ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nepal floods: ನೇಪಾಳದಲ್ಲಿ ಸಿಲುಕಿದ ಹಾವೇರಿ ಮೂಲದ 12 ಪ್ರವಾಸಿಗರು ಸುರಕ್ಷಿತ

Haveri News: ನೇಪಾಳಕ್ಕೆ ತೆರಳಿರುವ ಪ್ರವಾಸಿಗರು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗ್ರಾಮದವರು ಎನ್ನಲಾಗಿದೆ. 12 ಪ್ರವಾಸಿಗರು ವಿಡಿಯೊ ಮಾಡಿ ನಾವು ಸೇಫ್‌ ಆಗಿದ್ದೇವೆ ಎಂದು ತಿಳಿಸಿದ್ದಾರೆ. ನೇಪಾಳಕ್ಕೆ ಹಾವೇರಿ ಜಿಲ್ಲೆಯಿಂದ ತೆರಳಿದವರ ಮಾಹಿತಿ ಲಭ್ಯವಾಗಿದೆ.

ನೇಪಾಳ ಪ್ರವಾಹದಲ್ಲಿ ಸಿಲುಕಿದ ಹಾವೇರಿ ಮೂಲದ 12 ಪ್ರವಾಸಿಗರು ಸುರಕ್ಷಿತ

-

Prabhakara R
Prabhakara R Aug 27, 2026 8:15 PM

ಹಾವೇರಿ: ನೇಪಾಳದ ಪ್ರವಾಹ ಪ್ರದೇಶದಲ್ಲಿ (Nepal floods) ಕರ್ನಾಟಕದ ವಿವಿಧ ಜಿಲ್ಲೆಗಳ ಹಲವು ಪ್ರವಾಸಿಗರು ಸಿಲುಕಿದ್ದು, ಈ ಪೈಕಿ ಹಾವೇರಿ (Haveri) ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ 12 ಜನ ಪ್ರವಾಸಿಗರು ಸದ್ಯ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪ್ರವಾಸಿಗರು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗ್ರಾಮದವರು ಎನ್ನಲಾಗಿದ್ದು, 12 ಪ್ರವಾಸಿಗರು ವಿಡಿಯೊ ಮಾಡಿ ನಾವು ಸೇಫ್‌ ಆಗಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಶಂಭಣ್ಣ ಗೂಳಪ್ಪನವರ ಪ್ರತಿಕ್ರಿಯಿಸಿ, ನಾವೆಲ್ಲ ನೇಪಾಳ ಪ್ರವಾಸಕ್ಕೆ ಬಂದಿದ್ದೆವು. ನಮಗೇನೂ ತೊಂದರೆ ಆಗಿಲ್ಲ, ನಮ್ಮ ಕುಟುಂಬ ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ನೇಪಾಳಕ್ಕೆ ಹಾವೇರಿ ಜಿಲ್ಲೆಯಿಂದ 15 ಮಂದಿ ಪ್ರವಾಸಕ್ಕೆ ತೆರಳಿದ್ದು, ಅವರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನೇಪಾಳದಲ್ಲಿ ಸಿಲುಕಿರೋ ಹಾವೇರಿ ಜಿಲ್ಲೆ ನಿವಾಸಿಗಳು

1) ಆರ್.ಎನ್. ಗಂಗೋಳ
2) ಅನಸೂಯ
3) ಪುಟ್ಟಣ್ಣ
4) ಸುಮಾ
5) ಜಗದೀಶ್
6) ಬಸವರಾಜ
7) ಪೂರ್ಣಿಮಾ
8)ರೇಣುಕಾರಾದ್ಯ
9) ಲಕ್ಷ್ಮಣ್ ಸುಣಗಾರ
10) ರೇಖಾ
11) ಶಿವನಗೌಡ
12) ಪುಷ್ಪಾ
13) ಸುಭಲಿಂಗಪ್ಪ
14) ರೇಣುಕಾ
15) ಗೂಳಪ್ಪ

ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿಯ ಇಬ್ಬರು ಕನ್ನಡಿಗರ ರಕ್ಷಣೆ

nepal Floods

ಕಲಬುರಗಿ: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಇಬ್ಬರು ಕನ್ನಡಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರು ನೇಪಾಳ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಇವರೊಂದಿಗೆ ಹೈದರಾಬಾದ್‌ನ 23 ಮಂದಿ ಸೇರಿ ಒಟ್ಟು 25 ಜನರು ನೇಪಾಳಕ್ಕೆ ಪ್ರವಾಸ ತೆರಳಿದ್ದರು.

ಪ್ರವಾಹದ ಹಿನ್ನೆಲೆಯಲ್ಲಿ ಇಬ್ಬರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಕರ್ನಾಟಕದ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರು ಸುರಕ್ಷಿತವಾಗಿದ್ದು, ಅವರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ನೇಪಾಳದಿಂದ ಇಬ್ಬರನ್ನೂ ದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

3 ದೇಶ, 1 ಪರ್ವತ ಶ್ರೇಣಿ: ಹಠಾತ್‌ ಪ್ರವಾಹದ ಬೆನ್ನಲ್ಲೇ ಹಿಮಾಲಯ ರಕ್ಷಣೆಗೆ ಭಾರತ-ಚೀನಾಕ್ಕೆ ನೇಪಾಳ ಕರೆ

ಪ್ರವಾಹದಿಂದಾಗಿ ನೇಪಾಳದ ವಿವಿಧೆಡೆ ಪ್ರವಾಸಿಗರು ಹಾಗೂ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವೂ ಅಲ್ಲಿರುವ ಕನ್ನಡಿಗರ ಸುರಕ್ಷತೆ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ.