Lathi Charge: 1 ಸಾವಿರಕ್ಕೆ 20 ಶರ್ಟ್ ಆಫರ್, ನೂಕುನುಗ್ಗಲು, ಪೊಲೀಸರಿಂದ ಲಾಠಿ ಚಾರ್ಜ್!
Hassan: ಜನರು ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲು ಜೋರಾಗಿದೆ. ಅದು ಗೊಂದಲಕ್ಕೆ ಕಾರಣವಾಗಿ, ಸ್ಥಳೀಯರಿಗೆ ತೊಂದರೆಯಾಯಿತು. ಅಂಗಡಿಯ ಮುಂದಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಡಕು ಉಂಟಾಯಿತು. ಪರಿಸ್ಥಿತಿ ಗಂಭೀರಗೊಂಡಾಗ, ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದರು.

-

ಹಾಸನ: ನಗರದ ಉದಯಗಿರಿ ಬಡಾವಣೆಯಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ನೀಡಲಾದ ಆಫರ್‌ನಿಂದ ಆಕರ್ಷಿತಗೊಂಡ ಸಾವಿರಾರು ಜನತೆ ಅತ್ತ ನುಗ್ಗಿದ್ದು, ಸ್ಥಳದಲ್ಲಿ ಭಾರೀ ನೂಕುನುಗ್ಗಉ ಉಂಟಾಗಿತ್ತು. ಕಾಲ್ತುಳಿತದಂಥ ಪರಿಸ್ಥತಿ ತಪ್ಪಿಸಲು ಪೊಲೀಸರು ಲಾಠಿಚಾರ್ಜ್ (Lathi Charge) ಮಾಡಿದ್ದಾರೆ. ಈ ಘಟನೆ ಹಾಸನದ (hassan news) ಉದಯಗಿರಿ ಬಡಾವಣೆಯ ಅರುಣ್ ಮೆನ್ಸ್ ವೇರ್ ಎಂಬ ಅಂಗಡಿಯಲ್ಲಿ ನಡೆದಿದೆ.
ಅರುಣ್ ಮೆನ್ಸ್ ವೇರ್ ಅಂಗಡಿಯಲ್ಲಿ 'ಸಾವಿರಕ್ಕೆ 20 ಶರ್ಟ್' ಎಂಬ ಆಫರ್ ಘೋಷಣೆ ಮಾಡಲಾಗಿತ್ತು. ಹೀಗಾಗಿ ಐವತ್ತು ರೂಪಾಯಿಗೆ ಒಂದು ಶರ್ಟ್ ಖರೀದಿ ಆಸೆಯಿಂದ ಬಂದ ಜನಸಾಗರದಿಂದ ರಸ್ತೆಯಲ್ಲಿ ಗೊಂದಲ ಉಂಟಾಗಿತ್ತು. ಸಹಸ್ರಾರು ಜನರು ಅಂಗಡಿಯ ಕಡೆಗೆ ಹರಿದು ಬಂದರು. ಬೆಳಿಗ್ಗೆಯಿಂದಲೇ ರಸ್ತೆಯಲ್ಲಿ ಜನಸಮೂಹ ಹೆಚ್ಚಾಗಿದ್ದು, ಖರೀದಿಗಾಗಿ ಜನರು ಸಾಲುಗಟ್ಟಿ ನಿಂತಿದ್ದರು.
ಜನರು ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲು ಜೋರಾಗಿದೆ. ಅದು ಗೊಂದಲಕ್ಕೆ ಕಾರಣವಾಗಿ, ಸ್ಥಳೀಯರಿಗೆ ತೊಂದರೆಯಾಯಿತು. ಅಂಗಡಿಯ ಮುಂದಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಡಕು ಉಂಟಾಯಿತು. ಪರಿಸ್ಥಿತಿ ಗಂಭೀರಗೊಂಡಾಗ, ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಜನರು ಹಿಂದೆ ಸರಿಯಲು ನಿರಾಕರಿಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ಕ್ರಮದಿಂದ ಕೆಲವು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಾಸನ ನಗರದ ಉದಯಗಿರಿ ಬಡಾವಣೆ ದಟ್ಟ ಜನಸಂದಣಿಯ ಪ್ರದೇಶವಾಗಿದ್ದು, ಇಂತಹ ಆಫರ್‌ಗಳು ಜನಸಂದಣಿಗೆ ಕಾರಣವಾಗುತ್ತವೆ. ಇದೇ ರೀತಿ ಹಿಂದಿನ ದಿನಗಳಲ್ಲಿ ಬೆಂಗಳೂರು ಮತ್ತು ಇತರ ನಗರಗಳಲ್ಲಿ ಆಫರ್‌ಗಳಿಗೆ ಜನಸಮೂಹ ಸೇರಿ ಗೊಂದಲವಾದ ಉದಾಹರಣೆಗಳು ಇವೆ. ಈ ಘಟನೆಯು ವ್ಯಾಪಾರಿಗಳು ಆಫರ್‌ಗಳನ್ನು ಘೋಷಿಸುವಾಗ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪಾಠವನ್ನು ಕಲಿಸಿದೆ.
ಇದನ್ನೂ ಓದಿ: Actor Darshan: ಶಿಕ್ಷಕಿಗೆ ರೇಪ್ ಬೆದರಿಕೆ, ದರ್ಶನ್ ಅಭಿಮಾನಿಗಳ ಹೆಸರಿನ ಕೇಡಿಗಳ ವಿರುದ್ಧ ದೂರು ದಾಖಲು