೇಯ ವಾಕ್ಯ! ಹಾಗಂದ್ರೇನು? ಅಂದರೆ ಇಲ್ಲಿ ನಿಮಗೆ ಕೊಡುವ ಯಾವ ಭರವಸೆಯೂ ಹುಸಿಯಾಗುವುದಿಲ್ಲ. ಟ್ರಿಪ್ ಹೊರಡುವ ಮುನ್ನ ಯಾವಯಾವ ಸೌಲಭ್ಯ ಮತ್ತು ಪ್ಯಾಕೇಜ್ ಗಳನ್ನು ಕೊಡುತ್ತೇವೆ ಎಂದು ಹೇಳಿರುತ್ತಾರೋ ಅವೆಲ್ಲವನ್ನೂ ಚಾಚೂ ತಪ್ಪದೆ ನೀಡುವುದು ಫನ್ ಸ್ಟೇ ತಂಡದ ಹೆಗ್ಗಳಿಕೆ. ಇದೇ ಕಾರಣದಿಂದ ಇದುವರೆಗೂ ಯಾವುದೇ ಗ್ರಾಹಕ ಫನ್ ಸ್ಟೇ ಬಗ್ಗೆ ಅಸಮಾಧಾನ ತೋರಿಸಿಲ್ಲ. ಒಮ್ಮೆ ಫನ್ ಸ್ಟೇ ಜೊತೆಗೆ ಪ್ರವಾಸ ಹೋದವರು ಬೇರೆ ಟೂರ್ ಆರ್ಗನೈಸರ್ ಗಳ ಕಡೆ ಯೋಚಿಸುವುದಿಲ್ಲ. ಫನ್ ಸ್ಟೇ ಅಂದರೆ ನಂಬಿಕೆಗೆ ಇನ್ನೊಂದು ಹೆಸರು. ಅನುಮಾನವಿದ್ದಲ್ಲಿ ಗೂಗಲ್ ರಿವ್ಯೂಗಳನ್ನೊಮ್ಮೆ ನೋಡಿ. ಅಷ್ಟೇ ಅಲ್ಲ. ಇವರು ಕೊಡುವಂಥ ಅದ್ಭುತ ಡಿಸ್ಕೌಂಟ್ ಆಫರ್ ಗಳನ್ನು ಇದುವರೆಗೂ ಇನ್ಯಾರೂ ನೀಡಿಲ್ಲ. ಮುಂದೆಯೂ ನೀಡುವುದು ಅಸಾಧ್ಯ.

Funstay 4

ಫನ್‌ಸ್ಟೇ‌ ಭರ್ಜರಿ ಆಫರ್

ಫನ್‌ಸ್ಟೇ ಸಂಸ್ಥೆಯು ಪ್ರವಾಸಿಗರನ್ನು ಅವರಿಷ್ಟದ ತಾಣಕ್ಕೆ ಕರೆದೊಯ್ಯಲು ಸಜ್ಜಾಗಿದೆ. ಜುಲೈ 1 ರಿಂದ ಆಗಸ್ಟ್‌ 31 ರವರೆಗೆ ಜಗತ್ತನ್ನು ಸುತ್ತಿಸಲಿದೆ. ಮಳೆಗಾಲದ ರಜೆಯ ಸಂಭ್ರಮವನ್ನು ಕಳೆಯಲು ಇಚ್ಛಿಸುವವರು ಕನಸಿನ ರೆಕ್ಕೆ ಕಟ್ಟಿಕೊಂಡು ವಿಮಾನದಲ್ಲಿ ಕೂರಬಹುದು. ಜಗದ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.

