ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Hoskote Accident: 7 ಮಂದಿಯನ್ನು ಬಲಿ ಪಡೆದ ಭೀಕರ ಅಪಘಾತ ಸಂಭವಿಸಿದ್ದು ಹೇಗೆ? ಸತ್ತವರು ಯಾರು?

ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಯುವಿ 700 ಕಾರು ಮೊದಲು ಕಾರಿನಿಂದ ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆ ಮೇಲೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

7 ಮಂದಿಯನ್ನು ಬಲಿ ಪಡೆದ ಭೀಕರ ಅಪಘಾತ ಸಂಭವಿಸಿದ್ದು ಹೇಗೆ? ಸತ್ತವರು ಯಾರು?

ಹೊಸಕೋಟೆ ಅಪಘಾತದಲ್ಲಿ ಛಿದ್ರಗೊಂಡ ಕಾರು -

ಹರೀಶ್‌ ಕೇರ
ಹರೀಶ್‌ ಕೇರ Feb 13, 2026 2:09 PM

ಬೆಂಗಳೂರು, ಫೆ.13: ಗ್ರಾಮಾಂತರ (Bengaluru) ಜಿಲ್ಲೆಯ ಹೊಸಕೋಟೆ ತಾಲೂಕು (Hoskote Accident) ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಶುಕ್ರವಾರ ಬೆಳಗ್ಗೆ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ಆರು ಮಂದಿ ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.

ಈ ದುರ್ಘಟನೆ ಹೊಸಕೋಟೆ– ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕ್ಯಾಂಟರ್ ವಾಹನ, ಬೈಕ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 700 ಕಾರಿನ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಿಂದ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಯನ್ನು ಸ್ಥಳದಲ್ಲಿನ ಚಿತ್ರಣಗಳೇ ಬಿಚ್ಚಿಡುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಯುವಿ 700 ಕಾರು ಮೊದಲು ಕಾರಿನಿಂದ ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆ ಮೇಲೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಎಲ್ಲಾ ಏರ್‌ಬ್ಯಾಗ್‌ಗಳು ಬ್ಲಾಸ್ಟ್

ಕ್ಯಾಂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಲ್ಲಾ ಏರ್ ಬ್ಯಾಗ್‌ಗಳು ಓಪನ್ ಆಗಿದೆ. ಡಿಕ್ಕಿಯ ರಭಸಕ್ಕೆ ಎಲ್ಲಾ ಏರ್‌ಬ್ಯಾಗ್‌ಗಳು ಕೂಡ ಬ್ಲಾಸ್ಟ್ ಆಗಿ ಧ್ವಂಸವಾಗಿದೆ. ಕ್ಯಾಂಟರ್‌ನ ವೀಲ್ ಕಟ್ ಆಗಿ ರಸ್ತೆಗೆ ಉರುಳಿದೆ. ಅಪಘಾತದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಕಾರಿನಿಂದ ಓಪನ್ ಆಗಿರುವ ಏರ್ ಬ್ಯಾಗ್‌ಗಳು ಬಿಚ್ಚಿಡುತ್ತಿವೆ.

Road Accident: ಹೊಸಕೋಟೆಯಲ್ಲಿ ಭೀಕರ ರಸ್ತೆ ಅಪಘಾತ, 7 ಮಂದಿ ಸಾವು

ಅಪಘಾತದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಎಕ್ಸ್‌ಯುವಿ 700 ಕಾರಿನ ನೋಂದಣಿ ಸಂಖ್ಯೆ KA 03 NW 0138 ಆಗಿದ್ದು, ಕಾರಿನ ಗುರುತೇ ಸಿಗದಂತಾಗಿದೆ. ಸರಣಿ ಅಪಘಾತಕ್ಕೆ ಕಾರಿನ ಅತೀವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಕಾರಣವಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮೃತಪಟ್ಟವರ ಮಾಹಿತಿ ಹೀಗಿದೆ:

ಅಶ್ವಿನ್ ನಾಯರ್ 17 ವರ್ಷ ಆರ್ ವಿ ಪಿಯು ಕಾಲೇಜ್ , ಕೊತ್ತನೂರು ನಿವಾಸಿ

ಅರ್ಹನ್ ಶರೀಫ್, ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್ ವಿ ಆರ್ ಲೇಔಟ್ ನಿವಾಸಿ

ಅಯನ್ ಅಲಿ 17 ವರ್ಷ ಸಿ ಎಂ ಆರ್ ಸ್ಕೂಲ್

ಭರತ್ 18 ವರ್ಷ , ಸಿಎಂಆರ್ ಕಾಲೇಜ್, ಫ್ರೇಜನ್ ಟೌನ್ ನಿವಾಸಿ.

ಈತನ್ ಜಾರ್ಜ್ 17 ವರ್ಷ. ಆರ್ ವಿ 1st ಪಿಯು ಕಾಲೇಜ್( ಹುಳಿಮಾವು ನಿವಾಸಿ)

ಫರ್ಹಾನ್, 17 ವರ್ಷ

ಗಗನ್ 26 ವರ್ಷ ( ಬೈಕ್ ಸವಾರ ) ಸಫಲ್ ನಲ್ಲಿ ಕೆಲಸ