ಹಾವೇರಿ, ಡಿ.25: ನಾಡಿದ್ದು 51 ಸಾವಿರ ಸದ್ಭಕ್ತರಿಂದ ವಚನವಂದನ ಹಾಗೂ ಗುರುವಂದನ ಎಂಬ ಐತಿಹಾಸಿಕ, ಸುವರ್ಣ ಅಕ್ಷರದಲ್ಲಿಬರೆದಿಡುವ ಮಹಾ ಸಮಾರಂಭ ಇದೇ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ನಡೆಯಲಿದೆ ಎಂದು ಡಾ. ಮಹಾಂತಪ್ರಭು ಮಹಾಸ್ವಾಮೀಜಿ ತಿಳಿಸಿದರು. ಪ್ರತಿ ವರ್ಷದಂತೆ ಹೊಸ ವರ್ಷದ ಪ್ರಥಮ ಜಾತ್ರೆ ನಡೆಸುವ ಮರಿ ಕಲ್ಯಾಣ ಖ್ಯಾತಿಯ ಶ್ರೀ ಹುಕ್ಕೇರಿ ಮಠದ (Hukkeri Matha) ಸಮಾರಂಭ ಗುರುವಾರ ಸಂಜೆ ಹುಕ್ಕೇರಿ ಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಜ್ಞಾನದ ಪರ್ವ ಹಾವೇರಿಯಲ್ಲಿ (Haveri News) ಆರಂಭವಾಯಿತು. ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಮಹಾ ವೇದಿಕೆಯಲ್ಲಿ ಜರುಗಿದ ಅದ್ಧೂರಿ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ಕಳೆದ 22 ದಿನಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಸದಾಶಿವ ಸ್ವಾಮೀಜಿ ಅವರು ದುಶ್ಚಟಗಳಿಗೆ ದಾಸರಾದವರನ್ನು ಜಾಗೃತಿ ಮಾಡಲು 75 ಹಳ್ಳಿಗಳನ್ನು ಓಡಾಡಿ ದುಶ್ಚಟಗಳನ್ನು ಕೈ ಬಿಡುವಂತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜೋಳಿಗೆಯೊಳಗೆ ಹಾಕಿಸಿಕೊಂಡರು. 4 ಲಕ್ಷ ಭಕ್ತರಿಗೆ ರುದ್ರಾಕ್ಷಿ ಧಾರಣೆ ಮಾಡಿಸಿದರು. ಯುವಕರು ಸದೃಢವಾಗಿ ಬದುಕಬೇಕು ಎನ್ನುವುದು ಹಾವೇರಿಯ ಸದಾಶಿವ ಸ್ವಾಮೀಜಿ ಅವರ ಮಹಾ ಆಶಯವಾಗಿದೆ ಎಂದು ತಿಳಿಸಿದರು.
ಕಾಯಕ ಮತ್ತು ದಾಸೋಹದ ಮೂಲಕ ಹುಕ್ಕೇರಿ ಮಠ ಕೆಲಸ ಮಾಡುತ್ತಿದೆ. ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಅಪರೂಪದ ಕ್ರಾಂತಿಯನ್ನೇ ಮಾಡುತ್ತಿದ್ದಾರೆ ಎಂದು ಹೇಳಿದರು. ಮಕ್ಕಳಿಗೆ ಅಕ್ಷರದ ಜತೆ ಸಂಸ್ಕಾರ ಕಲಿಸಬೇಕು ಎಂದು ಶ್ರೀಗಳು ತಿಳಿಸಿದರು.
ವಿಜೃಂಭಣೆಯಿಂದ ನೆರವೇರಿದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವ
ಈ ಸಂದರ್ಭದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಗುರು ಸಿದ್ದರಾಜಯೋಗೇಂದ್ರ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಮಣಕವಾಡದ ಮೃತ್ಯುಂಜಯ ಶ್ರೀಗಳು, ಶಿರಸಿಯ ಅಟವಿ ಶಿವಲಿಂಗ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಉಪಸ್ಥಿತರಿದ್ದರು.