ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಲಬುರಗಿಯ 48 ಜಿ.ಪಂ., 175 ತಾ.ಪಂ. ಕ್ಷೇತ್ರಗಳ ಸಂಪೂರ್ಣ ಪಟ್ಟಿ ಪ್ರಕಟ: ಜಿ.ಪಂ.-ತಾ.ಪಂ. ಕ್ಷೇತ್ರಗಳ ಮೀಸಲಾತಿ ಫೈನಲ್

ಜಿಲ್ಲಾ ಪಂಚಾಯಿತಿ(Zilla Panchayat) ಹಾಗೂ ತಾಲ್ಲೂಕು ಪಂಚಾಯಿತಿ(Taluk Panchayat) ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟಿಸಿದ್ದು, ಕಲಬುರಗಿ ಜಿಲ್ಲೆಯ 48 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪ್ರವರ್ಗವಾರು ಮೀಸಲಾತಿ ಅಂತಿಮಗೊಂಡಿದೆ.

ಕಲಬುರಗಿ: ಜಿಲ್ಲಾ ಪಂಚಾಯಿತಿ(Zilla Panchayat) ಹಾಗೂ ತಾಲ್ಲೂಕು ಪಂಚಾಯಿತಿ(Taluk Panchayat) ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟಿಸಿದ್ದು, ಕಲಬುರಗಿ ಜಿಲ್ಲೆಯ 48 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪ್ರವರ್ಗವಾರು ಮೀಸಲಾತಿ ಅಂತಿಮಗೊಂಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನ.23ರಂದು ಅಂತಿಮ ಮೀಸಲಾತಿ ಪ್ರಕಟಿಸಿದೆ. ಇದಕ್ಕೂ ಮುನ್ನ ಅ.9ರಂದು ಕರಡು ಮೀಸಲಾತಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ರಾಜ್ಯಾದ್ಯಂತ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.

ಕಲಬುರಗಿ ಜಿಲ್ಲೆಯ 48 ಜಿ.ಪಂ. ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ವಿವಿಧ ಪ್ರವರ್ಗಗಳಲ್ಲಿ ಮಹಿಳಾ ಮೀಸಲಾತಿಯನ್ನೂ ಪ್ರಕಟಿಸಲಾಗಿದೆ.

ಇದನ್ನೂ ಓದಿ: Local Body Election: ಸ್ಥಳೀಯ ಚುನಾವಣೆಗೆ ಅಭ್ಯರ್ಥಿಗಳು ರೆಡಿಯಾಗಿ, ಗ್ರಾಮೀಣ ಭಾಗದಲ್ಲಿ ಸೂಚಿಸಿದ ವ್ಯಕ್ತಿಯನ್ನು ಕಣಕ್ಕಿಳಿಸಲಾಗುವುದು: ಆರ್.ರಾಜೇಂದ್ರ

48 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಪೂರ್ಣ ಪಟ್ಟಿ

ಪರಿಶಿಷ್ಟ ಜಾತಿ: ಅವರಾದ (ಬಿ), ಆಂದೋಲಾ, ನರೋಣಾ, ಸೊಂತ, ತೆಂಗಳಿ, ಮಳ್ಳಿ, ಕುಂಚಾವರಂ.

ಪರಿಶಿಷ್ಟ ಜಾತಿ (ಮಹಿಳೆ): ಕುಸನೂರ, ನಿಂಬರ್ಗಾ, ಅತನೂರ, ಅರಣಕಲ್, ಮುಧೋಳ, ನಿಡಗುಂದಾ, ಭೀಮನಳ್ಳಿ.

ಹಿಂದುಳಿದ ವರ್ಗ ‘ಅ’: ದೇವಲ ಗಾಣಗಾಪೂರ, ಕೋಲಕುಂದಾ, ಭಂಕೂರ.

ಹಿಂದುಳಿದ ವರ್ಗ ‘ಅ’ (ಮಹಿಳೆ): ನೆಲೋಗಿ, ಖಜೂರಿ, ಕರಜಗಿ, ದಂಡೋತಿ.

ಹಿಂದುಳಿದ ವರ್ಗ ‘ಬ’: ಜಿಡಗಾ.

ಹಿಂದುಳಿದ ವರ್ಗ ‘ಬ’ (ಮಹಿಳೆ): ಕೋಡ್ಲಿ.

ಪರಿಶಿಷ್ಟ ಪಂಗಡ (ಮಹಿಳೆ): ಐನೊಳ್ಳಿ.

ಸಾಮಾನ್ಯ: ಪಟ್ಟಣ, ಫರಹತಾಬಾದ, ಮಂದೇವಾಲ, ಕೋಳಕೂರ, ಸರಸಂಬಾ, ಬಡದಾಳ, ಗೊಬ್ಬುರ ಬಿ, ವಿ.ಕೆ.ಸಲಗರ, ಹೆಬ್ಬಾಳ, ಇಜೇರಿ, ಮಳಖೇಡ, ಕೋಡ್ಲಾ, ಇಂಗಳಗಿ.

ಸಾಮಾನ್ಯ (ಮಹಿಳೆ): ನಂದಿಕೂರ, ಖಣದಾಳ, ತಡಕಲ, ಮಾದನಹಿಪ್ಪರಗಾ, ಮಹಾಗಾಂವ, ಅರಳಗುಂಡಗಿ, ಆಡಕಿ, ಚಿಮ್ಮನಚೋಡ, ಸುಲೇಪೇಟ, ನಾಲವಾರ, ರಾವೂರ.

11 ತಾಲ್ಲೂಕು ಪಂಚಾಯಿತಿಗಳ 175 ಕ್ಷೇತ್ರಗಳು

ಜಿಲ್ಲೆಯ 11 ತಾಲ್ಲೂಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 175 ಕ್ಷೇತ್ರಗಳಿವೆ. ತಾಲ್ಲೂಕುವಾರು ಕ್ಷೇತ್ರಗಳ ಸಂಖ್ಯೆ ಹೀಗಿದೆ:

ಜೇವರ್ಗಿ — 16 ಕ್ಷೇತ್ರಗಳು

ಚಿಂಚೋಳಿ — 18 ಕ್ಷೇತ್ರಗಳು

ಸೇಡಂ — 18 ಕ್ಷೇತ್ರಗಳು

ಕಲಬುರಗಿ — 21 ಕ್ಷೇತ್ರಗಳು

ಆಳಂದ — 23 ಕ್ಷೇತ್ರಗಳು

ಕಮಲಾಪುರ — 13 ಕ್ಷೇತ್ರಗಳು

ಅಫಜಲಪುರ — 20 ಕ್ಷೇತ್ರಗಳು

ಕಾಳಗಿ — 12 ಕ್ಷೇತ್ರಗಳು

ಯಡ್ರಾಮಿ — 11 ಕ್ಷೇತ್ರಗಳು

ಚಿತ್ತಾಪುರ — 14 ಕ್ಷೇತ್ರಗಳು

ಶಹಾಬಾದ — 9 ಕ್ಷೇತ್ರಗಳು

ಹೀಗೆ ಜಿಲ್ಲೆಯ 48 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲ್ಲೂಕು ಪಂಚಾಯಿತಿ ಸೇರಿ ಒಟ್ಟು 223 ಕ್ಷೇತ್ರಗಳ ಅಂತಿಮ ಮೀಸಲಾತಿ ಪ್ರಕಟವಾಗಿದೆ.

ಚುನಾವಣಾ ಪ್ರಕ್ರಿಯೆ ಮುಂದಕ್ಕೆ

ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದ ಬಳಿಕ ಚುನಾವಣಾ ಪೂರ್ವ ಪ್ರಕ್ರಿಯೆಗಳು ಮುಂದುವರಿಯಲಿವೆ. ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಡಿಸೆಂಬರ್ ಮಧ್ಯಭಾಗದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದ್ದು, 2027ರ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಾರಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಮತಪತ್ರ ಬಳಸಲು ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

ಕಲಬುರಗಿ ಜಿಲ್ಲೆಯ ಒಟ್ಟು ಕ್ಷೇತ್ರಗಳು

ಜಿಲ್ಲಾ ಪಂಚಾಯಿತಿ — 48

ತಾಲ್ಲೂಕು ಪಂಚಾಯಿತಿ — 175

ಒಟ್ಟು — 223