Shah Rukh Khan: ಶಾರುಖ್ ಖಾನ್ ʼಕಿಂಗ್ʼ ಸಿನಿಮಾ ಚಿತ್ರೀಕರಣದ ವಿಡಿಯೋ ವೈರಲ್
ನಟ ಶಾರುಖ್ ಖಾನ್ ಅವರು ಇತ್ತೀಚೆಗಷ್ಟೇ ಕಿಂಗ್ ಸಿನಿಮಾದ ಚಿತ್ರೀಕರಣಕ್ಕಾಗಿ ಪೋಲೆಂಡ್‌ಗೆ ತೆರಳಿದ್ದು ಭಾರತೀಯ ಸಿನಿಮಾ ರಂಗದ ಖ್ಯಾತ ನಟರಾದ ಅರ್ಷದ್ ವಾರ್ಸಿ ಜೊತೆ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇವರಿಬ್ಬರು ಸಿನಿಮಾ ಸೆಟ್ ನಲ್ಲಿ ಇರುವ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Shah Rukh Khan -

ನವದೆಹಲಿ: ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರು ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇವರ ಅಭಿನಯದ 'ಪಠಾಣ್', 'ಜವಾನ್' 'ಡಂಕಿ' ಸಿನಿಮಾಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಭರ್ಜರಿ ಯಶಸ್ಸು ಪಡೆದಿತ್ತು. ಇದಾದ ಬಳಿಕ ಅವರು ಸದ್ಯ ಅವರು ಕಿಂಗ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆ ಗಷ್ಟೆ ಈ ಸಿನಿಮಾದ ಚಿತ್ರೀಕರಣ ವೇಳೆಯಲ್ಲಿ ಅವರು ಗಾಯಗೊಂಡಿದ್ದಾರೆ ಎಂಬ ಸುದ್ದಿ ತುಂಬಾ ವೈರಲ್ ಆಗಿತ್ತು. ಇದರಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿದೆ ಎಂದು ಸಹ ವರದಿಯಾಗಿತ್ತು. ಇದೀಗ ಅದೇ ಸಿನಿಮಾದ ಶೂಟಿಂಗ್ ನ ಕೆಲಸ ಕಾರ್ಯದಲ್ಲಿ ಇದೀಗ ಅವರು ಮತ್ತೊಮ್ಮೆ ಬ್ಯುಸಿ ಯಾಗಿದ್ದಾರೆ. ನಟ ಶಾರುಖ್ ಖಾನ್ ಅವರು ಇತ್ತೀಚೆಗಷ್ಟೇ ಕಿಂಗ್ ಸಿನಿಮಾದ ಚಿತ್ರೀಕರಣಕ್ಕಾಗಿ ಪೋಲೆಂಡ್‌ಗೆ ತೆರಳಿದ್ದು ಭಾರತೀಯ ಸಿನಿಮಾ ರಂಗದ ಖ್ಯಾತ ನಟರಾದ ಅರ್ಷದ್ ವಾರ್ಸಿ ಜೊತೆ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇವರಿಬ್ಬರು ಸಿನಿಮಾ ಸೆಟ್ ನಲ್ಲಿ ಇರುವ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಇಬ್ಬರು ದಿಗ್ಗಜ ನಟರ ಕಾಂಬೀನೇಶನ್ ನಲ್ಲಿ ಮೂಡಿ ಬರುವ ಕಿಂಗ್ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುತ್ತಿದೆ ಎನ್ನಬಹುದು.
