ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kalaburagi News: ಕರೆಂಟ್‌ ಹರಿಸಿ ಕಾಡು ಪ್ರಾಣಿಗಳ ಬಲಿ ಪಡೆಯುತ್ತಿದ್ದ ಇಬ್ಬರ ಬಂಧನ

ತೆಲಂಗಾಣ ಗಡಿಭಾಗದ ಸಂಗಾಪೂರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕರೆಂಟ್‌ ಹರಿಸಿ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಂಗಾಪೂರ ಗ್ರಾಮದ ಮಾಣಿಕ ತಂದೆ ಹರಿಶ್ಚಂದ್ರ ಪವಾರ (40) ಹಾಗೂ ಸುನೀಲ ತಂದೆ ಧರ್ಮು ರಾಠೋಡ (30) ಬಂಧಿತರು.

ಕಾಡು ಪ್ರಾಣಿಗಳ ಬಲಿ ಪಡೆಯುತ್ತಿದ್ದ ಇಬ್ಬರ ಬಂಧನ

ಬಂಧಿತ ಆರೋಪಿಗಳಾದ ಮಾಣಿಕ ಹಾಗೂ ಸುನೀಲ -

Ramesh Ballamoole
Ramesh Ballamoole May 21, 2026 8:58 PM

ಕಲಬುರಗಿ, ಮೇ 21: ತೆಲಂಗಾಣ ಗಡಿಭಾಗದ ಸಂಗಾಪೂರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕರೆಂಟ್‌ ಹರಿಸಿ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ (Kalaburagi News). ಸಂಗಾಪೂರ ಗ್ರಾಮದ ಮಾಣಿಕ (40) ಹಾಗೂ ಸುನೀಲ (30) ಬಂಧಿತ ಆರೋಪಿಗಳು.

ಈ ಕುರಿತು ಕುಂಚಾವರಂ ವಲಯ ಅರಣ್ಯಾಧಿಕಾರಿ ಸಂಜೀವ ಕುಮಾರ ಚವ್ಹಾಣ ಮಾಹಿತಿ ನೀಡಿದ್ದಾರೆ. ʼʼತೆಲಂಗಾಣ ಗಡಿಭಾಗದ ಸಂಗಾಪೂರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕರೆಂಟ್‌ ಹರಿಸಿ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದ ಇಬ್ಬರು ಆರೋಪಿಗಳಾದ ಹರಿಶ್ಚಂದ್ರ ಪವಾರ ಹಾಗೂ ಧರ್ಮು ರಾಠೋಡ್‌ನನ್ನು ಬಂಧಿಸಲಾಗಿದೆʼʼ ಎಂದು ತಿಳಿಸಿದ್ದಾರೆ.

ಆರೋಪಿಗಳು ಸಂಗಾಪೂರ ಅರಣ್ಯ ಪ್ರದೇಶದ ಸರ್ವೇ ನಂ. 3ರಲ್ಲಿ ಅಕ್ರಮವಾಗಿ ಪ್ರವೇಶಿಸಿ ಸುಮಾರು ಎರಡು ಕಿಲೋ ಮೀಟರ್‌ವರೆಗೆ ಬೈಂಡಿಂಗ್‌ ತಂತಿ ಎಳೆದು ಅದಕ್ಕೆ ವಿದ್ಯುತ್‌ ಸಂಪರ್ಕ ನೀಡಿ ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದರು. ಅನುಮಾನಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ʼʼಬಂಧಿತರಿಂದ ಒಂದು ಮೊಲ ಹಾಗೂ ಎರಡು ಟಿಟ್ಟಿಬ ಪಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆʼʼ ಎಂದು ಸಂಜೀವ ಕುಮಾರ ಚವ್ಹಾಣ ಮಾಹಿತಿ ನೀಡಿದ್ದಾರೆ.

ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಆತ್ಮಹತ್ಯೆ!

ಕಲಬುರಗಿ ಮೃಗಾಲಯ ಉದ್ಘಾಟನೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಮೃಗಾಲಯವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ 43 ಎಕರೆ ವಿಶಾಲ ಪ್ರದೇಶದಲ್ಲಿ ಈ ಮೃಗಾಲಯವನ್ನು ನಿರ್ಮಿಸಲಾಗಿದೆ. ಇಬ್ಬರು ಸಚಿವರು ಮೃಗಾಲಯ ಸುತ್ತಾಡಿ ಹುಲಿ, ಚಿರತೆ ಸೇರಿ ವಿವಿಧ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿದರು. ʼʼಈ ಮೃಗಾಲಯವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆʼʼ ಎಂದು ಈಶ್ವರ್‌ ಖಂಡ್ರೆ ತಿಳಿಸಿದರು.

ಅಂದಾಜು 35 ಕೋಟಿ ರುಪಾಯಿ ವೆಚ್ಚದಲ್ಲಿ ಈ ಮೃಗಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ನಿಶಾಚರ ಪ್ರಾಣಿಗಳಿಗಾಗಿ 6, ಪಕ್ಷಿಗಳಿಗೆ 16, ಫಿಸೆಂಟ್‌ಗಳಿಗೆ 6, ಸಸ್ತನಿಗಳಿಗೆ 10, ಪ್ರೈಮೇಟ್‌ಗಳಿಗೆ 4, ಶಾಖಾಹಾರಿ ಪ್ರಾಣಿಗಳಿಗೆ 6, ಉಭಯಚರ/ಸರೀಸೃಪ ಪ್ರಾಣಿಗಳಿಗೆ 8 ಸೇರಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣ ನಿರ್ಮಾಣವಾಗಲಿದೆ. ಮೃಗಾಲಯವು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವೀಕ್ಷಣೆಗೆ ಲಭ್ಯ. ಪ್ರತಿ ಮಂಗಳವಾರ ರಜೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.