BBK 12: ಮೊದಲ ದಿನವೇ ಎಲಿಮಿನೇಷನ್: ಬಿಗ್ ಬಾಸ್ ಕನ್ನಡದಲ್ಲಿ ಬಿಗ್ ಟ್ವಿಸ್ಟ್
ಹಾಯ್ ಹೇಳೋಕು ಮುನ್ನವೇ ಟಾಟಾ-ಬಾಯ್ ಹೇಳೋರು ಯಾರು? ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ಮೊದಲ ದಿನದ ಎಪಿಸೋಡ್ನ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ ಬಾಸ್, ಇದು ಬಿಗ್ ಬಾಸ್.. ನಾನು ಬಂದಿರೊ ಉದ್ದೇಶ ಸ್ವಾಗತ ಮಾಡೋಕೆ ಅಲ್ಲ.. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯಧ್ವಾರ ತೋರಿಸಿ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ.

BBK 12 -

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾನೆಲ ದೊರಕಿದೆ. ನಿನ್ನೆ ಕಿಚ್ಚ ಗ್ರ್ಯಾಂಡ್ ಓಪನಿಂದ ನಡೆದಿದ್ದು, ಕಿಚ್ಚ ಸುದೀಪ್ ನೇತೃತ್ವದಲ್ಲಿ ಒಟ್ಟು 19 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ‘‘Expect the Unexpected’’ ಎಂಬ ಟ್ಯಾಗ್ಲೈನ್ನೊಂದಿಗೆ ಶೋ ಆರಂಭವಾಗಿದೆ. ಇದಕ್ಕೆ ತಕ್ಕಂತೆ ಮೊದಲ ದಿನವೇ ದೊಡ್ಮನೆಯೊಳಗೆ ಮಹಾ ಟ್ವಿಸ್ಟ್ ನೀಡಲಾಗಿದೆ.
ಹಾಯ್ ಹೇಳೋಕು ಮುನ್ನವೇ ಟಾಟಾ-ಬಾಯ್ ಹೇಳೋರು ಯಾರು? ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ಮೊದಲ ದಿನದ ಎಪಿಸೋಡ್ನ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ ಬಾಸ್, ಇದು ಬಿಗ್ ಬಾಸ್.. ನಾನು ಬಂದಿರೊ ಉದ್ದೇಶ ಸ್ವಾಗತ ಮಾಡೋಕೆ ಅಲ್ಲ.. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ.
ಅದರಂತೆ ಮನೆಯಲ್ಲಿ ಬಿಗ್ ಚರ್ಚೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು-ತಪ್ಪು ಮಾತಾಡಿ ಫೇಮಸ್ ಆಗೋದು ಒಂದಿ ಇರುತ್ತೆ ಎಂದು ರಕ್ಷಿತಾ ಶೆಟ್ಟಿ ಬಗ್ಗೆ ಜಾಹ್ಮವಿ ಕಾರಣ ನೀಡಿದ್ದಾರೆ. ಮತ್ತೊಂದೆಡೆ ಅಶ್ವಿನಿ ಅವರು ಸ್ಪಂದನಾ ಬಗ್ಗೆ, ಸ್ಪಂದನಾ ಅವರಿಗೆ ಹೊರಗಡೆ ಸಾಕಷ್ಟು ಅವಕಾಶ ಸಿಗಬಹುದು.. ಹೀಗಾಗಿ ಅವರು ಬಿಗ್ ಬಾಸ್ನಿಂದ ಹೊರಹೋಗಲಿ ಎಂದು ಹೇಳಿದ್ದಾರೆ.
ಸದ್ಯ ಮೊದಲ ದಿನವೇ ಬಿಗ್ ಬಾಸ್ನಲ್ಲಿ ಊಹಿಸಲಾಗದ ಟ್ವಿಸ್ಟ್ ನೀಡಲಾಗಿದೆ. ನಿಜವಾಗಿಯೂ ದೊಡ್ಮನೆಯಿಂದ ಮೊದಲ ದಿನವೇ ಯಾರಾದ್ರು ಔಟ್ ಆಗುತ್ತಾರ ಅಥವಾ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಲು ಇದು ಬಿಗ್ ಬಾಸ್ ಮಾಡಿದ ಗಿಮಿಕ್ ಹಾ? ಎಂಬುದು ಗೊತ್ತಾಗಬೇಕಿದೆ.
BBK 12: ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಒಟ್ಟು 19 ಸ್ಪರ್ಧಿಗಳು: ಯಾರೆಲ್ಲ?, ಇಲ್ಲಿದೆ ಪಟ್ಟಿ