ಬೆಂಗಳೂರಿನ ಹೋಟೆಲ್‌ನಲ್ಲಿ ಕುರಿ ಮಟನ್ ಎಂದು ಗೋಮಾಂಸದ ಆಹಾರ ಮಾರಾಟ; ಕೇರಳ ಮೂಲದ ಇಬ್ಬರ ಬಂಧನ
ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ಗೆ ತೆರಳಿದ್ದ ಗ್ರಾಹಕರೊಬ್ಬರು ಕುರಿ ಮಾಂಸದ ಆಹಾರ ಸೇವಿಸುವಾಗ ಅನುಮಾನ ಬಂದಿತ್ತು. ಈ ಕುರಿತು ಅವರು ಆವಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಆವಲಹಳ್ಳಿ ಪೊಲೀಸರು, ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದಾಗ ಬೀಫ್ ಮಾರುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
-
ಬೆಂಗಳೂರು: ಕುರಿ ಮಾಂಸದ ಖಾದ್ಯವೆಂದು ಗ್ರಾಹಕರನ್ನು ನಂಬಿಸಿ ಗೋಮಾಂಸದ ಆಹಾರ (Selling beef) ನೀಡುತ್ತಿದ್ದ ಬೆಂಗಳೂರಿನ ಪ್ರತಿಷ್ಠಿಯ ಹೋಟೆಲ್‌ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಜಿಜು ಹಾಗೂ ಶೀಂಬು ಬಂಧಿತರು. ಆರೋಪಿಗಳು ಕಳೆದ ಆರು ತಿಂಗಳಿನಿಂದ ಬೂದಿಗೆರೆ ಸಮೀಪ 'ಕಾಯಲೋರಮ್ ರೆಸ್ಟೋರೆಂಟ್' ನಡೆಸುತ್ತಿದ್ದರು. ಇತ್ತೀಚೆಗೆ ಹೋಟೆಲ್‌ಗೆ ತೆರಳಿದ್ದ ಗ್ರಾಹಕರೊಬ್ಬರು ಕುರಿ ಮಾಂಸದ ಆಹಾರ ಸೇವಿಸುವಾಗ ಅನುಮಾನ ಬಂದಿತ್ತು. ಈ ಕುರಿತು ಅವರು ಆವಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪಶು ವೈದ್ಯರೊಂದಿಗೆ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಈ ಹೋಟೆಲ್‌ನಲ್ಲಿದ್ದ ಮಾಂಸದ ಖಾದ್ಯವನ್ನು ಜಪ್ತಿ ಮಾಡಲಾಗಿತ್ತು. ಅದನ್ನು ಪರಿಶೀಲಿಸಿದಾಗ ಗೋಮಾಂಸದ ಖಾದ್ಯವೆಂಬುದು ಗೊತ್ತಾಗಿದೆ.
ಹೀಗೊಂದು ಕೋತಿ ಚೇಷ್ಟೆ: ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟಿನ ಮಳೆಗೈದ ಮಂಗ
ಹೆಚ್ಚಿನ ಲಾಭದ ಆಸೆಗೆ ಗೋಮಾಂಸ ಬೆರಕೆ?
ಆರೋಪಿಗಳು ಹೆಚ್ಚಿನ ಲಾಭದ ಆಸೆಗೆ ಮಾಂಸದ ಆಹಾರದಲ್ಲಿ ಕಲಬೆರಕೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಅವರು ದನದ ಮಾಂಸವನ್ನು ಎಲ್ಲಿಂದ ತರುತ್ತಿದ್ದರು, ಹೋಟೆಲ್‌ನ ಇತರ ಸಿಬ್ಬಂದಿಗೆ ಈ ವಿಚಾರ ಗೊತ್ತಿತ್ತೇ? ಈ ದಂಧೆಯ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.