ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್‌ನ ‘ವೋಟ್ ಚೋರ್’ ಆರೋಪಕ್ಕೆ ಹಾವೇರಿ ಪ್ರಕರಣವೇ ಸಾಕ್ಷಿ ಎಂದ ಜೆಡಿಎಸ್ ಮುಖಂಡ ಅಲ್ತಾಫ್ ನದಾಫ್

ಪಶ್ಚಿಮ ಪದವೀಧರರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯ ಮತದಾನದ ವೇಳೆ ಹಾವೇರಿ ನಗರದ 85ನೇ ಮತಗಟ್ಟೆಯಲ್ಲಿ ಮತದಾನ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಅವರು, ಜನರ ಆಶೋತ್ತರಗಳನ್ನು ಈಡೇರಿಸುವುದಾಗಿ ಹಾಗೂ ನುಡಿದಂತೆ ನಡೆಯುವುದಾಗಿ ಹೇಳುವ ಕಾಂಗ್ರೆಸ್‌ನ ನೈಜ ನಡೆ ಏನು ಎಂಬುದು ಈ ಪ್ರಕರಣದಿಂದ ಬಹಿರಂಗವಾಗಿದೆ ಎಂದು ಟೀಕಿಸಿದ್ದಾರೆ.

ಹಾವೇರಿ: ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುವಂತಹ ಮತದಾನ ಅಕ್ರಮದ ಆರೋಪ ಹಾವೇರಿಯಲ್ಲಿ ಕೇಳಿಬಂದಿದೆ. ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಮಾಡುತ್ತಿರುವ ‘ವೋಟ್ ಚೋರ್’ ಆರೋಪಗಳು ಹಾಸ್ಯಾಸ್ಪದವಾಗಿದ್ದು, ಇದೀಗ ಹಾವೇರಿಯ 85ನೇ ಮತಗಟ್ಟೆಯಲ್ಲಿ ನಡೆದಿರುವು ದಾಗಿ ಆರೋಪಿಸಲಾದ ನಕಲಿ ಮತದಾನ ಪ್ರಕರಣ ಕಾಂಗ್ರೆಸ್‌ನ ನಡೆಗೆ ಪ್ರಶ್ನೆ ಎತ್ತಿದೆ ಎಂದು ಜೆಡಿಎಸ್(JDS) ಮುಖಂಡ ಅಲ್ತಾಫ್ ನದಾಫ್ ಆರೋಪಿಸಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯ ಮತದಾನದ ವೇಳೆ ಹಾವೇರಿ ನಗರದ 85ನೇ ಮತಗಟ್ಟೆಯಲ್ಲಿ ಮತದಾನ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಅವರು, ಜನರ ಆಶೋತ್ತರಗಳನ್ನು ಈಡೇರಿಸುವುದಾಗಿ ಹಾಗೂ ನುಡಿದಂತೆ ನಡೆಯುವುದಾಗಿ ಹೇಳುವ ಕಾಂಗ್ರೆಸ್‌ನ ನೈಜ ನಡೆ ಏನು ಎಂಬುದು ಈ ಪ್ರಕರಣದಿಂದ ಬಹಿರಂಗವಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Haveri News: ಪ.ಪದವೀಧರ ಕ್ಷೇತ್ರದ ಕೈ ಗೆಲುವು ಖಚಿತ: ಉಸ್ತುವಾರಿ ಮಿನಿಸ್ಟರ್ ಆರ್.ಲಮಾಣಿ

ಮತದಾನದ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಚುನಾ ವಣಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ. ಹೀಗಾಗಿ, ಮತದಾನ ಅಕ್ರಮದ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರುದ್ರಪ್ಪ ಲಮಾಣಿ ರಾಜೀನಾಮೆಗೆ ಆಗ್ರಹ

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ತಕ್ಷಣ ರಾಜೀನಾಮೆ ನೀಡಬೇಕು. ಹಾವೇರಿ ಯ 85ನೇ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದ ಚುನಾವಣಾ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು. ನಕಲಿ ಮತದಾನ ಮಾಡಿದ್ದಾರೆಂದು ಆರೋಪಿಸಲಾಗಿರುವ ಶಿಲ್ಪಾ ಬಡೆಮ್ಮನವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲ್ತಾಫ್ ನದಾಫ್ ಒತ್ತಾಯಿಸಿದ್ದಾರೆ.

ಅಲ್ಲದೆ, ಈ ಪ್ರಕರಣದ ಹಿಂದೆ ಯಾರಾದರೂ ಸಂಚು ರೂಪಿಸಿದ್ದರೆ, ಅಂತಹವರನ್ನು ತನಿಖೆಯ ಮೂಲಕ ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಮತದಾನದ ಪಾವಿತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಕೃತ್ಯ ನಡೆದಿದ್ದರೂ ಅದನ್ನು ನಿರ್ಲಕ್ಷಿಸಬಾರದು. ಪ್ರಕರಣದ ಸತ್ಯಾಸತ್ಯತೆ ಹೊರ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.