ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಾಸನದ ಜೋಡಿ ನರಹಂತಕ ಆನೆ ಸೆರೆ ಹಿಡಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ

ಹಾಸನ ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಜೋಡಿ ಸಲಗಳನ್ನು ಅರಣ್ಯ ಇಲಾಖೆ ಇಂದು ಯಶಸ್ವಿಯಾಗಿ ಸೆರೆ ಹಿಡಿದಿದೆ. ಎರಡು ದಿನಗಳಿಂದ ಕುಮ್ಕಿ ಆನೆ ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ನಿರಂತರ ಕಾರ್ಯಚರಣೆ ನಡೆಸಲಾಗುತ್ತಿತ್ತು. ಇಂದು ಆನೆಗಳನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್​​​ನ್ಲಿ ಸೆರೆಹಿಡಿದಿದ್ದಾರೆ.

ಸಂಗ್ರಹ ಚಿತ್ರ

ಹಾಸನ: ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಜೋಡಿ ಸಲಗಳನ್ನು ಅರಣ್ಯ ಇಲಾಖೆ ಇಂದು ಯಶಸ್ವಿಯಾಗಿ ಸೆರೆ ಹಿಡಿದಿದೆ. ಎರಡು ದಿನಗಳಿಂದ ಕುಮ್ಕಿ ಆನೆ ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ನಿರಂತರ ಕಾರ್ಯಚರಣೆ ನಡೆಸಲಾಗುತ್ತಿತ್ತು. ಇಂದು ಆನೆಗಳನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್​​​ನ್ಲಿ ಸೆರೆಹಿಡಿದಿದ್ದಾರೆ. ಉದೇವಾರ ಗ್ರಾಮದ ಕಾಫಿ ತೋಟದ (Haasan News) ಬಳಿ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್‌ ಬಳಸಿ ಪತ್ತೆ ಮಾಡಿದ್ದರು. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಪುಂಡಾನೆಗಳು ಜೊತೆಯಾಗಿಯೇ ಓಡ ತೊಡಗಿದ್ದವು.

ಅರವಳಿಕೆ ನೀಡಿ ಒಂದು ಗಂಟೆ ಕಳೆದರೂ ಆನೆ ನಿತ್ರಾಣಗೊಳ್ಳದ ಕಾರಣ ಮತ್ತೊಂದು ಡಾಟ್‌ ನೀಡಲಾಯಿತು. ಈ ವೇಳೆ ಕಾಫಿ ತೋಟವೊಂದರಲ್ಲಿ ಓಡಿಹೋಗಿ ಕಾಡನೆ ನಿತ್ರಾಣಗೊಂಡು ನಿಂತುಕೊಂಡಿದೆ. ಈ ವೇಳೆ ಕುಮ್ಕಿ ಆನೆಗಳು ಆನೆಗಳನ್ನು ಸುತ್ತುವರೆಯಲು ಬಂದಾಗ ಜೊತೆಯಲ್ಲಿದ್ದ ಮತ್ತೊಂದು ಸಣ್ಣ ಸಲಗ ಘೀಳಿಡುತ್ತಾ ಬಂದಿದೆ. ಈ ವೇಳೆ ಆ ಸಣ್ಣ ಸಲಗಕ್ಕೂ ಅರಣ್ಯ ಸಿಬ್ಬಂದಿ ಅರವಳಿಕೆ ನೀಡಿದ್ದಾರೆ. ಇದರಿಂದ ಸಣ್ಣ ಸಲಗ ಓಡಿಹೋಗಿ, ಸ್ವಲ್ಪ ದೂರ ತೆರಳಿ ನಿತ್ರಾಣಗೊಂಡು ನಿಂತುಕೊಂಡಿತ್ತು. ಬಳಿಕ ಎರಡೂ ಆನೆಗಳನ್ನು ಕುಮ್ಕಿ ಆನೆಗಳು ಸುತ್ತುವರೆದವು. ಬಳಿಕ ಅವುಗಳನ್ನು ಸೆರೆ ಹಿಡಿಯಲಾಯಿತು.

ನವೆಂಬರ್ 14ರಂದು ಬೇಲೂರು ತಾಲೂಕಿನ ಕುಶಾವರ ಗ್ರಾಮದ ಬಳಿ ಕಾಡಾನೆ ದಾಳಿಯಿಂದ ಚೌಡನಹಳ್ಳಿಯ ಜಯಮ್ಮ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಕೇವಲ ಎರಡೇ ದಿನದಲ್ಲಿ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದ. ನವೆಂಬರ್ 16ರಂದು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಹಫೀಜ್‌ ಮೇಲೆ ದಾಳಿ ಮಾಡಿತ್ತು. ಬಳಿಕ ಕಾರ್ಯಾಚರಣೆಗಾಗಿ ದುಬಾರೆ, ಭೀಮನಕಟ್ಟೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಂದ ಪ್ರಶಾಂತ, ಏಕಲವ್ಯ, ಶ್ರೀಕಂಠ, ಅಶೋಕ ಸೇರಿದಂತೆ ಸುಮಾರು 7 ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಬೇಲೂರಿನ ಬಿಕ್ಕೋಡು ಶಿಬಿರಕ್ಕೆ ಕರೆತರಲಾಗಿತ್ತು.

ಬಂಡೀಪುರದಲ್ಲಿ ಆನೆ, ಹುಲಿ ಬೇಟೆ: ಉರುಳಲ್ಲಿ ಹುಲಿ, ಆನೆ ದಂತ ನಾಪತ್ತೆ, ಉ.ಪ್ರ.ತಂಡದ ಕೈವಾಡ ಶಂಕೆ?

ಹಾಸನದ ಆನೆಗಳನ್ನು ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಪ್ರಸ್ತಾಪಕ್ಕೆ ಚಿಕ್ಕಮಗಳೂರು ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಗೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಸೂಕ್ತ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

Vishakha Bhat Heggar

View all posts by this author