Local Body Election: ಸ್ಥಳೀಯ ಚುನಾವಣೆಗೆ ಅಭ್ಯರ್ಥಿಗಳು ರೆಡಿಯಾಗಿ, ಗ್ರಾಮೀಣ ಭಾಗದಲ್ಲಿ ಸೂಚಿಸಿದ ವ್ಯಕ್ತಿಯನ್ನು ಕಣಕ್ಕಿಳಿಸಲಾಗುವುದು: ಆರ್.ರಾಜೇಂದ್ರ
ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಯಾವ ಸಮಯದಲ್ಲಾದರೂ ಘೋಷಣೆಯಾಗುವ ಸಂಭವ ವಿದ್ದು ಜನಪರ ಕೆಲಸ ಮಾಡಿರುವವರು ಚುನಾವಣೆಗೆ ಸಿದ್ಧರಾಗಬೇಕು ಎಂದು ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ(Council Member R.Rajendra Rajan) ಹೇಳಿದರು.
ಮೈದನಹಳ್ಳಿ ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ರಾಜಣ್ಣ -
ಮಧುಗಿರಿ: ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ(Local Body Election)ಗಳು ಯಾವ ಸಮಯದಲ್ಲಾದರೂ ಘೋಷಣೆಯಾಗುವ ಸಂಭವವಿದ್ದು ಜನಪರ ಕೆಲಸ ಮಾಡಿರುವವರು ಚುನಾವಣೆಗೆ ಸಿದ್ಧರಾಗ ಬೇಕು ಎಂದು ತುಮಕೂರು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ(Council Member R.Rajendra Rajanna) ಹೇಳಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಸಿಂಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೈದನ ಹಳ್ಳಿ ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ನೂತನ ಸ್ಥಿರಬಿಂಬ ವಿಗ್ರಹಗಳ ಪುನರ್ ಜೀರ್ಣೋದ್ಧಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶನಿವಾರ ದೇವಾಲಯಕ್ಕೆ ಭೇಟಿ ನೀಡಿ, ಆಂಜನೇಯಸ್ವಾಮಿ ಹಾಗೂ ಸಾಯಿಬಾಬಾ ದರ್ಶನ ಪಡೆದ ಬಳಿಕ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿ, ಧಾರ್ಮಿಕ ಪರಂಪರೆ, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ದೇವಾಲಯಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ಗ್ರಾಮದ ಧಾರ್ಮಿಕ ಪರಂಪರೆ ಮತ್ತು ಭಕ್ತರ ಶ್ರದ್ಧಾ ಭಾವನೆಗೆ ಸಾಕ್ಷಿಯಾಗಿರುವ ಈ ಪವಿತ್ರ ಕಾರ್ಯವು ಯಶಸ್ವಿಯಾಗಿ ನೆರವೇರಲಿ, ಶ್ರೀ ಮಲ್ಲೇಶ್ವರಸ್ವಾಮಿಯ ಕೃಪಾಶೀರ್ವಾದ ಸಮಸ್ತ ಗ್ರಾಮಸ್ಥರ ಮೇಲೆ ಸದಾ ಇರಲಿ ಎಂದರು.
ಇದನ್ನೂ ಓದಿ: MLC Election Result: ಕೊನೆಗೂ ಖಾತೆ ತೆರೆದ ಕೈ ಪಡೆ; ಆರ್ಎಸ್ಎಸ್ ಭದ್ರಕೋಟೆ ನಾಗಪುರದಲ್ಲಿ ಕಾಂಗ್ರೆಸ್ ಜಯಭೇರಿ
ಈ ದೇಗುಲಕ್ಕೆ 1.5 ಕೋಟಿ ಖರ್ಚಾಗಿದೆ. ಜೀರ್ಣೋದ್ಧಾರಕ್ಕೆ ಹಲವಾರು ದಾನಿಗಳು ಹಾಗೂ ಗ್ರಾಮಸ್ಥರು ಸಹಕಾರ ನೀಡಿದ್ದು, ಉತ್ತಮ ಅಭಿವೃದ್ಧಿ ಆಗಲಿ. ಈಗಾಗಲೇ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 250 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಎತ್ತಿನಹೊಳೆ (Ettinahole)ಯಿಂದ ಮುಂದಿನ ವರ್ಷ ನೀರು ಬರಲಿದ್ದು ತಾಲ್ಲೂಕಿನ ಎಲ್ಲ ಕೆರೆಗಳಿಗೂ ತುಂಬಿಸು ವಂತಹ ಕೆಲಸ ಮಾಡೋಣ.
ಎಲೆಕ್ಷನ್ ಗೆ ರೆಡಿಯಾಗಿ: ಸ್ಥಳೀಯ ನಾಯಕತ್ವ ಬಲಗೊಳಿಸಲು ಕಾರ್ಯಕರ್ತರು ಸೂಚಿಸಿದ ಅಭ್ಯರ್ಥಿಯನ್ನು ಸ್ಥಳೀಯ ಚುನಾವಣೆಯಲ್ಲಿ ಗೆಲ್ಲಿಸೋ ರೀತಿ ಎಲ್ಲರೂ ಕೆಲಸ ಮಾಡೋಣ. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಅಗತ್ಯ ಸಹಕಾರ ನೀಡಲು ನಿಮ್ಮ ಜೊತೆ ನಾನಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆ.ಎಂ.ಎಫ್(KMF) ಮಾಜಿ ನಿರ್ದೇಶಕ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಮುಖಂಡರಾದ ನಾರಾಯಣ ರೆಡ್ಡಿ, ವೆಂಕಟೇಶ್, ನಂಜುಂಡರೆಡ್ಡಿ, ದೊಡ್ಡಮಾಲೂರು ಮಾಜಿ ತಾಪಂ ಸದಸ್ಯ ವೆಂಕಟೇಶ್, ನಾಗೇಂದ್ರ, ಶ್ರೀನಿವಾಸಮೂರ್ತಿ, ನಂಜುಂಡರೆಡ್ಡಿ, ಕೃಷ್ಣಪ್ಪ, ನಂದಗಿರಿಸ್ವಾಮಿ, ಆರ್'ಟಿಒ ರಾಜು, ನಾರಾಯಣಪ್ಪ, ಕಿರಣ್, ರಾಮೇಗೌಡ, ಭಕ್ತಾದಿಗಳು ಹಾಗೂ ಸಾರ್ವಜನಿಕರು ಇದ್ದರು.