Karnataka Government Holidays 2026: ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ: 2026ರ ರಜಾದಿನಗಳ ಸಂಪೂರ್ಣ ಕ್ಯಾಲೆಂಡರ್ ಇಲ್ಲಿದೆ
ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ (Karnataka Government Holidays 2026) ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದೆ. 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದೆ.
ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ- 2026 -
ಬೆಂಗಳೂರು, ನ.18: 2026ನೇ ಸಾಲಿನ ಸಾರ್ವತ್ರಿಕ ರಜೆ, ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜೆ ಮತ್ತು ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಅಧಿಸೂಚನೆಯ ಆಧಾರದ ಮೇಲೆ ಕರ್ನಾಟಕದಲ್ಲಿ ನೀಡಲಾಗುವ ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಗೊಂಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿ ಸಾರ್ವತ್ರಿಕ ರಜೆಗಳ ಮಾಹಿತಿ ಇಲ್ಲಿದೆ. ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದೆ. 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದೆ.
ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿ ಸಾರ್ವತ್ರಿಕ ರಜೆಗಳ ಮಾಹಿತಿ ಇಲ್ಲಿದೆ.
| ಕ್ರಮ ಸಂಖ್ಯೆ | ದಿನಾಂಕ | ವಾರ | ಸಾರ್ವತ್ರಿಕ ರಜಾ ದಿನಗಳು |
|---|---|---|---|
| 1 | 15.01.2026 | ಗುರುವಾರ | ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ |
| 2 | 26.01.2026 | ಸೋಮವಾರ | ಗಣರಾಜ್ಯೋತ್ಸವ |
| 3 | 19.03.2026 | ಗುರುವಾರ | ಯುಗಾದಿ ಹಬ್ಬ |
| 4 | 21.03.2026 | ಶನಿವಾರ | ಖುತುಬ್-ಎ-ರಂಜಾನ್ |
| 5 | 31.03.2026 | ಮಂಗಳವಾರ | ಮಹಾವೀರ ಜಯಂತಿ |
| 6 | 03.04.2026 | ಶುಕ್ರವಾರ | ಗುಡ್ ಫ್ರೈಡೆ |
| 7 | 14.04.2026 | ಮಂಗಳವಾರ | ಡಾ. ಅಂಬೇಡ್ಕರ್ ಜಯಂತಿ |
| 8 | 20.04.2026 | ಸೋಮವಾರ | ಬಸವ ಜಯಂತಿ, ಅಕ್ಷಯ ತೃತೀಯಾ |
| 9 | 01.05.2026 | ಶುಕ್ರವಾರ | ಕಾರ್ಮಿಕ ದಿನಾಚರಣೆ |
| 10 | 28.05.2026 | ಗುರುವಾರ | ಬಕ್ರೀದ್ |
| 11 | 26.06.2026 | ಶುಕ್ರವಾರ | ಮೊಹರಂ ಕಡೆ ದಿನ |
| 12 | 15.08.2026 | ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| 13 | 26.08.2026 | ಬುಧವಾರ | ಈದ್ ಮಿಲಾದ್ |
| 14 | 14.09.2026 | ಸೋಮವಾರ | ವರಸಿದ್ಧಿ ವಿನಾಯಕ ವೃತ |
| 15 | 02.10.2026 | ಶುಕ್ರವಾರ | ಗಾಂಧಿ ಜಯಂತಿ |
| 16 | 20.10.2026 | ಮಂಗಳವಾರ | ಮಹಾನವಮಿ, ಆಯುಧ ಪೂಜೆ |
| 17 | 21.10.2026 | ಬುಧವಾರ | ವಿಜಯದಶಮಿ |
| 18 | 10.11.2026 | ಮಂಗಳವಾರ | ಬಲಿಪಾಡ್ಯ, ದೀಪಾವಳಿ |
| 19 | 27.11.2026 | ಶುಕ್ರವಾರ | ಕನಕದಾಸ ಜಯಂತಿ |
| 20 | 25.12.2026 | ಶುಕ್ರವಾರ | ಕ್ರಿಸ್‌ಮಸ್ |
ಈ ರಜಾ ಪಟ್ಟಿಯು ಭಾನುವಾರಗಳಂದು ಬರುವ ಮಹಾ ಶಿವರಾತ್ರಿ, ಕನ್ನಡ ರಾಜ್ಯೋತ್ಸವ, ನರಕ ಚತುರ್ದಶಿ ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು ಒಳಗೊಂಡಿಲ್ಲ. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ. ಈ ಪಟ್ಟಿಯಲ್ಲಿ ನೀಡಲಾದ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಆಚರಿಸಲ್ಪಡದಿದ್ದರೆ, ