ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿವರಾಜ ಅರಳಿ ಅವರ ʼಕಣ್ಣ ಬಾನಲ್ಲಿ ಬೆಂಕಿಯ ಚಿತ್ರʼ ಕೃತಿಗೆ ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿ

Haveri News: ಹಾವೇರಿ ತಾಲೂಕಿನ ಮೇಲ್ಮರಿ ಗ್ರಾಮದ ಕವಿ, ಕಥೆಗಾರ ಶಿವರಾಜ ಅರಳಿ ಅವರ ‘ಕಣ್ಣ ಬಾನಲ್ಲಿ ಬೆಂಕಿಯ ಚಿತ್ರʼ ಕೃತಿಗೆ ಬೆಳಗಾವಿಯ ಬಿ.ಎ. ಸನದಿ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಪ್ರತಿಷ್ಠಿತ ‘ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿʼ ಲಭಿಸಿದೆ.

ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿಗೆ ಶಿವರಾಜ ಅರಳಿ ಕೃತಿ ಆಯ್ಕೆ

-

Profile
Siddalinga Swamy Nov 7, 2026 7:11 PM

ಹಾವೇರಿ, ನ.07: ತಾಲೂಕಿನ ಮೇಲ್ಮರಿ ಗ್ರಾಮದ ಕವಿ, ಕಥೆಗಾರ ಶಿವರಾಜ ಅರಳಿ ಅವರ ‘ಕಣ್ಣ ಬಾನಲ್ಲಿ ಬೆಂಕಿಯ ಚಿತ್ರʼ ಕೃತಿಗೆ ಬೆಳಗಾವಿಯ ಬಿ.ಎ. ಸನದಿ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಪ್ರತಿಷ್ಠಿತ ‘ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿʼ ಲಭಿಸಿದೆ. ನ.15ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಆಡಳಿತ ಮಂಡಳಿ ತಿಳಿಸಿದೆ.

ಶಿವರಾಜ ಅರಳಿ ಅವರು ಈವರೆಗೆ ‘ಬೆವರ ಹನಿಗಳುʼ, ‘ಬರಡಾದ ಬಾನಂಗಳʼ ಹಾಗೂ ‘ಕಣ್ಣ ಬಾನಲ್ಲಿ ಬೆಂಕಿಯ ಚಿತ್ರʼ ಸೇರಿದಂತೆ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ನಿರುಪಾಯʼ ಮತ್ತು ‘ಲೋಕಲ್ ಟ್ರೇನ್ʼ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಶಿವರಾಜ ಅರಳಿ ಅವರಿಗೆ ಡಿ.ಎಸ್. ಕರ್ಕಿ ಯುವ ಕಾವ್ಯ ಪ್ರಶಸ್ತಿ, ಬೆಟಗೇರಿ ಕೃಷ್ಣ ಶರ್ಮ ಕಾವ್ಯ ಪ್ರಶಸ್ತಿ, ಆಜೂರ ಪುಸ್ತಕ ಪ್ರಶಸ್ತಿ, ಶಿಭಾ ಕಾವ್ಯ ಪುರಸ್ಕಾರ ಹಾಗೂ ಹಾವೇರಿ ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಯುವ ಕವಿಗೋಷ್ಠಿ, ಮೈಸೂರು ದಸರಾ ಯುವ ಕವಿಗೋಷ್ಠಿ ಸೇರಿದಂತೆ ರಾಜ್ಯದ ವಿವಿಧ ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದಾರೆ. ಇವರ ಕಥೆ, ಕವಿತೆಗಳು ಮಯೂರ, ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಆಕಾಶವಾಣಿ ಧಾರವಾಡದಲ್ಲಿಯೂ ಪ್ರಸಾರಗೊಂಡಿವೆ. ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರʼ ಯೋಜನೆಯ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದೆ.