ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್ ಟೂರ್ನಿಯಿಂದ ಕೈಬಿಟ್ಟಿದ್ದ ಬಗ್ಗೆ ಜಿತೇಶ್‌ ಶರ್ಮಾ ಪ್ರಾಮಾನಿಕ ಪ್ರತಿಕ್ರಿಯೆ

Jitesh Sharma in T20 World Cup Snub: ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿದ್ದರಿಂದ ನಿರಾಶೆಯಾಗಿತ್ತು ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಹೇಳಿದ್ದಾರೆ. ಆದರೆ ಇದರಲ್ಲಿ ಯಾವುದೇ ಪಶ್ಚಾತ್ತಾಪ ಇಲ್ಲ, ಏಕೆಂದರೆ ಆ ಅವಕಾಶ ತಪ್ಪಿದ ಕಾರಣದಿಂದ ತಮ್ಮ ತಂದೆಯ ಜೊತೆ ಅಮೂಲ್ಯ ಸಮಯ ಕಳೆಯಲು ಸಾಧ್ಯವಾಯಿತು ಎಂದಿದ್ದಾರೆ.

ಟಿ20 ವಿಶ್ವಕಪ್‌ನಿಂದ ಸ್ಥಾನ ಸಿಗದ ಬಗ್ಗೆ ಜಿತೇಶ್‌ ಪ್ರತಿಕ್ರಿಯೆ!

ಟಿ20 ವಿಶ್ವಕಪ್‌ ಭಾರತ ತಂಡದಿಂದ ಕೈ ಬಿಟ್ಟ ಬಗ್ಗೆ ಜಿತೇಶ ಶರ್ಮಾ ಪ್ರತಿಕ್ರಿಯೆ. -

Profile
Ramesh Kote Mar 11, 2026 11:33 PM

ಬೆಂಗಳೂರು: ಭಾರತ ತಂಡದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಅಭಿಯಾನ ಆರಂಭವಾಗುವ ಕೆಲ ದಿನಗಳ ಮುನ್ನ ತಮ್ಮ ತಂದೆ ನಿಧನರಾಗಿದ್ದರು ಎಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ (Jitesh sharma) ಬಹಿರಂಗಪಡಿಸಿದ್ದಾರೆ. ತಂಡದಿಂದ ಹೊರಗುಳಿದಿದ್ದರಿಂದ ಅವರೊಂದಿಗೆ ಅಂತಿಮ ದಿನಗಳಲ್ಲಿ ಸಮಯ ಕಳೆಯಲು ಅವಕಾಶ ದೊರಕಿತು ಎಂದು ತಿಳಿಸಿದ್ದಾರೆ. ವಿಶ್ವಕಪ್ ಟೂರ್ನಿಗೆ ತಪ್ಪಿಸಿಕೊಂಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ, ಏಕೆಂದರೆ ಅತ್ಯಂತ ಅಗತ್ಯವಾದ ಸಮಯದಲ್ಲಿ ತಮ್ಮ ತಂದೆಯ ಪಕ್ಕದಲ್ಲಿರಲು ಸಾಧ್ಯವಾಗಿದ್ದು ತಮ್ಮ ಭಾಗ್ಯವೆಂದು ಜಿತೇಶ್ ಹೇಳಿದ್ದಾರೆ.

ಕಳೆದ ವರ್ಷದ ಏಷ್ಯಾ ಕಪ್ ವರೆಗೆ ಭಾರತ ತಂಡದ ಎರಡನೇ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದ ಜಿತೇಶ್ ಶರ್ಮಾ ಅವರನ್ನು, ಉತ್ತಮ ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್‌ಗೆ ಅವಕಾಶ ಕಲ್ಪಿಸಲು ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿತ್ತು. ಆಸಕ್ತಿದಾಯಕವಾಗಿ, ಜಿತೇಶ್ ಗೈರಾಗಿದ್ದ ಸಂದರ್ಭದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ತಂಡದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಟಾಪ್‌ 5 ಬ್ಯಾಟರ್ಸ್‌!

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಿತೇಶ್ ಶರ್ಮಾ, ತಂಡದಿಂದ ಹೊರಗಿಡಲಾದ ಸುದ್ದಿಯನ್ನು ಮೊದಲ ಬಾರಿ ಕೇಳಿದಾಗ ನಿರಾಶೆಯಾಗಿತ್ತು ಎಂದು ಹೇಳಿದ್ದಾರೆ. ಆದರೆ ನಂತರ ತಮ್ಮ ತಂದೆಗೆ ಆ ಸಮಯದಲ್ಲಿ ತನ್ನ ಬೆಂಬಲವೇ ಹೆಚ್ಚು ಅಗತ್ಯವಿತ್ತು ಎಂಬುದನ್ನು ಅರಿತುಕೊಂಡೆ ಎಂದು ಅವರು ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡ, ಮೂವರ ಪೈಕಿ ಇಬ್ಬರು ವಿಕೆಟ್ ಕೀಪರ್‌ಗಳಿಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡ ಹಿನ್ನೆಲೆ ಜಿತೇಶ್ ಶರ್ಮಾ ಅವರನ್ನು ಶುಭಮನ್‌ ಗಿಲ್ ಜೊತೆಗೂಡಿ ತಂಡದಿಂದ ಕೈಬಿಡಲಾಗಿತ್ತು.

T20I Rankings: ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ವರುಣ್‌ ಚಕ್ರವರ್ತಿ!

“ಆ ಸುದ್ದಿಯನ್ನು ಕೇಳಿದಾಗ ನನಗೆ ಸ್ವಲ್ಪ ನಿರಾಶೆಯಾಗಿತ್ತು. ನಾನೂ ಒಬ್ಬ ಮನುಷ್ಯನಾಗಿರುವ ಕಾರಣ ಆರಂಭದಲ್ಲಿ ನನಗೂ ದುಃಖವಾಗಿತ್ತು. ಆದರೆ ನನ್ನ ಕುಟುಂಬ ಹಾಗೂ ಸ್ನೇಹಿತರು ನನಗೆ ತುಂಬಾ ಬೆಂಬಲ ನೀಡಿದರು, ಅದರಿಂದ ಆ ದುಃಖದ ಅವಧಿ ಹೆಚ್ಚು ಕಾಲ ಮುಂದುವರಿಯಲಿಲ್ಲ. ನನ್ನ ತಂದೆ ಅಸ್ವಸ್ಥರಾಗಿದ್ದರು ಮತ್ತು ಫೆಬ್ರವರಿ ಒಂದರಂದು ನಿಧನರಾದರು. ಆ ಸಂದರ್ಭದಲ್ಲಿ ನಾನು ಏಳು ದಿನಗಳು ಅವರ ಜೊತೆಗೇ ಇದ್ದೆ,” ಎಂದು ಜಿತೇಶ್ ಶರ್ಮಾ ತಿಳಿಸಿದ್ದಾರೆ.

"ಆ ಸಂದರ್ಭದಲ್ಲಿ ವಿಶ್ವಕಪ್‌ ಟೂರ್ನಿಗಿಂತ ನನ್ನ ತಂದೆಗೆ ನನ್ನ ಅಗತ್ಯ ಹೆಚ್ಚು ಇತ್ತು. ಇದಾದ ನಂತರ ನನಗೆ ಯಾವುದೇ ಪಶ್ಚಾತ್ತಾಪವಾಗಲಿಲ್ಲ. ನನಗೆ ಕೋಪವೂ ಇಲ್ಲ ಅಥವಾ ಬೇಸರವೂ ಇಲ್ಲ. ಅವರ ಕೊನೆಯ ದಿನಗಳಲ್ಲಿ ನಾನು ಅವರ ಜೊತೆಗಿದ್ದು, ಅವರನ್ನು ನೋಡಿಕೊಳ್ಳಲು ಸಾಧ್ಯವಾದುದಕ್ಕೆ ದೇವರಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಆರ್‌ಸಿಬಿ ವಿಕೆಟ್‌ ಕೀಪರ್‌ ಹೇಳಿದ್ದಾರೆ.