#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Government Scheme: ಕಾರ್ಮಿಕರಿಗೆ ಬಂಪರ್‌ ಲಾಟರಿ; 3,000 ರೂ ಪಿಂಚಣಿ, 2 ಲಕ್ಷ ರೂ ಜೀವ ವಿಮೆ!

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಇ-ಶ್ರಮ್ ಯೋಜನೆಯನ್ನು ಇ-ಶ್ರಮ್ ಪೋರ್ಟಲ್ ಅನ್ನು ಸ್ಥಾಪಿಸಿದೆ. ಈ ಯೋಜನೆಯಡಿಯಲ್ಲಿ ಕಾರ್ಮಿಕರು ತಿಂಗಳಿಗೆ ಮೂರು ಸಾವಿರ ಪಿಂಚಣಿ ಮತ್ತು 2 ಲಕ್ಷ ರೂ ಜೀವ ವಿಮೆಯನ್ನು ಪಡೆಯಬಹುದು.

ಕಾರ್ಮಿಕರಿಗೆ ಗುಡ್‌ ನ್ಯೂಸ್;‌ 3 ಸಾವಿರ ಪಿಂಚಣಿ, 2 ಲಕ್ಷ ವಿಮೆ!

Government Scheme

Profile Deekshith Nair Jan 30, 2025 12:40 PM

ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಇ-ಶ್ರಮ್(E-Shram) ಯೋಜನೆ ಯೋಜನೆಯನ್ನು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷವಾಗಿ ಇ-ಶ್ರಮ್ ಪೋರ್ಟಲ್ ಅನ್ನು ಸ್ಥಾಪಿಸಿದೆ. ಈ ಪೋರ್ಟಲ್‌ ಮೂಲಕ(Government Scheme) ಕಾರ್ಮಿಕರು ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹದು.

ಇ-ಶ್ರಮ್ ಕಾರ್ಡ್ ಪಡೆಯುವ ಕಾರ್ಮಿಕರು 60 ವರ್ಷ ವಯಸ್ಸಿನ ನಂತರ ಪಿಂಚಣಿ, ಜೀವ ವಿಮೆ ಮತ್ತು ಅಂಗವೈಕಲ್ಯ ಸಂದರ್ಭದಲ್ಲಿ ಆರ್ಥಿಕ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್ eshram.gov.in ಮೂಲಕ ಇ-ಶ್ರಮ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದು.

ಇ-ಶ್ರಮ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?

  • ಅಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿ ಅಥವಾ ಕೆಲಸಗಾರ.
  • 16 ರಿಂದ 59 ವರ್ಷ ವಯಸ್ಸಾಗಿರಬೇಕು.
  • ಅರ್ಜಿದಾರರ ದೂರವಾಣಿ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.
  • ಆದಾಯ ತೆರಿಗೆ ಪಾವತಿಸದಿರುವವರು.

ಇ-ಶ್ರಮ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಹೇಗೆ?

  • ಇ-ಶ್ರಮ್ ಪೋರ್ಟಲ್ ತೆರೆಯಿರಿ https://eshram.gov.in/
  • ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ದೂರವಾಣಿ ಸಂಖ್ಯೆಯನ್ನು ನಮೂದಿಸಿ.
  • ಸ್ಕ್ರೀನ್ ಮೇಲೆ ಕೇಳಲಾದ ವೈಯಕ್ತಿಕ ಡೇಟಾವನ್ನು ನಮೂದಿಸಿ.
  • ಅಗತ್ಯವಿರುವ ಜಾಗದಲ್ಲಿ ನಿಮ್ಮ ವಿಳಾಸ ಮತ್ತು ಶಿಕ್ಷಣವನ್ನು ನಮೂದಿಸಿ.
  • ಉದ್ಯೋಗ, ವ್ಯವಹಾರ ಮತ್ಮಾತುಡಿದ ಕೆಲಸದ ಬಗ್ಗೆ ವಿವರಗಳನ್ನು ನೀಡಿ.
  • ನಿಮ್ಮ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ. ಈ OTP ಅನ್ನು ನಮೂದಿಸಿ ಮತ್ತು ಸಲ್ಲಿಸಿ.
  • ಇ-ಶ್ರಮ್ ಕಾರ್ಡ್ ಅನ್ನು ಸ್ಕ್ರೀನ್‌ ಮೇಲೆ ತೋರಿಸಲಾಗುತ್ತದೆ. ಇ-ಶ್ರಮ್ ಕಾರ್ಡ್ ಡೌನ್‌ಲೋಡ್ ಮಾಡಬಹುದು.

ಇ-ಶ್ರಮ್ ಕಾರ್ಡ್‌ನ ಪ್ರಯೋಜನಗಳು

  • 60 ವರ್ಷ ಪೂರೈಸಿದವರಿಗೆ ಮಾಸಿಕ 3,000 ಪಿಂಚಣಿ.
  • ಮರಣದ ನಂತರ ವಿಮಾ ರಕ್ಷಣೆ ಮೊತ್ತ ರೂ. 2,00,000, ಭಾಗಶಃ ಅಂಗವೈಕಲ್ಯವಿದ್ದಲ್ಲಿ ರೂ. 1,00,000 ಆರ್ಥಿಕ ನೆರವು.
  • ಅಪಘಾತದಿಂದಾಗಿ ಫಲಾನುಭವಿಯು ಮರಣ ಹೊಂದಿದರೆ, ಪತ್ನಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇ-ಶ್ರಮ್ ಕಾರ್ಡ್ ಪಡೆಯಲು ಅಗತ್ಯವಿರುವ ದಾಖಲೆಗಳು

  • ಕಾರ್ಮಿಕನ ಹೆಸರಿನಲ್ಲಿ ಬ್ಯಾಂಕ್ ಖಾತೆ
  • ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು
  • ಆಧಾರ್ ಕಾರ್ಡ್ ಮತ್ತು ಪಾನ್‌ ಕಾರ್ಡ್ ಕಡ್ಡಾಯ‌

ಈ ಸುದ್ದಿಯನ್ನೂ ಓದಿ:Delhi Elections: 50 ಸಾವಿರ ಸರ್ಕಾರಿ ಉದ್ಯೋಗ ಸೃಷ್ಟಿ, 1,700ಕ್ಕೂ ಹೆಚ್ಚು ಅನಧಿಕೃತ ಕಾಲೋನಿಗಳಿಗೆ ಮಾಲಿಕತ್ವದ ಹಕ್ಕು: ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ?

ಇ-ಶ್ರಮ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

  • ಇ-ಶ್ರಮ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ https://eshram.gov.in/
  • ಮುಖಪುಟದಲ್ಲಿ ಒನ್ ಸ್ಟಾಪ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ‘UAN ಬಳಸಿ ಲಾಗಿನ್ ಮಾಡಿ’ ಕ್ಲಿಕ್ ಮಾಡಿ.
  • ನಿಮ್ಮ UAN ಜನ್ಮ ದಿನಾಂಕ, ಕ್ಯಾಪ್ಚಾ ನಮೂದಿಸಿ ನಂತರ ‘OTP ರಚಿಸಿ’ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
  • ನಿಮ್ಮ ವಿವರಗಳನ್ನು ದೃಢೀಕರಿಸಿ ಮತ್ತು ‘ಪೂರ್ವವೀಕ್ಷಣೆ’ ಕ್ಲಿಕ್ ಮಾಡಿ ಮತ್ತು ನಂತರ ಸಲ್ಲಿಸು ಬಟನ್ ಒತ್ತಿರಿ.
  • ಇ-ಶ್ರಮ್ ಕಾರ್ಡ್ ಪರದೆಯ ಮೇಲೆ ಜನರೇಟ್ ಆಗುತ್ತದೆ. ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.