ಹಾಸನ: ಆರು ಜನ ಗಟ್ಟಿಮುಟ್ಟಾದ ಮಕ್ಕಳಿದ್ದರೂ ಈಕೆ ತನ್ನ ಕೊನೆಗಾಲವನ್ನು ಕಳೆದಿದ್ದು ಮಾತ್ರ ವೃದ್ಧಾಶ್ರಮದಲ್ಲಿ. ಹೆತ್ತ ತಾಯಿಗೆ ಒಂದೇ ಒಂದು ತುತ್ತು ಕೊಡದ ಮಕ್ಕಳು, ಇಳಿ ವಯಸ್ಸಿನಲ್ಲಿ ಸಾಕೋಕೆ ಆಗಲ್ಲ ಎಂದು ಹೆತ್ತ ತಾಯಿಯನ್ನೇ ವೃದ್ಧಾಶ್ರಮಕ್ಕೆ ತಳ್ಳಿದ್ದರು. ಬದುಕಿನ ಕೊನೆಗಾಲವನ್ನು ಆಶ್ರಮದಲ್ಲೇ ಕಳೆದಿದ್ದ ಈ ವೃದ್ಧೆ ಮಕ್ಕಳ ಕೊರಗಲ್ಲೇ ಸಾವನ್ನಪ್ಪಿದ್ದಾಳೆ. ತಾಯಿ ಇನ್ನಿಲ್ಲ ಎಂಬ ತಿಳಿಯುತ್ತಿದ್ದಂತೆ ವೃದ್ಧಾಶ್ರಮದತ್ತ ಓಡೋಡಿ ಬಂದ ಆರು ಮಕ್ಕಳು ಮತ್ತೊಂದು ಹೈಡ್ರಾಮ ನಡೆಸಿದ್ದಾರೆ. ತಾಯಿಯ ಶವಕ್ಕಾಗಿ ಹೊಡೆದಾಟವನ್ನೇ ನಡೆಸಿದ್ದಾರೆ. ಇಷ್ಟೆಲ್ಲಾ ನಡೆದಿದ್ದು ನಮ್ಮ ರಾಜ್ಯದ ಹಾಸನ ಜಿಲ್ಲೆಯಲ್ಲಿ(Hassan Mews).
ಮೃತ ವೃದ್ಧೆ ಹೆಸರು ಪಾರ್ವತಮ್ಮ. ಈಕೆ ಹಾಸನ ತಾಲ್ಲೂಕಿನ ಕವಳಿಕೆರೆ ಗ್ರಾಮದವರು. ಈ ತಾಯಿಗೆ ಒಟ್ಟು ಆರು ಜನ ಮಕ್ಕಳು. ಮೂರು ಗಂಡು, ಮೂರು ಹೆಣ್ಣು. ತಾಯಿಗೆ ವಯಸ್ಸಾಗ್ತಿದ್ದಂತೆ ಹೆತ್ತವಳು ಯಾರಿಗೂ ಬೇಡವಾಗಿದ್ಲು.. ನೋಡ್ಕೊಳ್ಳೋದಕ್ಕೆ ಆಗಲ್ಲ ಅಂತಾ ಬೀದಿಗೆ ತಳ್ಳಿದ್ರು. ಹೀಗಾಗಿ ದಿಕ್ಕು ಕಾಣದಂತಾದ ಜೀವ ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮ ಸೇರ್ಕೊಂಡಿತ್ತು. ಕಳೆದೊಂದು ತಿಂಗಳಿಂದ ಇದೇ ಆಶ್ರಮದಲ್ಲಿ ತನ್ನ ಬದುಕಿನ ಕೊನೆಯ ದಿನಗಳನ್ನು ಎಣಿಸುತ್ತಿತ್ತು ಆ ಹಿರಿ ಜೀವ. ಭಾನುವಾರ ಸಂಜೆ ವಯೋಸಹಜ ಕಾಯಿಲೆಯಿಂದಾಗಿ ಆಕೆ ಇಹಲೋಕ ತ್ಯಜಿಸಿದ್ದಳು.
ಈ ಸುದ್ದಿಯನ್ನೂ ಓದಿ: Hasanamba Devi: ಶಕ್ತಿದೇವತೆ ಹಾಸನಾಂಬೆ ದೇಗುಲ ಗರ್ಭಗುಡಿಗೆ ಇಂದು ತೆರೆ, ಈ ವರ್ಷ 26 ಲಕ್ಷ ಮಂದಿ ದರ್ಶನ
ತಾಯಿಯ ಮೃತದೇಹಕ್ಕಾಗಿ ಮಕ್ಕಳ ನಡುವೆ ಮಾರಾಮಾರಿ
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 80 ವರ್ಷ ವಯಸ್ಸಿನ ಈ ಹಿರಿ ಜೀವ ಇಹಲೋಕವನ್ನ ತ್ಯಜಿಸಿದೆ. ಯಾವಾಗ ತಾಯಿ ಸತ್ತು ಹೋದ ವಿಚಾರ ಮಕ್ಕಳಿಗೆ ತಿಳಿಯುತ್ತಿದ್ದಂತೆ ಮಕ್ಕಳು ಓಡೋಡಿ ಬಂದಿದ್ದಾರೆ. ತಾಯಿಯ ಶವವನ್ನು ನಮಗೆ ಕೊಡಿ, ನಮಗೆ ಬೇಕು ಅಂತಾ ಕಿತ್ತಾಟ ಶುರು ಮಾಡಿದ್ದಾರೆ. ಬದುಕಿದ್ದಾಗ ತಾಯಿಯನ್ನು ಕಣ್ಣೆತ್ತೂ ನೋಡದ ಮಕ್ಕಳು ಆಕೆಯ ಶವಕ್ಕಾಗಿ ಭಾರೀ ಹೊಡೆದಾಟವನ್ನೇ ನಡೆಸಿದ್ದರು. ಆಕೆಯ ಹೆಸರಲ್ಲಿರುವ ಆಸ್ತಿ ಅಥವಾ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣಕ್ಕಾಗಿಯೋ ಗೊತ್ತಿಲ್ಲ ಒಟ್ಟಿನಲ್ಲಿ ಮಕ್ಕಳು ಅನಾಥಾಶ್ರಮದ ಎದುರು ಭಾರೀ ಹೈಡ್ರಾಮಾವನ್ನೇ ನಡೆಸಿದ್ದಾರೆ.
ನಾವೇ ಅಂತ್ಯಸಂಸ್ಕಾರ ಮಾಡೀವಿ ಎಂದ ವೃದ್ಧಾಶ್ರಮ ಮಾಲೀಕರು
ಪಾರ್ವತಮ್ಮನವರ ಮಕ್ಕಳಾದ ಮಂಜೇಗೌಡ, ರಾಮಸ್ವಾಮಿ, ಜಯಮ್ಮ, ಭಾಗ್ಯ ಮತ್ತು ಇಂದ್ರ ಎಂಬುವವರು ಮಾತೃಭೂಮಿ ವೃದ್ದಾಶ್ರಮದಲ್ಲಿ ಹೈಡ್ರಾಮಾನೇ ಮಾಡಿದ್ರು. ಇವ್ರ ಹೈಡ್ರಾಮಾ ನೋಡಿದ ಜನರೇ ಕಂಗಾಲಾಗಿ ಸಿಟ್ಟಿಗೆದ್ದಿದ್ದರು. ಯಾವಾಗ ವೃದ್ಧಾಶ್ರಮದ ಮಾಲೀಕರು ಕೂಡ ಮಕ್ಕಳಿಗೆ ಚೆನ್ನಾಗಿ ಬೈದು ಚುರುಕು ಮುಟ್ಟಿಸಿದ್ದಾರೆ. ಪಾರ್ವತಮ್ಮನವರ ಹೆಣವನ್ನು ಯಾರಿಗೂ ಕೊಡಲ್ಲ. ನಾವೇ ಅಂತ್ಯ ಸಂಸ್ಕಾರ ಮಾಡ್ತೇವೆ ಅಂತಾ ಬಿಸಿ ಮುಟ್ಟಿಸ್ತಿದ್ದಂತೆ ಮಕ್ಕಳು ಮೆತ್ತಗಾಗಿದ್ದಾರೆ ಎನ್ನಲಾಗಿದೆ.