ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Indefinite sit-in: ಹಣ ಕಳೆದುಕೊಂಡ ಗ್ರಾಹಕರಿಂದ ಅನಿರ್ದಿಷ್ಟ ಧರಣಿ

ಮೂರು ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲಿಯವರೆಗೂ ಹಣ ಕಳೆದು ಕೊಂಡವರಿಗೆ ಪರಿಹಾರ ನೀಡಿಲ್ಲ, ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ ವಂಚನೆಯ ಕೃತ್ಯ ಎಸಗಿದ್ದಾಳೆ

ಹಣ ಕಳೆದುಕೊಂಡ ಗ್ರಾಹಕರಿಂದ ಅನಿರ್ದಿಷ್ಟ ಧರಣಿ

-

Ashok Nayak
Ashok Nayak Mar 11, 2026 11:28 PM

ಗೌರಿಬಿದನೂರು: ತಾಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ವಂಚನೆಗೊಳಗಾದ ಗ್ರಾಹಕರಿಂದ 2ನೇ ದಿನದ ಅನಿರ್ದಿಷ್ಟ ಧರಣಿ ನಡೆಯುತ್ತಿದೆ, 

ಗೌರಿಬಿದನೂರು ನಗರದ ಉಪ-ಅಂಚೆ ಕಚೇರಿ ಪೇದೆ ರಮ್ಯಾ ಎಂಬುವವರು ಹಾಲಗಾನ ಹಳ್ಳಿ ಗ್ರಾಮದ ಅಂಚೆ ಕಛೇರಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡುವುದಾಗಿ ಹೇಳಿ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಕೋಟ್ಯಂತರ ರೂಪಾಯಿಗಳ ಹಣ ವನ್ನು ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವ ವಿರುದ್ಧ ಕಾನೂನು ಜರುಗಿಸಬೇಕೆಂದು ಹಣ ಕಳೆದುಕೊಂಡ ಗ್ರಾಹಕರು ಅನಿರ್ದಿಷ್ಟ ಧರಣಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಮೂರು ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲಿಯವರೆಗೂ ಹಣ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ, ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ ವಂಚನೆಯ ಕೃತ್ಯ ಎಸಗಿದ್ದಾಳೆ, ಗ್ರಾಹಕರು ಠೇವಣಿ, ಎಸ್.ಬಿ. ಸೇರಿದಂತೆ ವಿವಿಧ ಖಾತೆ ಗಳಲ್ಲಿ ಜಮಾ ಮಾಡಿದ್ದ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ, ರಮ್ಯ ಹೆರಿಗೆ ಸುದೀರ್ಘ ರಜೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Chikkaballapur News: ಭಾನುವಾರ ಬಂದ್ ಕರೆ ಸಮಂಜಸವಲ್ಲ, ವ್ಯಾಪಾರಕ್ಕೆ ತೊಂದರೆ, ಬೇರೆ ದಿನದಲ್ಲಿ ಬಂದ್‌ ಮಾಡಿ: ಮಂಜುನಾಥ್ ಆಗ್ರಹ

ಕಚೇರಿಯಲ್ಲಿ 1,200 ಖಾತೆದಾರರಿದ್ದು, ಸುಮಾರು 200 ಗ್ರಾಹಕರಿಗೆ 1.30 ಕೋಟಿ ರೂ. ವಂಚನೆಯಾಗಿದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರೊಂದಿಗೆ ಮಾತಿನ ಚಕಮಕಿ: ಪೋಸ್ಟ್ ಆಫೀಸ್ ಕಛೇರಿಯಲ್ಲಿ ಹಣ ಕಳೆದು ಕೊಂಡು ಗ್ರಾಹಕರು ಅನಿರ್ದಿಷ್ಟ ಪ್ರತಿಭಟನೆಯು 2ನೇ ದಿನಕ್ಕೆ ಕಾಲಿಟ್ಟಿದ್ದರೂ ಅಂಚೆ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ. ಅಂಚೆ ಇಲಾಖೆಯವರಿಗೆ ಪೊಲೀಸರು ಕಾವಲು ಇದ್ದಾರೆಂದು ಪೊಲೀಸರನ್ನು ನಿಂದಿಸುವ ಮೂಲಕ ಮಾತಿನ ಚಕಮಕಿ ನಡೆಯಿತು.

ನಮಗೆ ನೆಡದಿರುವ ಅನ್ಯಾಯವನ್ನು ಬಗೆಹರಿಸುವವರು ಯಾರು ಇಲ್ಲಿಯವರೆವಿಗೂ ಹಾಲಿ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರಾಗಲಿ, ಮಾಜಿ ಶಾಸಕ ಎನ್.ಹೆಚ್.ಶಿವಶಂಕರ ರೆಡ್ಡಿಯಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ, ನಾವು ಪ್ರತಿದಿನ ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಹೊಟ್ಟೆಗೆ ಬಟ್ಟೆಕಟ್ಟಿ ಒಂದೊಂದು-ರೂಪಾಯಿ ಕೂಡಿಟ್ಟು, ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡಿದ್ದ ಹಣ ವನ್ನು ಮನಸೋ ಇಚ್ಛೆ ಲೂಟಿ ಮಾಡಿರುವವರಿಗೆ ಏನು ಕ್ರಮ ಜರುಗಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಈಗ ನಡೆದಿರುವ ಅನ್ಯಾಯಕ್ಕೆ ಈಗ ನ್ಯಾಯ ಒದಗಿಸದಿದ್ದಲ್ಲಿ ನಮ್ಮ ಗ್ರಾಮಕ್ಕೆ ಇನ್ನು ಮುಂದೆ ಮತ ಯಾಚನೆಗೆ  ಯಾರುನ್ನು ಬರಲು ಬಿಡುವುದಿಲ್ಲ ನಮ್ಮ ಗ್ರಾಮದಲ್ಲಿ ಮತ ಪ್ರಚಾರಕ್ಕಾಗಿ ಯಾರನ್ನು ಪ್ರೀರೇಪಿಸುವುದಿಲ್ಲ. ಚುನಾವಣೆ ಈ ಸಂದರ್ಭದಲ್ಲಿ ಮಾತ್ರ ಬಂದು ಮತ ಕೇಳುವ ಜನ ಪತ್ರಿನಿಧಿಗಳು ಇಂದು ನಮಗೆ ನಡೆದಿರುವ ಅನ್ಯಾಯದ ಬಗ್ಗೆ ಕೇಳಲು ಯಾರೊಬ್ಬರೂ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.