ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Theft case: ಹಾಡಹಗಲೇ ಕಾರಲ್ಲಿದ್ದ 33 ಲಕ್ಷ‌ ಕದ್ದಿದ್ದ ಖದೀಮ ಅರೆಸ್ಟ್

Theft case: ಹಾವೇರಿ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಉದ್ಯಮಿಯೊಬ್ಬರ ಕಾರಿನಲ್ಲಿದ್ದ 33 ಲಕ್ಷ ರೂ.ಗಳನ್ನು ದೋಚಿ ಮೂವರು ಕಳ್ಳರು ಪರಾರಿಯಾಗಿದ್ದರು. ಈ ಪೈಕಿ ಒಬ್ಬ ಆರೋಪಿಯನ್ನು ಆಂಧ್ರದಲ್ಲಿ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಾಡಹಗಲೇ ಕಾರಲ್ಲಿದ್ದ 33 ಲಕ್ಷ‌ ಕದ್ದಿದ್ದ ಖದೀಮ ಅರೆಸ್ಟ್

Profile Prabhakara R Mar 10, 2025 7:36 PM

ಹಾವೇರಿ: ಉದ್ಯಮಿಯೊಬ್ಬರ ಕಾರಲ್ಲಿದ್ದ 33 ಲಕ್ಷ ರೂ.ಗಳನ್ನು ಹಾಡಹಗಲೇ ದೋಚಿದ್ದ ಖದೀಮನನ್ನು ಪೊಲೀಸರು ಬಂಧಿಸಿರುವ ಘಟನೆ (Theft case) ಹಾವೇರಿಯಲ್ಲಿ ನಡೆದಿದೆ. ಶಾಸಕ ಬಸವರಾಜ ಶಿವಣ್ಣನವರ ಅವರ ಮನೆ ಮುಂದಿನ ಸಂತೋಷ ಹಿರೇಮಠ ಎಂಬ ಉದ್ಯಮಿ ಕಾರಿನ ಗ್ಲಾಸ್ ಒಡೆದು 33 ಲಕ್ಷ ಹಣ ಕದ್ದಿದ್ದ ಅಂತಾರಾಜ್ಯ ಕಳ್ಳನನ್ನು ಮೂರೇ ದಿನದಲ್ಲಿ ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ತನಿಖಾ ತಂಡವು ಆಂಧ್ರದಲ್ಲಿ ಆರೋಪಿಯನ್ನು ಬಂಧಿಸಿ, 30 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದೆ.

ಎ.ಜಿ ಜಗದೀಶ್‌ ಬಂಧಿತ ಆರೋಪಿ. ಹಾವೇರಿ ಶಹರದ ಬಸವೇಶ್ವರ ನಗರದ 9ನೇ ಕ್ರಾಸ್‌ನ ನಿವಾಸಿ ಸಂತೋಷ್ ಈರಯ್ಯ ಹಿರೇಮಠ್ ಮೂರು ದಿನದ ಹಿಂದೆ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಹಣ ಡ್ರಾ ಮಾಡಿದ್ದನ್ನು ಗಮನಿಸಿ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಚಾಲಾಕಿ ಕಳ್ಳರು, ಮನೆಯ ಮುಂದೆ ಕಾರು ನಿಲ್ಲಿಸಿದ್ದಾಗ ಹಣ ಎಗರಿಸಿದ್ದರು. ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದು ಹಣ ದೋಚಿ ಪರಾರಿಯಾಗಿದ್ದರು.

ಹಣ ಕಳವು ವಿಷಯ ತಿಳಿದಾಕ್ಷಣ ಸಂತೋಷ್ ಹಿರೇಮಠ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮನೆ ಬಳಿ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿದ್ದ ಸಿಸಿ ಕ್ಯಾಮೆರಾಗಳ ಫುಟೇಜ್‌ಗಳನ್ನು ಸಂಗ್ರಹಿಸಿದ್ದರು. ಪ್ರಕರಣದ ತನಿಖೆಗೆ ಜಿಲ್ಲಾ ಎಸ್ಪಿ ಅಂಶುಕುಮಾರ್‌ ಅವರ ಮಾರ್ಗದರ್ಶನದಲ್ಲಿ ನಾಲ್ಕು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಸಿಪಿಐ ಮೋತಿಲಾಲ್ ಪವಾರ್ ನೇತೃತ್ವದ ತಂಡವು ಆಂಧ್ರದ ಓಜಿ ಕುಪ್ಪಂ ಗ್ರಾಮದ ಬಳಿ ಅಡಗಿದ್ದ ಆರೋಪಿ ಎ.ಜಿ ಜಗದೀಶ್‌ನನ್ನು ದಸ್ತಗಿರಿ ಮಾಡಿ, ಕಳ್ಳತನವಾದ 33 ಲಕ್ಷ ಹಣದಲ್ಲಿ 30 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

Theft case (2)

ಈ ಬಗ್ಗೆ ಎಸ್ಪಿ ಅಂಶುಕುಮಾರ್ ಮಾತನಾಡಿ, ಕಳೆದ ಮೂರು ದಿನದ ಹಿಂದೆ ಬಸವೇಶ್ವರ ನಗರದ ಸಂತೋಷ್ ಹಿರೇಮಠ್ ಅವರ ಕಾರಿನಲ್ಲಿ ಹಣ ಕಳ್ಳತನ ನಡೆದಿತ್ತು. ಯೂನಿಯನ್ ಬ್ಯಾಂಕ್‌ನಿಂದ ಸಂತೋಷ್‌ ಹಿರೇಮಠ್ ‌ಅವರು ಹಣ ಡ್ರಾ ಮಾಡಿದ್ದನ್ನು ಕಂಡಿದ್ದ ಕಳ್ಳರು ಫಾಲೋ ಮಾಡಿಕೊಂಡು ಬಂದು ಕಾರ್‌ ಗ್ಲಾಸ್ ಒಡೆದು ಹಣ ಕದ್ದಿದ್ದರು. ಈ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಕಳ್ಳರ ಪತ್ತೆಗಾಗಿ ‌ನಾಲ್ಕು ತನಿಖಾ ತಂಡ ರಚಿಸಿ ಎಲ್ಲ ರೀತಿಯ ಸಾಕ್ಷ್ಯ ಕಲೆಹಾಕಿ ಕಳ್ಳರನ್ನು ಹಿಡಿಯಲಾಗಿದೆ‌. ಇವರು ಅಂತಾರಾಜ್ಯ ಕಳ್ಳರಾಗಿದ್ದು, ಬೆಂಗಳೂರಿಗೆ ಹೋಗಿ ಅಲ್ಲಿಂದ ಆಂಧ್ರಕ್ಕೆ ಎಸ್ಕೇಪ್ ಆದ ಬಗ್ಗೆ ಮಾಹಿತಿ ಇತ್ತು. ಈ ಗ್ಯಾಂಗ್ ಬೇರೆ, ಬೇರೆ ರಾಜ್ಯದಲ್ಲಿ ಇದೇ ರೀತಿ ಹಲವೆಡೆ ಕಳ್ಳತನ ಮಾಡಿದ್ದಾರೆ‌. ಈಗ ಒಬ್ಬ ಆರೋಪಿ ಎ.ಜಿ ಜಗದೀಶ್ ಎಂಬ ಸಿಕ್ಕಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ. ಮೂವರು ಕಳ್ಳರು ಹಾವೇರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಉಳಿದ ಇಬ್ಬರು ಕಳ್ಳರಿಗಾಗಿ ಪತ್ತೆಗಾಗಿ ಬಲೆ ಬೀಸಲಾಗಿದೆ. ಅವರನ್ನು ಸದ್ಯದಲ್ಲಿ ಪತ್ತೆ ಮಾಡಿ ಬಂಧಿಸುತ್ತೇವೆ ಎಂದರು.

ಈ ಸುದ್ದಿಯನ್ನೂ ಓದಿ | Tumkur News: 52 ಗ್ರಾಂ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ!

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಲ್.ವೈ ಶಿರಕೋಳ, ಡಿವಾಎಸ್ಪಿ ಎಂ.ಎಸ್ ಪಾಟೀಲ್, ಸಿಪಿಐಗಳಾದ ಮೋತಿಲಾಲ್ ಪವಾರ್, ಸಂತೋಷ ಪವಾರ್, ಮಹಾಂತೇಶ ಲಂಬಿ, ಸಿದ್ದಾರೂಢ ಬಡಿಗೇರ್ ಮತ್ತಿತರರು ಹಾಜರಿದ್ದರು.