  • 6N7D ಬಾಲಿ ಪ್ರವಾಸ- 84,900/-
  • 6N7D ಸಿಂಗಾಪುರ&ಮಲೇಷಿಯಾ ಪ್ರವಾಸ-1,19,900/-
  • 6N7D ದುಬೈ&ಅಬುಧಾಬಿ ಪ್ರವಾಸ- 99,900/-
  • 8N9D ಜಪಾನ್‌ ಪ್ರವಾಸ-2,79,900/-
  • 7N8D ವಿಯೆಟ್ನಾಂ ಪ್ರವಾಸ-99,900/-
  • 5N6D ಜಾರ್ಜಿಯ ಪ್ರವಾಸ-1,29,900/-

image

ಫನ್‌ಸ್ಟೇ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ಅವರದ್ದು ಎಲ್ಲದರಲ್ಲೂ ಅಚ್ಚುಕಟ್ಟು. ನಿತಿನ್‌ ಅಗರ್‌ವಾಲ್‌ ಮತ್ತು ಮಹೀಮ್‌ ನೇತೃತ್ವದಲ್ಲಿ ನಾನು ಓಮನ್‌ ದೇಶಕ್ಕೆ ಹೋಗಿದ್ದೆ. ನಾಲ್ಕು ದಿನಗಳ ಪ್ರವಾಸ. ಇಡೀ ಯೋಜನೆಯನ್ನು ಅವರು ಅದ್ಭುತವಾಗಿ ರೂಪಿಸಿದ್ದರು. ವಿಸ್ಮಯವಾದ ತಾಣಗಳಿಗೆ ಕರೆದೊಯ್ದರು. ಪ್ರಶಾಂತವಾದ ಹೊಟೇಲು, ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು. ಒಂದು ಕ್ಷಣವೂ ಬೇಸರವಾಗದಂತೆ ನೋಡಿಕೊಂಡಿದ್ದು ಅವರಿಗೆ ಗ್ರಾಹಕರ ಮೇಲಿರುವ ಪ್ರೀತಿಯನ್ನು ತೋರುತ್ತದೆ. ವಿದೇಶ ಸುತ್ತುವ ಕನಸುಳ್ಳವರು ಫನ್‌ಸ್ಟೇಯನ್ನು ಆಯ್ಕೆ ಮಾಡಿಕೊಳ್ಳಬಹುದು.

-ಸಿ.ಟಿ. ರವಿ, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು
image

ನಾನು ಸಾಕಷ್ಟು ದೇಶಗಳಿಗೆ ಹೋಗಿದ್ದೇನೆ. ಆದರೆ ಇಂಡೋನೇಷಿಯಾದ ಬಾಲಿಯ ಪ್ರವಾಸದ ಗುಂಗಿನಿಂದ ಈಗಲೂ ಹೊರ ಬರಲಾಗುತ್ತಿಲ್ಲ. ಅದು ಅವಿಸ್ಮರಣೀಯವಾದ ಪ್ರವಾಸ. ಸಂಭ್ರಮ ಮನೆ ಮಾಡಿತ್ತು. ಅಲ್ಲಿನ ಪ್ರತಿ ತಾಣ, ಹೊಟೇಲ್ ಮತ್ತು ರುಚಿಯಾದ ಊಟ ಬಹಳ ಅಚ್ಚುಕಟ್ಟಾಗಿತ್ತು. ಫನ್‌ಸ್ಟೇ ರೂವಾರಿಗಳಾದ ನಿತಿನ್ ಅಗರ್ವಾಲ್ ಮತ್ತು ಮಹೀಮ್ ಇಡೀ ಪ್ರವಾಸವನ್ನು ಉತ್ತಮವಾಗಿ ಯೋಜಿಸಿದ್ದರು. ಗ್ರಾಹಕರ ಮೇಲೆ ಅವರಿಗಿರುವ ಅಪಾರ ಪ್ರೀತಿ ಮತ್ತು ಅವರು ನೀಡುವ ಸೇವೆ ಶ್ಲಾಘನಾರ್ಹ. ಮುಂದಿನ ವಿದೇಶ ಪ್ರವಾಸವಕ್ಕೆ ಖಂಡಿತವಾಗಿಯೂ ಫನ್‌ಸ್ಟೇ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

