Viral Video: ವಿವಾಹದ ಸಂಭ್ರಮದಲ್ಲಿದ್ದವರಿಗೆ ಶಾಕ್ ; ನವದಂಪತಿಯ 88 ಲಕ್ಷ ಮೌಲ್ಯದ ಗಿಫ್ಟ್ ಬಾಕ್ಸ್ ಎಗರಿಸಿದ ಕಳ್ಳ
ಅಮೆರಿಕದ ಕ್ಯಾಲಿಫೋರ್ನಿಯಾದ ಗ್ಲೆಂಡೇಲ್‌ನಲ್ಲಿ ಆಗಸ್ಟ್ 30ರಂದು ನಡೆದ ವಿವಾಹ ಸಮಾರಂಭದಲ್ಲಿ ಆನಂದದ ಸಮಯ ದುರಂತವಾಗಿ ಮಾರ್ಪಟ್ಟಿದೆ. ಜಾರ್ಜ್ (George) ಮತ್ತು ನದೀನ್ ಫರಾಹತ್ ಜೋಡಿಯ ವಿವಾಹ ನಡೆಯುತ್ತಿತ್ತು. ಈ ಶುಭ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 70 ರಿಂದ 88 ಲಕ್ಷ ರೂ. (80,000 ರಿಂದ 1,00,000 ಡಾಲರ್) ಮೌಲ್ಯದ ನಗದು ಮತ್ತು ಚೆಕ್‌ಗಳಿರುವ ಉಡುಗೊರೆಯ ಬಾಕ್ಸ್ ಕದ್ದು ಪರಾರಿಯಾಗಿದ್ದಾನೆ.

ಘಟನೆಯ ದೃಶ್ಯ -

ಗ್ಲೆಂಡೇಲ್: ಅಮೆರಿಕದ ಕ್ಯಾಲಿಫೋರ್ನಿಯಾದ (California) ಗ್ಲೆಂಡೇಲ್‌ನಲ್ಲಿ ಆಗಸ್ಟ್ 30ರಂದು ನಡೆದ ವಿವಾಹ ಸಮಾರಂಭದಲ್ಲಿ (Wedding Ceremony) ಆನಂದದ ಸಮಯದಲ್ಲಿ ಶಾಕ್ ಎದುರಾಗಿದೆ. ಜಾರ್ಜ್ (George) ಮತ್ತು ನದೀನ್ ಫರಾಹತ್ (Nadeen Farahat ) ಜೋಡಿಯ ವಿವಾಹ ನಡೆಯುತ್ತಿತ್ತು. ಈ ಶುಭ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 70 ರಿಂದ 88 ಲಕ್ಷ ರೂ. (80,000 ರಿಂದ 1,00,000 ಡಾಲರ್) ಮೌಲ್ಯದ ನಗದು ಮತ್ತು ಚೆಕ್‌ಗಳಿರುವ ಉಡುಗೊರೆಯ ಬಾಕ್ಸ್ ಕದ್ದು ಪರಾರಿಯಾಗಿದ್ದಾನೆ. ಇನ್ನೂ ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನವ ಜೋಡಿಗಳಿಗೆ ಅಪಾರ ಆಘಾತವನ್ನುಂಟುಮಾಡಿದೆ.
ಕಪ್ಪು ಬಟ್ಟೆ ಧರಿಸಿದ್ದ ಬೋಳುತಲೆಯ ವ್ಯಕ್ತಿಯೊಬ್ಬ ಸುಮಾರು 90 ನಿಮಿಷಗಳ ಕಾಲ ಸಮಾರಂಭದಲ್ಲಿ ಸಾಮಾನ್ಯವಾಗಿ ಓಡಾಡುತ್ತಿದ್ದ. ರಾತ್ರಿ 11 ಗಂಟೆ ಸುಮಾರಿಗೆ ಆತ ಸಭಾಂಗಣಕ್ಕೆ ಪ್ರವೇಶಿಸಿ, ಕುಟುಂಬದವರ, ವಧು-ವರರ ಬಳಿ ಸಾಮಾನ್ಯವಾಗಿ ಎಲ್ಲರಂತೆ ಓಡಾಡಿ ನಂತರ ವಿಶ್ರಾಂತಿ ಕೊಠಡಿಗೆ ತೆರಳಿ, ಪಾನೀಯ ಆರ್ಡರ್ ಮಾಡಿದ್ದಾನೆ. ಕೊನೆಗೆ, ಸಮಾರಂಭ ಇನ್ನೇನು ಮುಗಿಯುವ ವೇಳೆ, ಆತ ದೊಡ್ಡ ಉಡುಗೊರೆಯ ಬಾಕ್ಸ್ ಒಂದನ್ನು ಎಗರಿಸಿ ಹೊರಗಡೆ ನಿಲ್ಲಿಸಿದ್ದ ಕಪ್ಪು ಮರ್ಸಿಡಿಸ್ SUVನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ಗ್ಲೆಂಡೇಲ್ ಪೊಲೀಸ್ ಠಾಣೆಗೆ ಆಗಸ್ಟ್ 31ರ ಮಧ್ಯರಾತ್ರಿ 12:50ಕ್ಕೆ ಕರೆ ಬಂದಿದ್ದು, ಆರೋಪಿಯನ್ನು 40 ವರ್ಷದ ಮಧ್ಯವಯಸ್ಕ ಎಂದು ತಿಳಿಸಲಾಗಿದೆ. ಸಧ್ಯ ತನಿಖೆ ಮುಂದುವರಿದಿದೆ ಆದ್ರೆ ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನೂ ಕೆಲವರು ಇದು ಒಳಗಿನವರದ್ದೇ ಕೆಲಸ ಎಂದು ಊಹಿಸಿದ್ದಾರೆ.
Security cameras captured a wedding crasher stealing a gift box worth up to $100,000 meant for the new couple. 😳
— My Mixtapez (@mymixtapez) September 3, 2025
pic.twitter.com/Znk3Wjk90H
ಈ ಸುದ್ದಿಯನ್ನು ಓದಿ: Crime News: ನನ್ನ ಸಂಪಾದನೆ ಎಲ್ಲಾ ಅವ್ಳ ಖರ್ಚಿಗೆ ಸಾಕಾಗ್ತಿತು; ಪತ್ನಿಯ ಕಾಟಕ್ಕೆ ಬೇಸತ್ತು ಅವಳಿಗೇ ಗುಂಡಿಟ್ಟ ಪತಿ
ಈ ಕುರಿತು ನದೀನ್ ಫರಾಹತ್ ಮಾತನಾಡಿ, “ಘಟನೆ ತಿಳಿದ ತಕ್ಷಣ ಸಂಗೀತ ನಿಂತಿತು, ಆನಂತರ ಎಲ್ಲವೂ ಒಡನೆಯೇ ನಿಂತಿತು. ನಮ್ಮ ಜೀವನದ ಈ ಸಂಭ್ರಮದ ಕ್ಷಣವನ್ನು ಯಾರೋ ಗುರಿಯಾಗಿಸಿಕೊಂಡು ಈ ರೀತಿ ಮಾಡಿರುವುದು ಆಘಾತ ತಂದಿದೆ” ಎಂದು ಆಕೆ ಹೇಳಿದ್ದಾರೆ. ಜಾರ್ಜ್ ಫರಾಹತ್ ಕೂಡ ಈ ವೇಳೆ ಮಾತನಾಡಿ, “ಘಟನೆಯಲ್ಲಿ ಇತರೆ ಯಾರಿಗೂ ತೊಂದರೆಯಾದಿರುವುದೇ ಸಮಾಧಾನ. ನಾವು ಈಗ ವಿವಾಹದ ಆನಂದವನ್ನು ಕೇಂದ್ರೀಕರಿಸುತ್ತಿದ್ದೇವೆ” ಎಂದು ಧೈರ್ಯದಿಂದ ಹೇಳಿದ್ದಾರೆ.
ಇನ್ನೂ ನವದಂಪತಿ, ಆರೋಪಿ ಬಗ್ಗೆ ಮಾಹಿತಿ ನೀಡಿ ಬಂಧನಕ್ಕೆ ಸಹಕರಿಸಿದವರಿಗೆ 5,000 ಡಾಲರ್ ಬಹುಮಾನ ಘೋಷಿಸಿದ್ದಾರೆ. ಇನ್ನೂ ಈ ಬಗ್ಗೆ ರೆನೈಸನ್ಸ್ ಬ್ಯಾಂಕ್ವೆಟ್ ಹಾಲ್ ಪ್ರತಿಕ್ರಿಯಿಸಿಲ್ಲ. ತನಿಖೆ ಮುಂದುವರಿದಿದ್ದು, ಈ ಘಟನೆಯು ವಿವಾಹ ಸಮಾರಂಭಗಳ ಸುರಕ್ಷತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.