ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ನಾಲ್ಕಾರು ಐ.ಡಿ ಗಳು, ಹತ್ತಾರು ಕನ್‌ಫ್ಯೂಷನ್‌ ಗಳು !

ಮಗು ಒಂದನೇ ತರಗತಿಗೆ ದಾಖಲಾತಿ ಆಗುತ್ತಿದ್ದ ಹಾಗೇ ಸ್ಯಾಟ್ಸ್ (STUDENT ACHIEVEMENT TRACKING SYSTEM)ನಲ್ಲಿ ಮಗುವಿನ ಮಾಹಿತಿ ತುಂಬಬೇಕು. ಆಗ ಮಗುವಿಗೆ 9 ಅಂಕಿಯ ಸ್ಯಾಟ್ಸ್ ಐಡಿ ರಚಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಖಾಸಗಿ ಶಾಲೆಯಲ್ಲಿ ಪ್ರತಿ ವರ್ಷ ಕನಿಷ್ಠ 150 ಹೊಸ ದಾಖಲಾತಿ ಆದರೂ ಸಹ ಅಷ್ಟು ಮಕ್ಕಳ ಡಾಟಾ ಎಂಟ್ರಿಯನ್ನು ಸ್ಯಾಟ್ಸ್ ನಲ್ಲಿ ರಚಿಸಲು ಕನಿಷ್ಠ ಒಂದೂವರೆ ತಿಂಗಳು ಬೇಕು.

ನಾಲ್ಕಾರು ಐ.ಡಿ ಗಳು, ಹತ್ತಾರು ಕನ್‌ಫ್ಯೂಷನ್‌ ಗಳು !

-

Ashok Nayak Ashok Nayak Sep 29, 2025 8:10 AM

ಪ್ರಚಲಿತ

ಸುರೇಂದ್ರ ಪೈ, ಭಟ್ಕಳ

ಹಿಂದೆ ದೆಹಲಿ ಸುಲ್ತಾನರ ಕಾಲದಲ್ಲಿ ಕುದುರೆಗಳಿಗೆ ಡಾಗ್ (ಮುದ್ರೆ) ಹಾಕುವ ಪದ್ಧತಿ ಇತ್ತು. ಕ್ರಮೇಣ ಆ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡಾಗುತ್ತಾ ವಿವಿಧ ರೂಪಗಳಲ್ಲಿ ಬದಲಾಗಿ ಇಂದು ಐಡಿ ರೂಪ ತಾಳಿದೆ ಎಂದರೂ ಅತಿಶಯೋಕ್ತಿಯಿಲ್ಲ. ಹಾಗಾದರೆ ಶಿಕ್ಷಣ ಇಲಾಖೆ ಮಕ್ಕಳನ್ನು ಕುದುರೆ ಎಂದುಕೊಂಡಿರಬಹುದೇ ಎಂದು ಕೇಳಬೇಡಿರಿ! ನಾಲ್ಕಾರು ಐ.ಡಿಗಳು, ಹತ್ತಾರು ಕನ್ ಫ್ಯೂಷನ್‌ಗಳು !

ಅದೊಂದು ಕಾಲವಿತ್ತು. ಮಕ್ಕಳು ಮನೆಯಲ್ಲಿ ಗಲಾಟೆ ಮಾಡುತ್ತಾರೆಂದು ಪಾಲಕರು, ‘ಮೇಷ್ಟ್ರೇ ಮಕ್ಕಳನ್ನು ಶಾಲೆಗೆ ದಾಖಲು ಮಾಡ್ಕಳಿ’ ಎಂದು 5 ರಿಂದ 6 ವಯಸ್ಸಿನೊಳಗಿನ ಮಕ್ಕಳನ್ನು ಹೆಡ್ ಮೇಷ್ಟ್ರು ಕೈಯ ದಾಖಲೆಯನ್ನು ಬರೆದು ದಾಖಲಾತಿ ಮಾಡಿಕೊಳ್ಳುತ್ತಿದ್ದ ಕಾಲವದು. ಆಗ ಶಾಲಾ ದಾಖಲಾತಿಗೆ ಮಗುವಿನ ಜನನ ಪ್ರಮಾಣ ಪತ್ರ ಇದ್ದರೆ ಸಾಕಿತ್ತು.

ಒಂದು ವೇಳೆ ಒಂದೆರಡು ತಿಂಗಳ ವಯಸ್ಸು ಕಡಿಮೆ ಇದ್ದರೂ ಸೇರಿಸಿಕೊಳ್ಳುತ್ತಿದ್ದರು. ಒಂದು ವೇಳೆ ಜನ್ಮ ಪ್ರಮಾಣ ಪತ್ರ ಇಲ್ಲದಿದ್ದರೂ ಸಹ ಹೆಡ್ ಮೇಷ್ಟ್ರು ತಾವೇ ದಾಖಲಾತಿ ಪ್ರಕ್ರಿಯೆಯ ಮುಗಿಸಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ದಾಖಲೆಗಿಂತಲೂ ಶಾಲೆಯಲ್ಲಿ eನವನ್ನು ಮಕ್ಕಳ ಮಿದುಳಿನೊಳಗೆ ದಾಖಲು ಮಾಡುವುದಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು.

ಆ ಕಾಲದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯಗಳು ಇಂದಿನ ವಿಶ್ವವಿದ್ಯಾಲಯ ಪಠ್ಯಕ್ರಮ ವನ್ನು ಸಹ ಮೀರಿಸುವಂತಿದ್ದವು. ಇಂದಿಗೂ ಫೇಸ್‌ಬುಕ್ ಪುಟದ, ಸಾಮಾಜಿಕ ಜಾಲ ತಾಣದ ಕಾಣುವ ನಾಲ್ಕೈದು ದಶಕಗಳ ಹಿಂದಿನ ಪಠ್ಯಪುಸ್ತಕದ ಪಾಠಗಳನ್ನು ಓದುವಾಗ ಇಂದಿನ ಪಠ್ಯ ಕ್ರಮದ ಅವಸ್ಥೆ ನೋಡಿ ಮರುಕ ಉಂಟಾಗುತ್ತದೆ.

ಆಗ ಒಂದೊಂದು ತರಗತಿಯಲ್ಲೂ 70-80 ಮಕ್ಕಳಿದ್ದರೂ ಸಹ ಶಿಕ್ಷಣ ಇಲಾಖೆ ಮಕ್ಕಳಿಗೆ ಯಾವ ವೈಯಕ್ತಿಕ ಶೈಕ್ಷಣಿಕ ಐಡಿಯನ್ನು ನೀಡಿರಲಿಲ್ಲ. ಆದರೂ ಶೈಕ್ಷಣಿಕ ವ್ಯವಸ್ಥೆ ಸದ್ದುಗದ್ದಲವಿಲ್ಲದೇ ಅಚ್ಚುಕಟ್ಟಾಗಿ ನಡೆದಿತ್ತು. ಆಗ ಶೈಕ್ಷಣಿಕ ವ್ಯವಸ್ಥೆ ಬಹಳ ಸರಳ ಹಾಗೂ ಸುಲಭವಾಗಿತ್ತು. ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಫಾರ್ಮ ಕೂಡ ಶಾಲೆಯವರೇ ತುಂಬಿ ಪರೀಕ್ಷೆಗೆ ಕುಳ್ಳಿರಿಸುತ್ತಿದ್ದರು.

ಇದನ್ನೂ ಓದಿ: Surendra Pai Column: ಇಗ್‌ ನೊಬೆಲ್‌ ಪ್ರಶಸ್ತಿ ತಮಾಷೆಯಾದರೂ ವಿಜ್ಞಾನ !

ಆದರೆ ಕಳೆದ ಒಂದು ದಶಕದಿಂದೀಚೆಗೆ ಶಿಕ್ಷಣ ವ್ಯವಸ್ಥೆಯನ್ನು ಎಷ್ಟು ಸಾಧ್ಯವೋ ಅಷ್ಟು ಜಟಿಲ, ಗೊಂದಲ ಹಾಗೂ ಕ್ಲಿಷ್ಟಕರವನ್ನಾಗಿಸಲಾಗಿದೆ. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವ ಬದಲು ಅಂಕಿ ಸಂಖ್ಯೆಗಳನ್ನು ಹೊಂದಿಸುವುದರ ಮಗ್ನರಾಗಿದ್ದಾರೆ. ಈಗ ಬ್ಯಾಂಕ್ ನಲ್ಲಿ ಅಕೌಂಟ್ ತೆರೆಯಲ್ಲಿ ಹತ್ತು ನಿಮಿಷ ಸಾಕು. ಆದರೆ ಶಾಲೆಯಲ್ಲಿ ದಾಖಲಾತಿ ಮಾಡಿಸಲು ಬೇಕಾದ ದಾಖಲೆ ಹೊಂದಿಸಲು ಹರಸಾಹಸವನ್ನೇ ಪಡಬೇಕಾಗಿದೆ.

ಮಗು ಒಂದನೇ ತರಗತಿಗೆ ದಾಖಲಾತಿ ಆಗುತ್ತಿದ್ದ ಹಾಗೇ ಸ್ಯಾಟ್ಸ್ (STUDENT ACHIEVEMENT TRACKING SYSTEM)ನಲ್ಲಿ ಮಗುವಿನ ಮಾಹಿತಿ ತುಂಬಬೇಕು. ಆಗ ಮಗುವಿಗೆ 9 ಅಂಕಿಯ ಸ್ಯಾಟ್ಸ್ ಐಡಿ ರಚಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಖಾಸಗಿ ಶಾಲೆಯಲ್ಲಿ ಪ್ರತಿ ವರ್ಷ ಕನಿಷ್ಠ 150 ಹೊಸ ದಾಖಲಾತಿ ಆದರೂ ಸಹ ಅಷ್ಟು ಮಕ್ಕಳ ಡಾಟಾ ಎಂಟ್ರಿಯನ್ನು ಸ್ಯಾಟ್ಸ್ ನಲ್ಲಿ ರಚಿಸಲು ಕನಿಷ್ಠ ಒಂದೂವರೆ ತಿಂಗಳು ಬೇಕು.

ತದನಂತರ ಮತ್ತೆ ಅದೇ ಮಾಹಿತಿಯ ಮತ್ತೆ ಯಥಾವತ್ತಾಗಿ ಯುಡೈಸ್ ಪ್ಲಸ್ ಪೋರ್ಟಲ್ ನಲ್ಲಿ ತುಂಬಬೇಕು. ಮತ್ತೆ ಒಂದೂವರೆ ತಿಂಗಳು. ಕಾರಣ ಸರ್ವರ್ ಸಮಸ್ಯೆ. ಶಾಲೆಯಲ್ಲಿ ಕೆಲಸ ಮಾಡಿದ್ದು ಸಾಲದು ಎಂಬಂತೆ ಶಾಲೆಯ ಕೆಲಸವನ್ನು ಮನೆಗೂ ತೆಗೆದುಕೊಂಡು ಹೋಗಬೇಕು. ಮಧ್ಯರಾತ್ರಿ ಸಮಯದಲ್ಲಿ ಮಾತ್ರ ಸರ್ವರ್ ಫ್ರೀ ಆಗುವ ಕಾರಣ ಬಹಳಷ್ಟು ಮಹಿಳಾ ಆಪರೇಟರ್ ಗಳು ಮಧ್ಯರಾತ್ರಿ ತನಕ ಎಚ್ಚರವಿದ್ದು ಮಾಡಬೇಕಾದ ಅನಿವಾರ್ಯತೆ.

Surendra P 29

ಇದರ ನಡುವೆ ಮನೆಯವರಿಗೆ ನಮ್ಮ ಮಗಳು ಮಧ್ಯರಾತ್ರಿ ಸ್ಯಾಟ್ಸ್ ಎಂಟ್ರಿ ಮಾಡುತ್ತಿzಳೋ, ಅಥವಾ ಚ್ಯಾಟ್ ಮಾಡುತ್ತಿದ್ದಾಳೋ ಎಂಬ ಲಘು ಗೊಂದಲ. ಇಷ್ಟೆ ಸರ್ಕಸ್ ಮಾಡಿದ ಬಳಿಕ ಅದೇ ಮಗುವಿಗೆ 11 ಅಂಕಿಯ ಪೆನ್ ( Personal Education Number) ಜನರೇಟ್ ಆಗುತ್ತದೆ. ಅಲ್ಲಿಗೆ ಒಂದೇ ಮಗುವಿಗೆ ಎರಡು ಐಡಿ ಬಂತು.

ಒಂದು ರಾಜ್ಯದ ಐಡಿ, ಇನ್ನೊಂದು ಕೇಂದ್ರದ ಐಡಿ. ಈ ಎರಡು ಐಡಿ ಸಾಲದು ಎಂಬಂತೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಭಾಗವಾಗಿ, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಅನುಗುಣವಾಗಿ, ಫೆಬ್ರವರಿ 13, 2024ರಂದು ಶಿಕ್ಷಣ ಸಚಿವಾಲಯವು ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ ( APAAR ) ಐಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಈ ಕಾರ್ಯಕ್ರಮವು ವಿದ್ಯಾರ್ಥಿಯ ಜೀವಿತಾವಧಿಯ ಶೈಕ್ಷಣಿಕ ದಾಖಲೆಗಳನ್ನು ಒಂದೇ ಡಿಜಿಟಲ್ ಗುರುತಿನಲ್ಲಿ ಕ್ರೋಢೀಕರಿಸಲು ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ಐಡಿಯನ್ನು ರಚಿಸುವ ಗುರಿ ಯನ್ನು ಹೊಂದಿದೆ. ಅಲ್ಲಿಗೆ ಒಂದೇ ಮಗಿವಿನ, ಒಂದೇ ದಾಖಲೆಗೆ ಮೂರು ಐಡಿ ಎಂದಾಯಿತು. ಹಿಂದೆ ದೆಹಲಿ ಸುಲ್ತಾನರ ಕಾಲದಲ್ಲಿ ಕುದುರೆಗಳಿಗೆ ಡಾಗ್ (ಮುದ್ರೆ) ಹಾಕುವ ಪದ್ಧತಿ ಇತ್ತು. ಕ್ರಮೇಣ ಆ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡಾಗುತ್ತಾ ವಿವಿಧ ರೂಪಗಳಲ್ಲಿ ಬದಲಾಗಿ ಇಂದು ಐಡಿ ರೂಪ ತಾಳಿದೆ ಎಂದರೂ ಅತಿಶಯೋಕ್ತಿಯಿಲ್ಲ. ಹಾಗಾದರೆ ಶಿಕ್ಷಣ ಇಲಾಖೆ ಮಕ್ಕಳನ್ನು ಕುದುರೆ ಎಂದು ಕೊಂಡಿರಬಹುದೇ ಎಂದು ಕೇಳಬೇಡಿರಿ!

ವಾಸ್ತವದಲ್ಲಿ ಒಂದೇ ಮಗುವಿನ ಒಂದೇ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲು ಮೂರು ಐಡಿ ಬೇಕೆ? ಖಂಡಿತವಾಗಿಯೂ ಇಲ್ಲ. ಬದಲಾಗಿ ಒಂದು ಶಾಶ್ವತ ಪೋರ್ಟಲ್ ಗೆ ಇತರ ಪೋರ್ಟಲ್ ಗಳನ್ನು ಇಂಟರ್ ಲಿಂಕ್ ಮಾಡುವುದರ ಮೂಲಕವೋ ಅಥವಾ ಒಂದೇ ಐಡಿಯನ್ನು ಇತರ ಪೋರ್ಟಲ್ ನಲ್ಲಿ ಎಂಟ್ರಿ ಮಾಡುವ ಮೂಲಕವೋ ವಿದ್ಯಾರ್ಥಿಗಳ ವಿವರ, ದಾಖಲೆ ಪಡೆಯುವಂತೆ ಮಾಡುವಂತಹ ಸರಳ ತಂತ್ರಜ್ಞಾನ ಸಾಕಷ್ಟಿದೆ.

ಆದರೂ ಶಾಲೆಗಳಿಗೆ, ಪಾಲಕರಿಗೆ, ವಿದ್ಯಾರ್ಥಿಗಳಿಗೆ ಹತ್ತಾರು ಐಡಿಗಳ ಗೊಂದಲದ ಸುಳಿಯಲ್ಲಿ ಏಕೆ ಸಿಲುಕಿಸಬೇಕು. ಅಷ್ಟೂ ಸಾಲದೆಂಬಂತೆ ಎಲ್ಲಾ ಐಡಿ ಗಳನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡ ಲಾಗಿದೆ. ವಿದ್ಯಾರ್ಥಿ ಆಧಾರ್ ದಾಖಲೆಯಲ್ಲಿರುವ ಹೆಸರು ಮ್ಯಾಚ್ ಆಗದಿದ್ದರೆ ಯಾವ ಐಡಿ ಕೂಡ ವೆರಿಫೈ ಆಗುವುದಿಲ್ಲ. ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ ಸಾರಿ ಸಾರಿ ಹೇಳಿದೆ.

ಇನ್ನೂ ಪಾಲಕರು, ನಾಗರಿಕರು ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ಯಾವಾಗ ಬೇಕಾ ದರೂ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವಿದೆ. ಹೀಗಿರುವಾಗ ಶೈಕ್ಷಣಿಕ ದಾಖಲಾತಿಗೆ ಜನನ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರವನ್ನೇ ಮೂಲಾಧಾರ ಎಂದು ಪರಿಗಣಿಸುವ ಬದಲಾಗಿ ಆಧಾರ್ ಮಾಹಿತಿ ಪರಿಗಣಿಸಯವುದು ಎಷ್ಟು ಸರಿ.

ವ್ಯವಸ್ಥೆಯನ್ನು ಜಟಿಲಗೊಳಿಸಿದಷ್ಟು ಅಮಾಯಕ ನಾಗರಿಕರು ಪರೋಕ್ಷವಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ತೊಡಕಾಗಬಹುದೆಂದು ಭಯದಿಂದ ನಾಲ್ಕಾರು ಆಫೀಸು ಸುತ್ತಿ ಒಂದಿಷ್ಟು ದುಡ್ಡು ಖರ್ಚು ಮಾಡಿ ಹತ್ತಾರು ದಿನ ಅಲೆಯದು ದಾಖಲೆ ಹೊಂದಿಸ ಬೇಕಾದ, ಮರು ಸಂಯೋಜಿಸಬೇಕಾದ ಪರಿಸ್ಥಿತಿ ಇಂದು ಅಕ್ಷರಶಃ ನಿರ್ಮಾಣವಾಗಿದೆ.

ಇದನ್ನು ಆಧಾರ್ ಕಾರ್ಡ ಮಾಡುವಾಗಲೇ ಸರಿ ಮಾಡುವ ಅವಕಾಶ ಇದೆ. ಆದರೆ ತರಾತುರಿಯಲ್ಲಿ ಆಧಾರ್ ಕಡ್ಡಾಯವೆಂದು ಹೆದರಿಕೆ ಹುಟ್ಟಿಸಿ, ಆಧಾರ್ ಮಾಡಿಸಿದ್ದರ ಪರಿಣಾಮ ಇಂದು ಶೇಕಡಾ 60ರಷ್ಟು ಆಧಾರ್ ಕಾರ್ಡ್‌ನಲ್ಲಿ ದೋಷಗಳಿವೆ. ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದನ್ನು ಬಿಟ್ಟು ಇಂತಹ ಅನಗತ್ಯ ಐಡಿಗಳು, ಅಂಕಿ ಸಂಖ್ಯೆಯಲ್ಲಿ ಗಿರಿಗಿಟ್ಟಲೇ ಹೊಡೆಯುವಂತೆ ಮಾಡುತ್ತಿರುವು ದರಿಂದಲೇ ಹತ್ತನೇ ತರಗತಿ ಬೋರ್ಡ ಪರೀಕ್ಷೆಯ ಫಲಿತಾಂಶದಲ್ಲಿ ಕಳಪೆ ಅಂಕಿ ಸಂಖ್ಯೆಗಳು ದಾಖಲಾಗುವುದು.

ನೂರಾರು ಶಾಲೆಗಳು ಸೊನ್ನೆ ಫಲಿತಾಂಶವನ್ನು ದಾಖಲಿಸುವುದು. ಈ ಬಾರಿ ಕೇಂದ್ರ ಪರೀಕ್ಷಾ ಮಂಡಳಿಯು ಸಿಬಿಎಸ್‌ಸಿ ಶಾಲೆಯ 9-12 ತರಗತಿ ಮಕ್ಕಳಿಗೆ ಅಪಾರ್ ಐಡಿ ನಮೂದಿಸಬೇಕೆಂಬ ಗೊಂದಲ ಸೃಷ್ಟಿಸಿತ್ತು. ಸದ್ಯ ಸುಪ್ರೀಂ ಕೋರ್ಟ್ ಆದೇಶದಂತೆ ಅದಕ್ಕೆ ಬ್ರೇಕ್ ಬಿತ್ತು. ಒಂದು ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ 4 ವಿಶಿಷ್ಟ ಗುರುತು ಸಂಖ್ಯೆಯ ಅವಶ್ಯಕತೆ ಇದೆಯೇ? ಪ್ರಜ್ಞಾವಂತ ರಾದ ನಾವು ಒಮ್ಮೆ ಯೋಚಿಸಬೇಕಿದೆ. ಈ ನಂಬರ್ ಗೇಮ್ ನಲ್ಲಿ ಸಿಲುಕಿ ಒದ್ದಾಡುವುದು ಪಾಲಕರು, ಮಕ್ಕಳಾದರೆ ಇನ್ನು ವಾಸ್ತವಿಕವಾಗಿ ಲಾಭ ಪಡೆಯುವವರು ಯಾರು? ಇಷ್ಟೆಲ್ಲ ಸರ್ಕಸ್ ಮಾಡಿ ಅಪಾರ್ ಐಡಿ ರಚಿಸಿದ ಬಳಿಕವು ಮಕ್ಕಳ ಡೇಟಾ ಸುರಕ್ಷತೆಯ ಜವಬ್ದಾರಿ ಯಾರದ್ದು ಎಂಬ ಪ್ರಶ್ನೆ ಕಾಡುತ್ತದೆ.

ಈ ಕುರಿತಾಗಿ ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ತನ್ನ ನೀತಿ ದಾಖಲೆಗಳ ಕುರಿತು ಮಾಹಿತಿ ಹಕ್ಕು ಅರ್ಜಿಯನ್ನು ಸಲ್ಲಿಸಲು ಪ್ರಯತ್ನಿಸಿದಾಗ, ಕೇಂದ್ರ ಸರ್ಕಾರವು ವಕಾಲತ್ತು ಅರ್ಜಿಯನ್ನು 30ಕ್ಕೂ ಹೆಚ್ಚು ಬಾರಿ ವರ್ಗಾಯಿಸಿತು, ತಿಂಗಳುಗಳವರೆಗೆ ಸ್ಪಷ್ಟ ಉತ್ತರವಿಲ್ಲ. APAAR ದಾಖಲಾತಿ ಯ ಮೂಲಕ ಸಂಗ್ರಹಿಸಲು ನಿಗದಿಪಡಿಸಲಾದ ಡೇಟಾಸೆಟ್‌ಗಳು ಕೇವಲ ಶೈಕ್ಷಣಿಕ ಪ್ರಮಾಣಪತ್ರ ಗಳು ಮತ್ತು ಶ್ರೇಣಿಗಳಿಗೆ ಸೀಮಿತವಾಗಿಲ್ಲ, ಆದರೆ ವ್ಯಾಪಕವಾಗಿ ಹರಡಿವೆ ಎಂದು IFF 2023 ರಲ್ಲಿ ಬರೆದಿದೆ.

ಇದಲ್ಲದೆ, ಕಾನೂನು ಇಲ್ಲದೆ ಅಪ್ರಾಪ್ತ ವಯಸ್ಕರ ದತ್ತಾಂಶದ ದೊಡ್ಡ ಪ್ರಮಾಣದ ಸಂಗ್ರಹವು ಅಸಂವಿಧಾನಿಕ ಎಂದು ಐಊಊ ವಾದಿಸುತ್ತದೆ. ಇದು ಮಕ್ಕಳ ಹಕ್ಕು ಹಾಗೂ ಮೂಲಭೂತ ಹಕ್ಕಿಗೂ ವಿರುದ್ಧ ನಡೆ ಆಗಿದೆ. ಹೆಚ್ಚುವರಿಯಾಗಿ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023ರ ಸೆಕ್ಷನ್ 9(3) ನಿರ್ದಿಷ್ಟವಾಗಿ ಮಕ್ಕಳ ಟ್ರ್ಯಾಕಿಂಗ್ ಅಥವಾ ನಡವಳಿಕೆಯ ಮೇಲ್ವಿ ಚಾರಣೆ ಅಥವಾ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಜಾಹೀರಾತು ನೀಡುವುದನ್ನು ನಿಷೇಧಿಸುತ್ತದೆ ಎಂದು IFF ಗಮನ ಸೆಳೆದಿದೆ.

ಯಾವುದೇ ಬಲವಾದ ಸುರಕ್ಷತಾ ಕ್ರಮಗಳಿಲ್ಲದೆ ತೆರೆದ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ ಫೇಸ್‌ಗಳು (API ಗಳು) ಮತ್ತು ಡೇಟಾ ಹಂಚಿಕೆಯ ಚಾನೆಲ್‌ಗಳನ್ನು ಹೊಂದಿರುವುದು, ಮಕ್ಕಳ ಡೇಟಾವನ್ನು ಮೂರನೇ ವ್ಯಕ್ತಿಗಳಿಗೆ ಬಹಿರಂಗಪಡಿಸಬಹುದು ಎಂಬ ಭಯವು ಇದೆ. ಅದನ್ನು ಹೊರತರುವ ಮೊದಲು, ಅಂತಹ ಯಾವುದೇ ಇಂಟರ್ ಫೇಸ್‌ಗಳನ್ನು ಸುರಕ್ಷಿತಗೊಳಿಸಬೇಕು ಮತ್ತು ಕಾನೂನು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು.

ಪ್ರಕ್ರಿಯೆಗೊಳಿಸಲಾಗುತ್ತಿರುವ ಡೇಟಾ ಮಕ್ಕಳಿಗೆ ಸಂಬಂಧಿಸಿರುವುದರಿಂದ ಸೈಬರ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅPಅಅ ಚೌಕಟ್ಟಿನಲ್ಲಿ ಹೆಚ್ಚುವರಿ ಜವಾಬ್ದಾರಿ ಇದೆ. ಕೊನೆಯದಾಗಿ ಹತ್ತನೇ ತರಗತಿಯ ಪಾಲಕರ ವೈಯಕ್ತಿಕ ದಾಖಲೆಗಳು ಶಾಲೆ ಬಳಿ ಮಾತ್ರ ಇರುತ್ತವೆ. ಆದರೂ ಸಹ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಫಲಿತಾಂಶ ಬಂದೊಡನೆ ವಿವಿಧ ಕಾಲೇಜುಗಳಿಂದ ನಮ್ಮ ಕಾಲೇಜಿಗೆ ಸೇರಿಸಿ ಎಂಬ ಹತ್ತಾರು ಕರೆಗಳು ಪಾಲಕರಿಗೆ ಬರುತ್ತದೆ.

ಹಾಗಾದರೆ ಅವರಿಗೆ ಪಾಲಕರ ವೈಯಕ್ತಿಕ ಮಾಹಿತಿ ನೀಡಿದವರಾರು? ಹಾಗಾದರೆ ಡೇಟಾ ಸುರಕ್ಷತೆ ಲೀಕ್ ಆಗಿದ್ದು ಎಲ್ಲಿಂದ? ಯಾರು ಲೀಕ್ ಮಾಡಿದರು ಎಂದು ಸರಕಾರ ಹಾಗೂ ಐಡಿ ಕ್ರಿಯೆಟ್ ಮಾಡಿದ ಶೈಕ್ಷಣಿಕ ಇಲಾಖೆಯೇ ಮಾಹಿತಿ ನೀಡಬೇಕಲ್ಲವೇ?