ನಟ ಶಾರುಖ್ ಖಾನ್ ಅವರು ಶೂಟಿಂಗ್ ವೇಳೆಯಲ್ಲಿ ಇದ್ದ ಕೆಲವು ವಿಡಿಯೋ ಕೂಡ ಇದೀಗ ಮತ್ತೆ ವೈರಲ್ ಆಗಿದೆ. ನಟ ಶಾರುಖ್ ಖಾನ್ ಅವರು ಶೂಟಿಂಗ್ ಸ್ಥಳದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಕ್ಯಾಮೆರಾ ಸೆಟಪ್‌ನಿಂದ ಸುತ್ತು ವರೆದಿರುವ ದೃಶ್ಯವನ್ನು ಕೂಡ ವೈರಲ್ ವಿಡಿಯೋದಲ್ಲಿ ಕಾಣಬಹುದು. ಅವರು ವಿಭಿನ್ನವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಮೈಯಲ್ಲಿ ಕೆಲವು ವಿಭಿನ್ನ ಟ್ಯಾಟೂಗಳು ಸಹ ಕಂಡುಬಂದಿವೆ.
KING from the Set of KING 👑
— Аffап Pатнаап (@Affantweetts) September 4, 2025
Third 1000cr+ loading for #ShahRukhKhan𓀠 pic.twitter.com/t4SZ0uY5ck
ಮತ್ತೊಂದು ವೈರಲ್ ವೀಡಿಯೊದಲ್ಲಿ ನಟ ಶಾರುಖ್ ಖಾನ್ ಹಾಗೂ ಅರ್ಷದ್ ವಾರ್ಸಿ ಇಬ್ಬರು ಕೂಡ ಬಹಳ ವಿಭಿನ್ನವಾದ ಲುಕ್ ನಿಂದ ಕಾಣಿಸಿಕೊಂಡಿದ್ದಾರೆ. ಅವರು ಕಾರಿನಿಂದ ಇಳಿಯುವಾಗ ಅವರ ಮ್ಯಾನೇಜರ್ ಪೂಜಾ ದಡಲಾನಿ ಕೂಡ ಅವರೊಂದಿಗೆ ಇರುವ ವಿಡಿಯೋ ಸಹ ವೈರಲ್ ಆಗಿದೆ. ಇದರಲ್ಲಿ ಈ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಸಹ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ:Ramayana Movie: 'ರಾಮಾಯಣ’ ಚಿತ್ರಕ್ಕೆ ಆಯ್ಕೆಯಾದ ಪ್ರಸಿದ್ಧ ಹಾಲಿವುಡ್ ತಂತ್ರಜ್ಞರು!
ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಕಿಂಗ್' ಸಿನಿಮಾವು ಹೈ ಆ್ಯಕ್ಷನ್ ಸಿಕ್ವೆನ್ಸ್ ಕಥೆ ಹೊಂದಿದ್ದ ಸಿನಿಮಾ ಎನ್ನಬಹುದು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಮತ್ತು ಅಭಯ್ ವರ್ಮಾ ಸೇರಿ ದಂತೆ ಬಹುದೊಡ್ಡ ತಾರಾಗಣ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಬಹುದೊಡ್ಡ ನಿರೀಕ್ಚೆ ಹುಟ್ಟಿಸಿದೆ ಎಂದೇ ಹೇಳಬಹುದು. ಕಳೆದ ಜುಲೈ ತಿಂಗಳಲ್ಲಿ ನಟ ಶಾರುಖ್ ಖಾನ್ ಅವರು ಈ ಸಿನಿಮಾದ ಶೂಟಿಂಗ್ ವೇಳೆ ಭಾಗಿಯಾಗಿದ್ದ ವೇಳೆ ಗಂಭೀರ ಗಾಯಗಳಾಗಿದ್ದವು. ಆದರೆ ಈಗ ಅವರು ಚೇತರಿಸಿಕೊಂಡ ಕಾರಣ ಮತ್ತೆ ಶೂಟಿಂಗ್ ಪ್ರಕ್ರಿಯೆ ಬರದಿಂದ ಸಾಗುತ್ತಿದೆ. ಈ ಮೂಲಕ ಸಿನಿಮಾ ಪೋರ್ಶನ್ ಗಳು ಶೀಘ್ರವೇ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದ್ದು 2026ರಲ್ಲಿ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ.