ನವರಾತ್ರಿ ಪೂಜೆ ವೇಳೆ ಭೀಕರ ದುರಂತ; ಕೋಲ್ಕತಾದಲ್ಲಿ ಪೆಂಡಾಲ್ ಕುಸಿದು ಕಾಲ್ತುಳಿತ, 17 ಮಂದಿ ಸಾವು
Kolkata Durga Puja Pandal Stampede: ಪಶ್ಚಿಮ ಬಂಗಾಳದಲ್ಲಿ ಭೀಕರ ದುರಂತ ಸಂಭವಿಸಿದ್ದು, ಕಾಲ್ತುಳಿತಕ್ಕೆ 17 ಮಂದಿ ಬಲಿಯಾಗಿದ್ದಾರೆ. ಕನಿಷ್ಠ 35 ಮಂದಿ ಗಾಯಗೊಂಡಿದ್ದಾರೆ. ಉತ್ತರ ಕೋಲ್ಕತಾದ ಪ್ರಸಿದ್ಧ ದುರ್ಗಾ ಪೆಂಡಾಲ್ ಶನಿವಾರ ಇದ್ದಕ್ಕಿದ್ದಂತೆ ಕುಸಿದು ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
-
ಕೋಲ್ಕತಾ, ಅ. 17: ನವರಾತ್ರಿ ಪೂಜೆ ವೇಳೆ ಪಶ್ಚಿಮ ಬಂಗಾಳದಲ್ಲಿ ಭೀಕರ ದುರಂತ ಸಂಭವಿಸಿದ್ದು, ಕಾಲ್ತುಳಿತಕ್ಕೆ 17 ಮಂದಿ ಬಲಿಯಾಗಿದ್ದಾರೆ. ಕನಿಷ್ಠ 35 ಮಂದಿ ಗಾಯಗೊಂಡಿದ್ದಾರೆ (Kolkata Durga Puja Pandal Stampede). ಉತ್ತರ ಕೋಲ್ಕತಾದ ಪ್ರಸಿದ್ಧ ದುರ್ಗಾ ಪೆಂಡಾಲ್ ಶನಿವಾರ (ಅಕ್ಟೋಬರ್ 17) ಇದ್ದಕ್ಕಿದ್ದಂತೆ ಕುಸಿದು ಈ ದುರಂತ ಸಂಭವಿಸಿದೆ. ಮೃತರಲ್ಲಿ 13 ಮಹಿಳೆಯರು ಮತ್ತು ಓರ್ವ ಮಗು ಸೇರಿದೆ. ʼʼಚೋರ್ ಬಗಾನ್ ದುರ್ಗಾ ಪೂಜಾ ಪೆಂಡಾಲ್ನಲ್ಲಿ ನಡೆದ ಭೀಕರ ದುರಂತದಲ್ಲಿ ಸುಮಾರು 17 ಮಂದಿ ಮೃತಪಟ್ಟಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ʼʼಶನಿವಾರ ಸಂಜೆ ಸುಮಾರು 7:40ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಗಿರೀಶ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾರದಾ ಪಾರ್ಕ್ನ (ಚೋರ್ ಬಗಾನ್) ದುರ್ಗಾ ಪೆಂಡಾಲ್ನಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಭಾರಿ ಮಳೆ ಸುರಿದು ಇದ್ದಕ್ಕಿದ್ದಂತೆ ಪೆಂಡಾಲ್ ಕುಸಿದು ಬಿತ್ತು. ಈ ವೇಳೆ ಹೊರಗೋಡಲು ಒಮ್ಮೆಲೆ ಜನ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತುʼʼ ಎಂದು ಕೋಲ್ಕತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಲ್ಕತಾದಲ್ಲಿ ಭೀಕರ ಕಾಲ್ತುಳಿತ:
#WATCH | North Kolkata, West Bengal | An eyewitness says, "Many people lost consciousness; some were being taken on motorcycles. I witnessed this happening all around—when people fainted, they were taken away on bikes. All of this took place, and there was a massive crowd as well..."
— ANI (@ANI) October 17, 2026
ʼʼಕಂಟ್ರೋಲ್ ರೂಂ, ಅಗ್ನಿ ಶಾಮಕ ದಳದ ಸಿಬ್ಬಂದಿ, ಕೋಲ್ಕತಾ ಪೊಲೀಸ್ ಸಿಬ್ಬಂದಿ, ಡಿಎಂಜಿ ತಂಡದ ಸದಸ್ಯರು ಕೂಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಪೆಂಡಾಲ್ ಪ್ರವೇಶವನ್ನು ನಿರ್ಬಂಧಿಸಲಾಗಿದೆʼʼ ಎಂದು ಹೇಳಿದ್ದಾರೆ. ಭಾರಿ ಮಳೆ ರಕ್ಷಣಾ ಕಾರ್ಯಾಚರಣೆಗೆ ಸ್ವಲ್ಪ ಮಟ್ಟಿನ ಅಡಚಣೆ ಉಂಟು ಮಾಡಿತು.
ಬಿಹಾರದ ದೇವಾಲಯದಲ್ಲಿ ಕಾಲ್ತುಳಿತ; 7 ಮಂದಿ ದುರ್ಮರಣ
ಮಳೆ, ಇಕ್ಕಟ್ಟಾದ ದ್ವಾರ, ವೀಕೆಂಡ್ ರಷ್
ಇಕ್ಕಟ್ಟಾದ ಆಗಮನ-ನಿರ್ಗಮನ ದ್ವಾರ, ಮಳೆ ಮತ್ತು ವೀಕೆಂಡ್ ರಷ್ ಕಾಲ್ತುಳಿತಕ್ಕೆ ಮುಖ್ಯ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. "ಪ್ರವೇಶ, ನಿರ್ಗಮನ ದ್ವಾರ ಕಿರಿದಾಗಿಯೇ ಇತ್ತು. ಆ ಪ್ರದೇಶದಲ್ಲಿ ಯಾವುದೇ ಬೆಳಕಿನ ವ್ಯವಸ್ಥೆ ಇರಲಿಲ್ಲ" ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಸುದ್ದಿ ಸಂಸ್ಥೆ ಐಎಎನ್ಎಸ್ಗೆ (IANS) ಹೇಳಿದ್ದಾರೆ. ಘಟನೆಯಲ್ಲಿ ಅವರ ಮಗಳು ಮತ್ತು ಮೊಮ್ಮಗಳು ಗಾಯಗೊಂಡಿದ್ದಾರೆ. ನೂಕುನುಗ್ಗಲು ಉಂಟಾದಾಗ ಪೆಂಡಾಲ್ನ ಒಂದು ಭಾಗ ಕುಸಿದುಬಿದ್ದು ಅನಾಹುತ ಸಂಭವಿಸಿತು ಎನ್ನಲಾಗಿದೆ.
"ಪ್ರವೇಶ ದ್ವಾರದಲ್ಲಿ ಒಂದೂವರೆ ಗಂಟೆಗಳಷ್ಟು ಉದ್ದನೆಯ ಸಾಲಿತ್ತು. ಮಳೆ ಸುರಿಯುತ್ತಿದ್ದರಿಂದ, ಜನರು ಒಳಗೆ ಹೋಗಲು ಆತುರಪಡುತ್ತಿದ್ದರು. ಆ ಜಾಗ ಬಹಳ ಕಿರಿದಾಗಿತ್ತು. ಅಲ್ಲಿ ಕತ್ತಲಿತ್ತುʼʼ ಎಂದು ವಿವರಿಸಿದ್ದಾರೆ.
ಈ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಎಷ್ಟು ಮಂದಿ?
ಪ್ರಧಾನಿ ಮೋದಿ ಸಂತಾಪ
ಕೋಲ್ಕತಾ ಕಾಲ್ತುಳಿತ ಘಟನೆಗೆ ಪ್ರದಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಸ್ಥಿತಿ ವಿಚಾರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.