ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haveri News: ನ.18ಕ್ಕೆ ಹಾವೇರಿಯಲ್ಲಿ ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾವೇಶ

All India Cooperative Week in Haveri: ಸಪ್ತಾಹದ ಏಳು ದಿನಗಳಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಲ್ಲ ವರ್ಗದ ಸಹಕಾರ ಸಂಘ ಹಾಗೂ ಸೌಹಾರ್ದ ಸಹಕಾರಿ ಸಂಘಗಳು ಸಪ್ತಾಹ ಆಚರಣೆಯನ್ನು ಅರ್ಥಪೂರ್ಣವಾಗಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಬೆಳಗಾವಿ ಡಿವಿಜನ್ ಸಹಕಾರ ಇಲಾಖೆಯ ಜಂಟಿ ನಿಬಂಧಕ ಕಲ್ಲಪ್ಪ ಓಬಣ್ಣಗೋಳ ಮಾಹಿತಿ ನೀಡಿದ್ದಾರೆ.

ನ.18ಕ್ಕೆ ಹಾವೇರಿಯಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಸಮಾವೇಶ

ಸಹಕಾರ ಸಪ್ತಾಹದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕಲ್ಲಪ್ಪ ಓಬಣ್ಣಗೋಳ ಮಾತನಾಡಿದರು. -

Prabhakara R
Prabhakara R Nov 16, 2025 8:00 PM

ಹಾವೇರಿ, ನ.16: ದೇಶಾದ್ಯಂತ ಪ್ರತಿ ವರ್ಷ ನವೆಂಬರ್ 14 ರಿಂದ 20 ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯುತ್ತದೆ. ಇದರ ಅಂಗವಾಗಿ ನ. 18 ರಂದು ಬೆಳಗ್ಗೆ 10 ಗಂಟೆಗೆ ಹಾವೇರಿಯ (Haveri News) ರಜನಿ ಕಲ್ಯಾಣ ‌ಮಂಟಪದಲ್ಲಿ ರಾಜ್ಯಮಟ್ಟದ ಬೆಳಗಾವಿ ವಿಭಾಗಮಟ್ಟದ ಸಮಾವೇಶ ನಡೆಯಲಿದೆ ಎಂದು ಬೆಳಗಾವಿ ಡಿವಿಜನ್ ಸಹಕಾರ ಇಲಾಖೆಯ ಜಂಟಿ ನಿಬಂಧಕ ಕಲ್ಲಪ್ಪ ಓಬಣ್ಣಗೋಳ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಾಹದ ಏಳು ದಿನಗಳಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಲ್ಲ ವರ್ಗದ ಸಹಕಾರ ಸಂಘ ಹಾಗೂ ಸಹೌರ್ದ ಸಹಕಾರಿ ಸಂಘಗಳು ಸಪ್ತಾಹ ಆಚರಣೆಯನ್ನು ಅರ್ಥಪೂರ್ಣವಾಗಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಳಗಾವಿ ವಿಭಾಗಮಟ್ಟದ ಏಳು ಜಿಲ್ಲೆಯ ಅಧಿಕಾರಿಗಳು ರಾಜ್ಯ ಮಟ್ಟದ ಅಧಿಕಾರಿಗಳು ಸೇರಿದಂತೆ ಸಹಕಾರಿ ಕ್ಷೇತ್ರದ ಸದಸ್ಯರು, ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.

ಅಂದು ಸಹಕಾರ ಮಹಾಮಂಡಳ ಅಧ್ಯಕ್ಷರು ಶಾಸಕರಾದ ಜಿ.ಟಿ ದೇವಗೌಡ್ರು, ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್, ಕಾನೂನು ಸಚಿವರಾದ ಎಚ್‌. ಕೆ ಪಾಟೀಲ್, ಕಾರ್ಮಿಕ ಸಚಿವ ಸಂತೋಷ ಲಾಡ್, ಸಂಸದರಾದ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಎಲ್ಲ ಶಾಸಕರು ಸೇರಿದಂತೆ ಗದಗ, ಹಾವೇರಿ, ಧಾರವಾಡ ಜಿಲ್ಲೆಯ 3754 ಸಂಘಗಳ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಸೇರಿದಂತೆ ಅಂದಾಜು 4 ಸಾವಿರಕ್ಕೂ ಹೆಚ್ಚಿಗೆ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಮಾವೇಶವು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಇನ್ನು ಪ್ರಮುಖ ಮಹಾಮಂಡಳಗಳ ನೇತೃತ್ವದ ಆತ್ಮ ನಿರ್ಭಯ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಧ್ಯೇಯವ್ಯಾಕ್ಯದೊಂದಿಗೆ ದಿ.ಕರ್ನಾಟಕ ಸೆಂಟ್ರಲ್ ಕೋ- ಅಪರೇಟಿವ್ ದಾರವಾಡ, ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಬೆಳಗಾವಿ ಪ್ರಾಂತದ ಎಲ್ಲ ಪಟ್ಟಣ ಸಹಕಾರ ಬ್ಯಾಂಕ್ ಗಳು, ತಾಲೂಕು, ಮತ್ತು ಗ್ರಾಮೀಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯೋಗದಲ್ಲಿ ಸಮಾವೇಶ ನಡೆಯಲಿದೆ.

ಸಪ್ತಾಹದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದ್ದು, ಸಹಕಾರ ಕ್ಷೇತ್ರದ ಬೆಳವಣಿಗೆಯ ಕುರಿತು ಜಾಗೃತಿ ಅರಿವು ಮೂಡಿಸುವುದು, ಇದರೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮತ್ತು ಯಶಸ್ವಿ ಸಹಕಾರ ಸಂಘಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು, ಸಾಧನೆಗಳ ಬಗ್ಗೆ ಪ್ರಚಾರ ನೀಡಲಾಗುವುದು, ಕಲಾ ತಂಡಗಳಿಂದ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ನೆರವೇರಲಿವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Bangalore News: ಪ್ರಾಧಿಕಾರದ ಸಮಗ್ರ ಅಭಿವೃದ್ದಿಗೆ ಸರ್ಕಾರದಿಂದ ಅಗತ್ಯ ಸಹಕಾರ: ಸಚಿವ ಎನ್ ಎಸ್ ಭೋಸರಾಜು ಭರವಸೆ

ಈ ಸಂದರ್ಭದಲ್ಲಿ ಹಾವೇಮುಲ್‌ ಒಕ್ಕೂಟ ಅಧ್ಯಕ್ಷರಾದ ಮಂಜನಗೌಡ ಪಾಟೀಲ್, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಶೇಗಣ್ಣಿ, ಬೆಂಗಳೂರಿನ ಪತ್ತಿನ ಸಹಕಾರ ಸಂಘಗಳ ಮಹಾಮಂಡಲದ ನಿರ್ದೇಶಕರಾದ ಡಾ.ಸಂಜಯ್ ಹೊಸಮಠ, ಬೆಂಗಳೂರಿನ ಸಹಕಾರ ಮಹಾಮಂಡಳ ನಿಯಮಿತ ನಿರ್ದೇಶಕ ಬಸವರಾಜ ಅರಬಗೊಂಡ, ಹಾವೇರಿಯ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಿವಾನಂದ ಸಂಗಾಪುರ, ಹಾವೇರಿಯ ಸಹಕಾರ ಸಂಘಗಳ ಉಪನಿಬಂಧಕರಾದ ಅಜ್ಮತ್ ಉಲ್ಲಾದ್ ಖಾನ್, ಬೆಂಗಳೂರಿನ ಮೂಕಾನಿ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಪುಂಡಲೀಕ ಕೆರೂರ, ಹಾವೇರಿಯ ಹಾವೇಮುಲ‌ ನಿರ್ದೇಶಕ ಬಸವೇಶ ಗೌಡ ಪಾಟೀಲ್, ಹಾವೇರಿಯ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕುಲಕರ್ಣಿ, ಸವಣೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್ ಜಿ ಸುಣಗಾರ, ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು.