Kalaburagi News: ಮನೆ ಕೆಲಸದಾಕೆ ಜತೆ ಸಲುಗೆ; ಪತಿ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ!
Kalaburagi News: ಮನೆ ಕೆಲಸದಾಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿಯು, ಪತಿಯ ಎರಡೂ ಕಾಲುಗಳನ್ನೂ ಸುಪಾರಿ ಕೊಟ್ಟು ಮುರಿಸಿದ್ದಾಳೆ. ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಹೊರಬಂದಿದ್ದರಿಂದ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
![Kalaburagi News (1)](https://cdn-vishwavani-prod.hindverse.com/media/images/Kalaburagi_News_1.max-1280x720.jpg)
![Profile](https://vishwavani.news/static/img/user.png)
ಕಲಬುರಗಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯ ಕಾಲು ಮುರಿಯಲು ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿ ನಗರದ (Kalaburagi News) ಅತ್ತರ ಕಂಪೌಡ್ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳಿನಿಂದ ಪತಿ, ಮನೆ ಕೆಲಸದಾಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ. ಹೀಗಾಗಿ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಮಾತು ಕೇಳದ ಪತಿಯ ಎರಡೂ ಕಾಲುಗಳನ್ನ ಮುರಿದ್ರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಎಂದು ಪತ್ನಿ ಸ್ಕೆಚ್ ಹಾಕಿದ್ದಳು. ಆಕೆಯಿಂದ ಸುಪಾರಿ ಪಡೆದ ಮೂವರು ವ್ಯಕ್ತಿಯ ಎರಡೂ ಕಾಲು ಮುರಿದುಹಾಕಿದ್ದರು. ಇದೀಗ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ವೆಂಕಟೇಶ್ ಎಂಬಾತನ ಕಾಲುಗಳನ್ನು ಮುರಿಯಲು ಸುಪಾರಿ ನೀಡಿದ್ದ ಪತ್ನಿ ಉಮಾದೇವಿ ಹಾಗೂ ಹಂತಕರಾದ ಆರೀಫ್, ಮನಹೋರ, ಸುನೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವೆಂಕಟೇಶ್ ಕೆಲ ತಿಂಗಳಿನಿಂದ ಮನೆ ಕೆಲಸದಾಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ. ಹೀಗಾಗಿ ಅನೈತಿಕ ಸಂಬಂಧ ಶಂಕೆಯಿಂದ ಪತಿಯ ಎರಡೂ ಕಾಲುಗಳನ್ನು ಮುರಿಯಲು 5 ಲಕ್ಷಕ್ಕೆ ಪತ್ನಿ ಸುಪಾರಿ ನೀಡಿದ್ದಳು. ಆದರೆ ವೆಂಕಟೇಶ್ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿ ಕಾಲು ಮುರಿದ ಆರೋಪಿಗಳನ್ನು ಬ್ರಹ್ಮಪೂರ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Turuvekere News: ತುರುವೇಕೆರೆಯಲ್ಲಿ 11 ಟನ್ ಕಳಪೆ ರಸಗೊಬ್ಬರ ವಶ
ಅಪಘಾತದ ಗಾಯಾಳುವನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸಚಿವ ಸಂತೋಷ್ ಲಾಡ್
ಬಾಗಲಕೋಟೆ, ಫೆಬ್ರವರಿ 07: ಬೈಕ್ ಅಪಘಾತದಲ್ಲಿ ಗಾಯಗೊಂಡ ಸವಾರನನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದ ಅಪಘಾತದ ಗಾಯಾಳುವನ್ನು ಸಚಿವರು, ಕಾರಿನಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಟ್ರ್ಯಾಕ್ಟರ್ ಹಿಂಬದಿ ಹೊರಟಿದ್ದ ಬೈಕ್ ಸವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಜಮಖಂಡಿಯಿಂದ ಅದೇ ಮಾರ್ಗವಾಗಿ ಬರುತ್ತಿದ್ದ ಸಚಿವ ಸಂತೋಷ ಲಾಡ್ ಅವರು, ಬೈಕ್ ಸವಾರ ಬಿದ್ದಿರೋದನ್ನು ಕಂಡು ತಮ್ಮ ಕಾರಲ್ಲೇ ಗಾಯಾಳು ಬೈಕ್ ಸವಾರನನ್ನು ಲೋಕಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದರು.
ಗಾಯಾಳು ಬೈಕ್ ಸವಾರ ಸತೀಶ್ ವೆಂಕಪ್ಪ ಮಾದರ ಅವರಿಗೆ ಮೊಳಕಾಲಿಗೆ ತೀವ್ರ ಗಾಯವಾಗಿ ನರಳಾಡುತ್ತಿದ್ದರು. ಹೀಗಾಗಿ ಸಚಿವರು ಲೋಕಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕಳುಹಿಸಲು ಕ್ರಮ ಕೈಗೊಂಡರು.
ಈ ಸುದ್ದಿಯನ್ನೂ ಓದಿ | Microfinance Torture: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಸಮ್ಮತಿ!
ಲೋಕಾಪುರ ಆಸ್ಪತ್ರೆ ಸಿಬ್ಬಂದಿ ಗಾಯಾಳುವಿಗೆ ತುರ್ತು ಚಿಕಿತ್ಸೆಗೆ ಕೊಡಿಸುವಲ್ಲಿ ಮುತುವರ್ಜಿ ವಹಿಸಿದ್ದನ್ನು ಗಮನಿಸಿದ ಸಚಿವ ಲಾಡ್ ಅವರು, ʼನಿಮ್ಮ ಸೇವೆಗೆ ಸೆಲ್ಯೂಟ್ʼ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಗಾಯಾಳುವಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದಲ್ಲದೇ ಧೈರ್ಯ ಹೇಳಿದ ಸಚಿವ ಲಾಡ್ ಅವರು, ಇನ್ನು ಮುಂದೆ ಎಚ್ಚರಿಕೆ ವಹಿಸಬೇಕು ಎಂದು ಬುದ್ಧಿ ಹೇಳಿದರು. ಸಚಿವರ ಈ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಜನರು ಹಾಗೂ ಗಾಯಾಳುವಿನ ಸಂಬಂಧಿಕರು ಮೆಚ್ಚಗೆ ವ್ಯಕ್ತಪಡಿಸಿ, ಕೃತಜ್ಞತೆ ತಿಳಿಸಿದ್ದಾರೆ.