ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ‘ಯಾರಿವಳು ಯಾರಿವಳು’ ಸಾಂಗ್ ಹಾಡಿದ ಕಾವಿಧಾರಿ; ಸ್ವಾಮೀಜಿಯ ಬಿಂದಾಸ್ ವಿಡಿಯೊ ವೈರಲ್

Viral Video: ಕಲಬುರಗಿಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈರಲ್‌ ವಿಡಿಯೊದಲ್ಲಿ ಅವರು ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿದೆ.

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ಸಿನಿಮಾ ಗೀತೆ ಹಾಡಿದ ಸ್ವಾಮೀಜಿ

ಶ್ರೀ ಮರುಳಾರಾಧ್ಯ ಸ್ವಾಮೀಜಿ -

Ramesh Ballamoole
Ramesh Ballamoole Aug 17, 2026 7:15 PM

ಕಲಬುರಗಿ, ಆ. 17: ಹಿಂದೂ ಧರ್ಮ ರಕ್ಷಣೆ, ಸಂಸ್ಕೃತಿ ಕುರಿತು ಖಡಕ್ ಹೇಳಿಕೆಗಳಿಂದ ಗಮನ ಸೆಳೆದಿದ್ದ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಇದೀಗ ವಿಭಿನ್ನ ಕಾರಣಕ್ಕೆ ಸುದ್ದಿಯಾಗಿದ್ದಾರೆ (Kalaburagi News). ಶ್ರಾವಣ ಮಾಸದ ಆರಂಭದಲ್ಲೇ ಸ್ವಾಮೀಜಿಯವರದ್ದು ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು (Viral Video), ಭಾರಿ ಚರ್ಚೆಗೆ ಕಾರಣವಾಗಿದೆ.

ವಿಡಿಯೊದಲ್ಲಿ ಕಾವಿಧಾರಿ ಸ್ವಾಮೀಜಿ ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿರುವುದು ಮತ್ತಷ್ಟು ವಿರೋಧಕ್ಕೆ ಕಾರಣವಾಗಿದೆ.

ಸ್ವಾಮೀಜಿಯ ವೈರಲ್‌ ವಿಡಿಯೊ ಇಲ್ಲಿದೆ:

ಈ ಹಿಂದೆ ‘ಹಿಂದೂ ಧರ್ಮ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ’ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದ ಇದೇ ಸ್ವಾಮೀಜಿ ಇದೀಗ ಮಠದಲ್ಲಿನ ಎನ್ನಲಾದ ಬಿಂದಾಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಠದ ಹಣ ದುರುಪಯೋಗ ಆರೋಪ: ವಚನಾನಂದ ಶ್ರೀ ವಿರುದ್ಧ ದೂರು ದಾಖಲು

ವಿಡಿಯೊ ವೈರಲ್ ಬೆನ್ನಲ್ಲೇ ʼ‘ಧರ್ಮ ಬೋಧಿಸುವ ಸ್ವಾಮೀಜಿಯ ಈ ಹಾಡಿನ ಗತ್ತು ಏನು?ʼ’ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಆದರೆ, ವಿಡಿಯೊ ಯಾವ ಸಂದರ್ಭದಲ್ಲಿನದ್ದು ಹಾಗೂ ಎದುರಿಗಿರುವ ಬಾಟಲ್‌ಗಳಲ್ಲಿ ಏನಿತ್ತು ಎಂಬುದರ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂದು ಹಲವು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಂಚಲನ ಮೂಡಿಸಿದ್ದು, ಸತ್ಯಾಸತ್ಯತೆ ಬಯಲಾಗಬೇಕಿದೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.