ಹಾಸನ, ಮಾ. 1: ಇತ್ತೀಚೆಗೆ ಪ್ರತಿಷ್ಠಿತ ಬ್ಯಾಂಕ್‌ನಲ್ಲೇ ಗ್ರಾಹಕರು ಮೋಸ ಹೋದ ಅನೇಕ ಘಟನೆಗಳು ನಡೆದಿವೆ. ಇದೀಗ ಹಾಸನದಲ್ಲಿ (Hassan News) ರೈತ ಮತ್ತು ಬ್ಯಾಂಕ್‌ನ ನಡುವೆ ವಿಚಿತ್ರ ವಿವಾದ ಉಂಟಾದ ಘಟನೆಯೊಂದು ನಡೆದಿದೆ. 9 ರೂಪಾಯಿ 34 ಪೈಸೆ ಸಾಲ ಕಟ್ಟುವಂತೆ ಕೆನರಾ ಬ್ಯಾಂಕ್‌ನಿಂದ ರೈತರೊಬ್ಬರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ 10 ರುಪಾಯಿ ಸಾಲ ಕಟ್ಟಿ 66 ಪೈಸೆ ವಾಪಸ್ ಕೊಡಿ ಎಂದು ರೈತ ಪಟ್ಟು ಹಿಡಿದಿದ್ದಾರೆ. ಸದ್ಯ ಈ ವಿಚಾರ ವೈರಲ್ ಆಗಿದ್ದು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ.
ರೈತ ಚೊಕ್ಕಣ್ಣ ಗೌಡ ಅವರಿಗೆ ಕೆನರಾ ಬ್ಯಾಂಕ್‌ನಿಂದ ಸಾಲದ ಮರುಪಾವತಿಯಾಗದ ಬಗ್ಗೆ ಸಂದೇಶ ಬಂದಿತ್ತು. ಅವರು ಈ ಹಿಂದೆ 50,000 ರುಪಾಯಿ ಸಾಲ ಪಡೆದಿದ್ದರು. ಅದನ್ನು ಅವರು ಈಗಾಗಲೇ ತೀರಿಸಿದ್ದರು. ಆದರೆ ಕೆಲವು ತಿಂಗಳ ನಂತರ, ಸಕಲೇಶಪುರ ತಾಲೂಕಿನಲ್ಲಿರುವ ಬ್ಯಾಂಕ್ ಅವರ ಬಳಿ ಇನ್ನೂ 9.34 ರುಪಾಯಿ ಬಾಕಿ ಇದೆ ಎಂದು ನೋಟಿಸ್ ನೀಡಿದೆ. ಚೊಕ್ಕಣ್ಣ ಗೌಡ ಹೊಸ ಸಾಲಕ್ಕಾಗಿ ಬ್ಯಾಂಕ್‌ಗೆ ಹೋದಾಗ, ಕೇವಲ 99 ರೂಪಾಯಿ 34 ಪೈಸೆ ಬ್ಯಾಲನ್ಸ್‌ಗಾಗಿ ಅರ್ಜಿಯನ್ನು ತಡೆಹಿಡಿಯಲಾಗಿತ್ತು.
ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ಹೀಗಾಗಿ ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಗೆ ಬಂದು 10 ರೂಪಾಯಿ ಹಣ ಕೊಟ್ಟು ಸಾಲ ಕ್ಲಿಯರ್ ಮಾಡಿದ್ದಾರೆ. ಆದರೆ ಚಲನ್‌ನಲ್ಲಿ ಸರಿಯಾಗಿ 9.34 ರುಪಾಯಿ ಎಂದು ಬರೆದಿರುವ ಕಾರಣ ತನಗೆ ಉಳಿದ 66 ಪೈಸೆ ವಾಪಸ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. "ಬ್ಯಾಂಕ್ ನಮಗೆ ಒಂದು ಪೈಸೆ ಬಿಡುವುದಿಲ್ಲ ಎಂದಾದರೆ ನಮ್ಮ ಹಣ ನಮಗೆ ಬೇಕುʼʼ ಎಂದು ಪಟ್ಟು ಹಿಡಿದಿದ್ದಾರೆ.
ಅವರು ಸುಮಾರು 15 ರಿಂದ 20 ವರ್ಷಗಳಿಂದ ಕೆನರಾ ಬ್ಯಾಂಕ್‌ನ ನಿಷ್ಠಾವಂತ ಗ್ರಾಹಕರಾಗಿದ್ದು ಈ ದೀರ್ಘ ಸಂಬಂಧದ ಹೊರತಾಗಿಯೂ, ತಮ್ಮನ್ನು ಬ್ಯಾಂಕ್ ನ್ಯಾಯಯುತವಾಗಿ ನಡೆಸಿಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ. ನೆಟ್ಟಿಗರು ಕೂಡ ಚೊಕ್ಕಣ್ಣ ಗೌಡ ಅವರಿಗೆ ಬೆಂಬಲ ನೀಡಿದ್ದು, ರೈತನ ಲೆಕ್ಕ ಸರಿಯಾಗಿದೆ ಎಂದು ಹೇಳಿದ್ದಾರೆ.