ಹಾವೇರಿಯಲ್ಲಿ ವರುಣನ ಆರ್ಭಟ: ರೈತರ ಮುಖದಲ್ಲಿ ಮಂದಹಾಸ, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ
Haveri News: ಹಾವೇರಿ ಜಿಲ್ಲೆಯ ರೈತರಿಗೆ ಶನಿವಾರ ಸುರಿದ ಧಾರಾಕಾರ ಮಳೆ ಹೊಸ ಆಶಾಕಿರಣ ಮೂಡಿಸಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ವೇಳೆಗೆ ಸುರಿದ ಉತ್ತಮ ಮಳೆಯಿಂದ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳು ತಂಪಾದ ವಾತಾವರಣಕ್ಕೆ ಸಾಕ್ಷಿಯಾದವು.
ಹಾವೇರಿಯಲ್ಲಿ ಶನಿವಾರ ಸುರಿದ ಧಾರಾಕಾರ ಮಳೆ. -
ಹಾವೇರಿ, ಆ.01: ಹಲವು ದಿನಗಳಿಂದ ಮಳೆಯ ಕೊರತೆಯಿಂದ ಆತಂಕಕ್ಕೊಳಗಾಗಿದ್ದ ಜಿಲ್ಲೆಯ (Haveri News) ರೈತರಿಗೆ ಶನಿವಾರ ಸುರಿದ ಧಾರಾಕಾರ ಮಳೆ ಹೊಸ ಆಶಾಕಿರಣ ಮೂಡಿಸಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ವೇಳೆಗೆ ಸುರಿದ ಉತ್ತಮ ಮಳೆಯಿಂದ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳು ತಂಪಾದ ವಾತಾವರಣಕ್ಕೆ ಸಾಕ್ಷಿಯಾದವು. ನಿರಂತರ ಮಳೆಗೆ ಜೀವಕಳೆ ಬಂದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆ ಮುಂದುವರಿದರೆ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿಯೂ ಕೆಲಕಾಲ ನೀರು ಹರಿದರೂ, ವಾಹನ ಸಂಚಾರ ಎಂದಿನಂತೆಯೇ ಮುಂದುವರಿಯಿತು. ಮಳೆಯ ಕಾರಣದಿಂದ ಜನರು ಛತ್ರಿ ಹಾಗೂ ರೇನ್‌ಕೋಟ್‌ಗಳೊಂದಿಗೆ ಸಂಚರಿಸಿದ್ದು ಕಂಡುಬಂತು. ವ್ಯಾಪಾರಿಗಳು ಮತ್ತು ಸಾರ್ವಜನಿಕರು ಕೂಡ ಬಿಸಿಲಿನ ತಾಪದಿಂದ ಕೊಂಚ ನೆಮ್ಮದಿ ಕಂಡರು.
ಕಳ್ಳತನವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಎಸ್ಪಿ ಯಶೋಧಾ ವಂಟಗೋಡಿ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳು ಹಾಗೂ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚುವ ನಿರೀಕ್ಷೆ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಕೃಷಿ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.