ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ಹೃದಯಾಘಾತದಿಂದ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Heart Failure: ಬೆಂಗಳೂರಿನ ಕಾಲೇಜ್ ಒಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ನವೀನ್ ರಜೆ ಇದ್ದ ಕಾರಣ ಊರಿಗೆ ಬಂದಿದ್ದ. ಮನೆಯಲ್ಲಿ ಇದ್ದಾಗಲೇ ಎದೆನೋವಿನಿಂದ ಕುಸಿದುಬಿದ್ದಿದ್ದಾನೆ. ಚಿಕಿತ್ಸೆಗಾಗಿ ಚನ್ನರಾಯಪಟ್ಟಣಕ್ಕೆ ಕರೆದುಕೊಂಡು ಹೋದರೂ ಮಾರ್ಗ ಮಧ್ಯದಲ್ಲೇ ನವೀನ್ ಮೃತಪಟ್ಟಿದ್ದಾನೆ.

ಹೃದಯಾಘಾತದಿಂದ ಇಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಹರೀಶ್‌ ಕೇರ ಹರೀಶ್‌ ಕೇರ Aug 13, 2025 9:01 AM

ಮಂಡ್ಯ: ರಾಜ್ಯದಲ್ಲಿ ಯುವಜನತೆಯಲ್ಲಿ ಹೃದಯವೈಫಲ್ಯದಿಂದ (Heart failure) ಸಾವನ್ನಪ್ಪುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇದೀಗ ಮಂಡ್ಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ (Engineering student) ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕರೋಟಿ ಗ್ರಾಮದ 21 ವರ್ಷದ ನವೀನ್ ಮೃತಪಟ್ಟ ವಿದ್ಯಾರ್ಥಿ. ಬೆಂಗಳೂರಿನ ಕಾಲೇಜ್ ಒಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ನವೀನ್ ರಜೆ ಇದ್ದ ಕಾರಣ ಊರಿಗೆ ಬಂದಿದ್ದ. ಮನೆಯಲ್ಲಿ ಇದ್ದಾಗಲೇ ಎದೆನೋವಿನಿಂದ ಕುಸಿದುಬಿದ್ದು ಹೃದಯಘಾತದಿಂದ ಮೃತಪಟ್ಟಿದ್ದಾನೆ.

ಕೂಡಲೇ ಪೋಷಕರು ಕಿಕ್ಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಚನ್ನರಾಯಪಟ್ಟಣಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದು, ಚನ್ನರಾಯಪಟ್ಟಣಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ನವೀನ್ ಮೃತಪಟ್ಟಿದ್ದಾನೆ.

ಕರ್ತವ್ಯನಿರತ ಎಎಸ್‌ಐ ಹೃದಯಾಘಾತದಿಂದ ಸಾವು

ಬಾಗಲಕೋಟೆ : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಬಾಗಲಕೋಟೆಯಲ್ಲಿ ಕರ್ತವ್ಯನಿರತ ಎಎಸ್‌ಐ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಎಎಸ್ ಐ ಮಹಾಂತಯ್ಯ ಮಠ (52) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಹಾಂತಯ್ಯ ಮಠ ಅವರು ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಎಎಸ್ ಐ ಆಗಿದ್ದರು.

ಮಹಾಂತಯ್ಯ ಮಠ ಅವರಿಗೆ ನಿನ್ನೆ ಮಧ್ಯಾಹ್ನ 3 ಗಂಟೆಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮಹಾಂತಯ್ಯ ಸಾವನ್ನಪ್ಪಿದ್ದಾರೆ. ಮೃತ ಮಹಾಂತಯ್ಯ ವಿಜಯಪುರ ಜಿಲ್ಲೆಯ ಜಂಬಗಿ ಗ್ರಾಮದ ನಿವಾಸಿಯಾಗಿದ್ದರು. ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ: Cauvery Wildlife Sanctuary: ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು