Bangalore News: ಪ್ರಾಧಿಕಾರದ ಸಮಗ್ರ ಅಭಿವೃದ್ದಿಗೆ ಸರ್ಕಾರದಿಂದ ಅಗತ್ಯ ಸಹಕಾರ: ಸಚಿವ ಎನ್ ಎಸ್ ಭೋಸರಾಜು ಭರವಸೆ
ಅರಣ್ಯ ಇಲಾಖೆ ವತಿಯಿಂದ ಡಾ.ಎಚ್.ಎನ್ ವಿಜ್ಞಾನ ಕೇಂದ್ರದ ಸಮೀಪ ಜೀವವೈವಿಧ್ಯ ಉದ್ಯಾನವನ ಸ್ಥಾಪಿಸಿ ಅಭಿವೃದ್ದಿಪಡಿಸುವ ಬಗ್ಗೆ, 132 ಎಕರೆ ಪ್ರದೇಶದಲ್ಲಿ ಕೃಷಿ ಇಲಾಖೆ ವತಿಯಿಂದ ಮಾದರಿ ಜಲಾನಯನ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ, ಪ್ರಾಧಿಕಾರದ ವ್ಯಾಪ್ತಿ ಯಲ್ಲಿ ಬರುವ ಸಂಸ್ಥೆಗಳ ಟೂರಿಸಂ ಸರ್ಕ್ಯೂಟ್ ರಚನೆ ಬಗ್ಗೆ ಸದಸ್ಯರು ವಿಸ್ತೃತ ವಾಗಿ ಚರ್ಚಿಸಿದರು.
-
ಬೆಂಗಳೂರು : ಡಾ. ಎಚ್ ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ, ಪ್ರವಾಸೋ ದ್ಯಮ ಅಭಿವೃದ್ದಿ ಪ್ರಾಧಿಕಾರದ ಸಮಗ್ರ ಅಭಿವೃದ್ದಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ರಾಜ್ಯ ಮಟ್ಟದ ಸಲಹಾ ಸಮಿತಿಯ ಪದನಿಮಿತ್ತ ಅಧ್ಯಕ್ಷರಾದ ಎನ್ ಎಸ್ ಭೋಸರಾಜು ಅವರು ಭರವಸೆ ನೀಡಿದರು.
ಗುರುವಾರ ಎಂ.ಎಸ್ ಕಟ್ಟಡದಲ್ಲಿ ನಡೆದ ಡಾ. ಎಚ್ ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ, ಪ್ರವಾಸೋದ್ಯಮ ಅಭಿವೃದ್ದಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿಯ ಪ್ರಥಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಸಲಹಾ ಸಮಿತಿಯ ಪದನಿಮಿತ್ತ ಉಪಾಧ್ಯಕ್ಷರು ಹಾಗೂ ಸಚಿವರಾದ ಡಾ. ಎಂ. ಸಿ ಸುಧಾಕರ್, ಪ್ರಾಧಿಕಾರದ ಅಧ್ಯಕ್ಷರಾದ ಎನ್.ಎಚ್ ಶಿವಶಂಕರರೆಡ್ಡಿ, ಐಟಿ&ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಗಳಾದ ಎನ್ ಮಂಜುಳಾ ಅವರ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಪ್ರಥಮ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆ ನಡೆಸಲಾಯಿತು.
ಇದನ್ನೂ ಓದಿ: Bangalore News: ಕನ್ನಡದಲ್ಲಿ ವಿಜ್ಞಾನದ ರಸದೌತಣ: ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಿಂದ ವಿಶೇಷ ಅಭಿಯಾನ!
ಡಾ.ಎಚ್.ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ, ಪ್ರವಾಸೋದ್ಯಮ ಅಭಿವೃದ್ದಿ ಪ್ರಾಧಿಕಾರವು ದಿನಾಂಕ 07/04/2025 ರ ಸರ್ಕಾರದ ಅಧಿಸೂಚನೆಯಂತೆ ರಚನೆಯಾಗಿದೆ. ಈ ಪ್ರಾಧಿಕಾರದ ರಾಜ್ಯ ಮಟ್ಟದ ಪ್ರಥಮ ಸಲಹಾ ಸಮಿತಿ ಸಭೆಯಲ್ಲಿ ಪ್ರಾಧಿಕಾರದ ಹಿನ್ನೆಲೆ ಮತ್ತು ವ್ಯಾಪ್ತಿಯ ಸಂಸ್ಥೆಗಳ ಪರಿಚಯ ಮತ್ತು ವಸ್ತುಸ್ಥಿತಿಯನ್ನು ವಿವರಿಸ ಲಾಯಿತು. ಅಲ್ಲದೇ, ಪ್ರಾಧಿಕಾರದ ವ್ಯಾಪ್ತಿಗೆ ಸೇರಿರುವ ಸಂಸ್ಥೆಗಳ ಅಭಿವೃದ್ದಿ ಮತ್ತು ವಾರ್ಷಿಕ ನಿರ್ವಹಣೆ ಕುರಿತಂತೆ ವಿಸ್ತ್ರತವಾಗಿ ಚರ್ಚೆ ನಡೆಸಲಾಯಿತು.
ಅರಣ್ಯ ಇಲಾಖೆ ವತಿಯಿಂದ ಡಾ.ಎಚ್.ಎನ್ ವಿಜ್ಞಾನ ಕೇಂದ್ರದ ಸಮೀಪ ಜೀವವೈವಿಧ್ಯ ಉದ್ಯಾನವನ ಸ್ಥಾಪಿಸಿ ಅಭಿವೃದ್ದಿಪಡಿಸುವ ಬಗ್ಗೆ, 132 ಎಕರೆ ಪ್ರದೇಶದಲ್ಲಿ ಕೃಷಿ ಇಲಾಖೆ ವತಿಯಿಂದ ಮಾದರಿ ಜಲಾನಯನ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳ ಟೂರಿಸಂ ಸರ್ಕ್ಯೂಟ್ ರಚನೆ ಬಗ್ಗೆ ಸದಸ್ಯರು ವಿಸ್ತೃತ ವಾಗಿ ಚರ್ಚಿಸಿದರು.
ಸಚಿವ ಎನ್ ಎಸ್ ಭೋಸರಾಜು ಅವರು ಮಾತನಾಡಿ, ಡಾ. ಹೆಚ್ ನರಸಿಂಹಯ್ಯ ಪ್ರಾಧಿಕಾರದ ಸಮಗ್ರ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ. ಈ ಪ್ರಾಧಿಕಾರದ ಸಮಗ್ರ ಅಭಿವೃದ್ದಿಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಪ್ರವಾಸೋ ದ್ಯಮ ಅಭಿವೃದ್ದಿಯನ್ನು ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ರಾಜ್ಯ ಮಟ್ಟದ ಸಲಹಾ ಸಮಿತಿಯ ಮುಂದಿರುವ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸ ಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷರಾದ ಡಾ ಕಿರಣ್ ಕುಮಾರ್, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿರುವ ಡಾ ಬಿ.ಎಲ್ ಶಂಕರ್, ಐಐಎಸ್ಸ್ಸಿ ನಿವೃತ್ತ ಪ್ರಾಧ್ಯಾಪಕರಾದ ಕೆ.ಪಿ.ಜೆ ರೆಡ್ಡಿ, ಐಐಎಸ್ಸಿಸಿ ಪ್ರೋ. ಅಶೋಕ್ ರಾಯಚೂರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು..