ಹಾಸನ: 2028ಕ್ಕೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಬರುವುದು ನಿಶ್ಚಿತ. ಈಗಿರುವ ಮುಖ್ಯಮಂತ್ರಿ ಆಗ ಇರುವುದಿಲ್ಲ. ಆಗ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್ .ಡಿ.ಕುಮಾರಸ್ವಾಮಿ(H D Kumaraswamy) ಗುಡುಗಿದ್ದಾರೆ. ಸ್ಟಿಂಗ್ ಬಗ್ಗೆ ಹಾಸನದಲ್ಲಿ ಅವರು ಮಾತನಾಡಿದರು.
ಕಲಬುರಗಿಯಲ್ಲಿ ಮಾತನಾಡಿದ ಗೃಹಸಚಿವ ಪ್ರಿಯಾಂಕ್ ಖರ್ಗೆ(Priyank Kharge), ಕುಮಾರ ಸ್ವಾಮಿ ಸ್ಟಿಂಗ್ ಬಗ್ಗೆ ದಾಖಲೆ ಕೊಡಲಿ, ಬಲಿತ ದಲಿತರ ಬಗ್ಗೆ ಇವರಿಗೇಕೆ ಕಣ್ಣುರಿ ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕ್ರನ್ನು ಬಲಿತ ದಲಿತ ಎಂದು ಎಚ್ಡಿಕೆ ಕರೆದಿದ್ದಕ್ಕೆ ಪ್ರತಿಯಾಗಿ ಅವರು ಹೀಗೆಂದು ಹೇಳಿದ್ದಾರೆ. ಹಾಸನದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇ ಶಿಸಿ ಮಾತನಾಡಿದ ಕುಮಾರಸ್ವಾಮಿ, ನನ್ನನ್ನು ಆ ಪ್ರಿಯಾಂಕ್ ಖರ್ಗೆ ಉತ್ತರ ಕುಮಾರ, ನಿರುದ್ಯೋಗಿ ಎಂದು ಕರೆದಿದ್ದಾರೆ. ಆತನನ್ನು ಗೃಹಸಚಿವ ಎಂದು ಕರೆಯಲು ಆಗುತ್ತದೆಯೇ? ಎಂದು ಹರಿಹಾಯ್ದಿದ್ದಾರೆ.
ಈ ಮಂತ್ರಿಯ ನಡೆ, ವರಸೆ ನೋಡಿದರೆ ಸ್ಟಿಂಗ್ ವಿಚಾರದಲ್ಲಿ ದೊಡ್ಡ ಹುನ್ನಾರ ನಡೆದಿದೆ ಎಂಬ ಅನುಮಾನ ಬರುತ್ತಿದೆ. ಇಡೀ ರಾಜ್ಯದ ದಿಕ್ಕು ತಪ್ಪಿಸಲು, ಸದಾಕಾಲ ಕುಮಾರಸ್ವಾಮಿಯನ್ನು ಪ್ರಚೋದಿಸಲು ಮುಖ್ಯಮಂತ್ರಿ ಪ್ರಿಯಾಂಕ್ ಖರ್ಗೆಗೆ ಸುಪಾರಿ ಕೊಟ್ಟಿರಬಹುದು ಎಂದು ವ್ಯಂಗ್ಯ ವಾಡಿದರು.
ಸ್ಟಿಂಗ್ ಮಾಡಿದ ನಿರ್ದಿಷ್ಟ ವ್ಯಕ್ತಿಯನ್ನುದ್ದೇಶಿಸಿ ಮಾತನಾಡಿದ ಎಚ್ಡಿಕೆ, ಇವನು ಈಗ ನೋಡಿದರೆ ಸಿದ್ದರಾಮಯ್ಯ ಸಾಕ್ಷಾತ್ ನಮ್ಮಪ್ಪನ ತರ ಎಂದು ಹೇಳುತ್ತಾನೆ. ಇನ್ನೊಬ್ಬರ ತಂದೆ ತಾಯಿ ಬಗ್ಗೆ ಗೌರವ ಇಲ್ಲದ ಇವನು ಯಾರಿಗೆ ಹುಟ್ಟಿದನೋ ಗೊತ್ತಿಲ್ಲ. ಬಹಳ ಮೆರೆಯುತ್ತಿರುವ ಅವನಿಗೆ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ದಾಖಲೆ ಕೊಡಿ: ಕುಮಾರಸ್ವಾಮಿ ಅವರು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಮಾಡು ತ್ತಿರುವ ಆರೋಪಗಳಿಗೆ ದಾಖಲೆಗಳಿದ್ದರೆ ಬಹಿರಂಗಪಡಿ ಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ಕಲಬುರಗಿಯ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಜನರ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಗಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡುವ ಬದಲು ತಮ್ಮ ಬಳಿ ಇರುವ ದಾಖಲೆಗಳನ್ನು ಜನರ ಮುಂದಿಡಲಿ. ತಪ್ಪು ನಡೆದಿದ್ದರೆ ತನಿಖೆ ನಡೆಸಲಿ. ತನಿಖಾ ಸಂಸ್ಥೆಗಳು ಅವರ ಬಳಿಯೇ ಇವೆ ಎಂದರು.
ಸಿಎಂ ಡಿಕೆಶಿ ಮತ್ತಿತರರು ಪಿತೂರಿ ಮಾಡಿದ್ದರಿಂದ ಸಿದ್ದು ಪತನ: ಬಿಎಸ್ವೈ
ದಾವಣಗೆರೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲರೂ ಸೇರಿ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯರನ್ನು ವ್ಯವಸ್ಥಿತ ಪಿತೂರಿ ಮಾಡಿ ಕೆಳಗಿಳಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿದ್ದರಾಮಯ್ಯ ಅವರು ಎಲ್ಲವನ್ನೂ ಶಾಂತವಾಗಿ ಗಮನಿ ಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ನೋಡೋಣ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.