-ಜಯಮಾಲಾ, ಪ್ರಖ್ಯಾತ ಮತ್ತು ಹಿರಿಯ ಚಲನಚಿತ್ರ ನಟಿ
image

ನಿತಿನ್ ಅಗರ್ವಾಲ್ ನೇತೃತ್ವದ ಜಾರ್ಜಿಯಾ ಪ್ರವಾಸದ ದಿನಗಳು ಅದ್ಭುತವಾಗಿದ್ದವು. ಇಡೀ ಪ್ರವಾಸದ ಯಶಸ್ಸು ಫನ್ಸ್ಟೇಗೆ ಸಲ್ಲಬೇಕು. ಅವರ ಆದರ, ಆತಿಥ್ಯ ಮತ್ತು ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಜಗತ್ತು ತೋರಿಸುವುದರೊಂದಿಗೆ ನಮ್ಮೊಳಗೊಂದು ಭರವಸೆ ಮತ್ತು ಜೀವನಪ್ರೀತಿಯನ್ನು ಫನ್‌ಸ್ಟೇ ತುಂಬುತ್ತದೆ. ಹೆಸರಿಗೆ ತಕ್ಕಂತೆ ಇಡೀ ಪ್ರವಾಸದಲ್ಲಿ ಫನ್ನಿ ಮೊಮೆಂಟುಗಳೇ ಇದ್ದವು. ಬಹುಕಾಲ ನೆನಪಿನಲ್ಲಿ ಉಳಿಯುವ ಪ್ರವಾಸವನ್ನು ಆಯೋಜಿಸಿದ್ದಕ್ಕಾಗಿ ಇಡೀ ಫನ್‌ಸ್ಟೇ ತಂಡಕ್ಕೆ ಧನ್ಯವಾದಗಳು.

-ಭಾವನಾ ಬೆಳಗೆರೆ, ಸಂಪಾದಕಿ, ಹಾಯ್ ಬೆಂಗಳೂರ್! ವಾರಪತ್ರಿಕೆ

ಅಚ್ಚರಿಯ ಸಾಧನೆಗೆ ಪ್ರಶಸ್ತಿ, ಸನ್ಮಾನ

ಫನ್‌ಸ್ಟೇ ನೀಡುತ್ತಿರುವ ಅಮೂಲ್ಯ ಸೇವೆಗೆ ಹತ್ತಾರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಸನ್ಮಾನಗಳು ಸಂದಿವೆ.

ವಿಶ್ವವಾಣಿ ಸಂಸ್ಥೆ ಕನ್ನಡಿಗರಿಗೆ ವಿದೇಶದಲ್ಲಿ ಕೊಡ ಮಾಡುವ ಗ್ಲೋಬಲ್‌ ಅಚೀವರ್ಸ್‌ ಆಫ್‌ ದಿ ಇಯರ್‌ ಪ್ರಶಸ್ತಿಯು ಫನ್‌ಸ್ಟೇ ಮುಡಿಗೇರಿದೆ.

Funstay 5

ಫನ್‌ಸ್ಟೇ ಜತೆಗೆ ಜಗತ್ತು ಸುತ್ತುವ ಆಸೆಯೇ?

ನಿಮ್ಮ ಪ್ರವಾಸದ ಬುಕ್ಕಿಂಗ್‌ಗಳಿಗಾಗಿ ಈ ನಂಬರಿಗೆ ಕರೆ ಮಾಡಬಹುದು:

9902860849, 8296252335

ವಿಳಾಸ: 22ನೇ ಕ್ರಾಸ್‌ ರಸ್ತೆ, 1192/1, 24ನೇ ಮುಖ್ಯರಸ್ತೆ, ಎಚ್‌ಎಸ್‌ಆರ್‌ ಲೇಔಟ್‌, ಬೆಂಗಳೂರು ಕರ್ನಾಟಕ -560102

ಹೆಚ್ಚಿನ ಮಾಹಿತಿಗಾಗಿ: www.funstay.in, booking@funstay.in