ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಲ್‌ಪಿಜಿ ದರ ಏರಿಕೆ ಖಂಡಿಸಿ ಕಲಬುರಗಿ ಡಿಸಿ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ

Kalaburagi News: ಆಟೋ ರಿಕ್ಷಾಗಳಿಗೆ ಬಳಸುವ ಆಟೋ ಎಲ್‌ಪಿಜಿ (Auto LPG) ದರ ಏರಿಕೆಯನ್ನು ಖಂಡಿಸಿ ನೂರಾರು ಆಟೋ ಚಾಲಕರು, ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಆಟೋಗಳ ಸಮೇತ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಆಟೋ ಎಲ್‌ಪಿಜಿ ದರ ಏರಿಕೆ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿಯಲ್ಲಿ ಆಟೋ ಎಲ್‌ಪಿಜಿ ದರ ಏರಿಕೆ ಖಂಡಿಸಿ ಆಟೋ ಚಾಲಕರಿಂದ ಪ್ರತಿಭಟನೆ. -

Profile
Siddalinga Swamy Mar 28, 2026 6:27 PM

ಕಲಬುರಗಿ‌, ಮಾ.28: ಆಟೋ ಎಲ್‌ಪಿಜಿ (Auto LPG) ದರ ಏರಿಕೆ ಖಂಡಿಸಿ ನೂರಾರು ಆಟೋ ಚಾಲಕರು ಕಲಬುರಗಿ (Kalaburagi News) ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಟೋಗಳ ಸಮೇತ ಶನಿವಾರ ಪ್ರತಿಭಟನೆ ನಡೆಸಿದರು. ಕೇವಲ 20 ದಿನಗಳ ಅವಧಿಯಲ್ಲಿ ಎಲ್‌ಪಿಜಿ ದರವು ಲೀಟರ್‌ಗೆ ಸರಿಸುಮಾರು 30 ರಿಂದ 40 ರೂಪಾಯಿಗಳಷ್ಟು ಏರಿಕೆಯಾಗಿದೆ. ನೆನ್ನೆಯವರೆಗೆ ಪ್ರತಿ ಲೀಟರ್‌ಗೆ 85 ರೂಪಾಯಿ ಇದ್ದ ದರವು, ಇಂದು ಏಕಾಏಕಿ 99.95 ರೂಪಾಯಿಗೆ ಜಿಗಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆಟೋ ಚಾಲಕರು ನಗರದ ಪ್ರಕಾಶ್ ಮಾಲ್ ಬಳಿಯಿರುವ 'ಗೋ ಗ್ಯಾಸ್' ಬಂಕ್ ಸೇರಿದಂತೆ ವಿವಿಧ ಪಂಪ್‌ಗಳನ್ನು ಬಂದ್ ಮಾಡಿಸಿ ಪ್ರತಿಭಟಿಸಿದರು.

ಬಾಡಿಗೆ ಇಲ್ಲ, ಸಂಸಾರ ಸಾಗಿಸುವುದು ಹೇಗೆ?

ಗ್ಯಾಸ್ ಬೆಲೆ ನೂರರ ಗಡಿ ತಲುಪುತ್ತಿದೆ, ಆದರೆ ಗ್ರಾಹಕರು ನಮಗೆ ಹೆಚ್ಚಿನ ಬಾಡಿಗೆ ನೀಡುತ್ತಿಲ್ಲ. ದರ ಏರಿಕೆಯ ಬಗ್ಗೆ ಹೇಳಿದರೆ ಜನರು ಆಟೋ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರದ ಅಧಿಕೃತ ಆದೇಶವಿಲ್ಲದಿದ್ದರೂ ಬಂಕ್ ಮಾಲೀಕರು ತಮಗಿಷ್ಟ ಬಂದಂತೆ ದರ ಏರಿಸಿ ನಮಗೆ ಬರೆ ಎಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಟೋಗಳನ್ನು ಓಡಿಸುವುದಕ್ಕಿಂತ ಮನೆಯಲ್ಲೇ ನಿಲ್ಲಿಸುವುದು ಉತ್ತಮ ಎಂದು ಚಾಲಕರು ತಮ್ಮ ಅಳಲು ತೋಡಿಕೊಂಡರು.

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ; ಕಲಬುರಗಿಯಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ

ಜಿಲ್ಲಾಡಳಿತಕ್ಕೆ ಎಚ್ಚರಿಕೆ

ಜಿಲ್ಲೆಯಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ದರ ನಿಯಂತ್ರಿಸಬೇಕು ಮತ್ತು ಗ್ಯಾಸ್ ಸರಬರಾಜು ಸುಗಮಗೊಳಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.