ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kalaburagi Murder Case: ಕೇಳಿದ್ದೆಲ್ಲ ಕೊಡಿಸಿದರೂ 57ರ ಶಿಕ್ಷಕಿಯನ್ನು ಸುಟ್ಟು ಹಾಕಿದ್ದೇಕೆ 27 ವರ್ಷದ ಪಾಗಲ್‌ ಪ್ರೇಮಿ?

27ರ ಹರೆಯದ ಅಮರನಿಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರೂ, 57ರ ಪ್ರಾಯದ ಟೀಚರ್ ಜ್ಯೋತಿ ನೀಡುತ್ತಿದ್ದ ಹಣದ ಆಮಿಷಕ್ಕೆ ಬಿದ್ದು ಆಕೆಯೊಂದಿಗೆ ಸಂಬಂಧ ಮುಂದುವರಿಸಿದ್ದ. ಜ್ಯೋತಿ ನೀಡಿದ್ದ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣದಲ್ಲಿ ಅಮರ್ ಐಷಾರಾಮಿ 'ಥಾರ್' ಕಾರನ್ನು ಕೂಡ ಖರೀದಿಸಿದ್ದ.

ಕೇಳಿದ್ದೆಲ್ಲ ಕೊಡಿಸಿದರೂ 57ರ ಶಿಕ್ಷಕಿಯ ಸುಟ್ಟು ಹಾಕಿದ 27 ವರ್ಷದ ಪ್ರೇಮಿ!

ಆರೋಪಿ ಅಮರ್‌, ಮೃತ ಜ್ಯೋತಿ -

ಹರೀಶ್‌ ಕೇರ
ಹರೀಶ್‌ ಕೇರ Apr 9, 2026 8:58 AM

ಕಲಬುರಗಿ, ಏ.09: ಮಗನ ವಯಸ್ಸಿನ ಯುವಕನೊಂದಿಗೆ ಸಲ್ಲದ ಸಂಬಂಧ ಬೆಳೆಸಿ, ಆತ ಕೇಳಿಕೇಳಿದ್ದನ್ನೆಲ್ಲ ಕೊಡಿಸಿದ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು (teacher) ಅದೇ ಯುವಕನ ಕೈಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಕೊಲೆ (murder case) ಮಾಡಿದ ಬಳಿಕ ಶವವನ್ನು ಸುಟ್ಟು ಹಾಕಿದ್ದ ಕಿರಾತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕಲಬುರಗಿ (kalaburagi) ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲಮೂಡ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಶವ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ತನಿಖೆ ಚುರುಕುಗೊಳಿಸಿದ ಕಮಲಾಪುರ ಪೊಲೀಸರಿಗೆ ಇದು ಕಲಬುರಗಿ ನಿವಾಸಿ ಜ್ಯೋತಿ ಕಪಾಳೆ (57) ಅವರ ಶವ ಎಂದು ತಿಳಿದುಬಂತು. ಜ್ಯೋತಿ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಾಂಜರಖೇಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅವಿವಾಹಿತೆಯಾಗಿದ್ದ ಜ್ಯೋತಿ ಅವರು ಭಾಲ್ಕಿಯಲ್ಲಿ ವಾಸವಿದ್ದರು. ರಜೆ ದಿನಗಳಲ್ಲಿ ಕಲಬುರಗಿಯ ಆನಂದ ನಗರದಲ್ಲಿರುವ ತಾಯಿ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ನೆರೆಯ ನಿವಾಸಿ ಅಮರ ಗುಡ್ಡಳ್ಳಿ (27) ಎಂಬಾತನ ಪರಿಚಯವಾಗಿತ್ತು. ಕಳೆದ ಐದು ವರ್ಷಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. 27ರ ಹರೆಯದ ಅಮರನಿಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರೂ, ಟೀಚರ್ ಜ್ಯೋತಿ ನೀಡುತ್ತಿದ್ದ ಹಣದ ಆಮಿಷಕ್ಕೆ ಬಿದ್ದು ಆಕೆಯೊಂದಿಗೆ ಸಂಬಂಧ ಮುಂದುವರಿಸಿದ್ದ. ಜ್ಯೋತಿ ನೀಡಿದ್ದ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣದಲ್ಲಿ ಅಮರ್ ಐಷಾರಾಮಿ 'ಥಾರ್' ಕಾರನ್ನು ಕೂಡ ಖರೀದಿಸಿದ್ದ.

Kalaburagi Murder Case: ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಹತ್ಯೆ; ಶವವನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು!

ಕೊಲೆಗೆ ಕಾರಣವಾದ ಹಣದ ಒತ್ತಡ

ಇತ್ತೀಚಿನ ದಿನಗಳಲ್ಲಿ ಜ್ಯೋತಿ ಅವರು ತಾನು ನೀಡಿದ್ದ ಹಣವನ್ನು ಮರಳಿ ನೀಡುವಂತೆ ಅಮರನಿಗೆ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಅಮರ್, ಜ್ಯೋತಿಯನ್ನು ಹಾದಿಯಿಂದ ತಪ್ಪಿಸಲು ಸಂಚು ರೂಪಿಸಿದ್ದಾನೆ. ಏಪ್ರಿಲ್ 3 ರಂದು ಜ್ಯೋತಿಯನ್ನು ತನ್ನ ಥಾರ್ ಕಾರಿನಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದಾನೆ. ರಾತ್ರಿ ವೇಳೆಗೆ ಕಲಮೂಡ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮೊದಲೇ ಸಿದ್ಧಪಡಿಸಿಕೊಂಡಿದ್ದ ಹರಿತವಾದ ಆಯುಧದಿಂದ ಜ್ಯೋತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಕಾರಿನ ಡಿಕ್ಕಿಯಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಅಮರನ ಮೇಲೆ ಅನುಮಾನ ಬಂದಿತ್ತು. ತಲೆಮರೆಸಿಕೊಂಡಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಯಿಂದ ಕೊಲೆಗೆ ಬಳಸಿದ ಆಯುಧ, ಪೆಟ್ರೋಲ್ ಕ್ಯಾನ್ ಹಾಗೂ ಥಾರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಹಂತಕ ಅಮರ ಕಲಬುರಗಿ ಕೇಂದ್ರ ಕಾರಾಗೃಹ ಸೇರಿದ್ದಾನೆ.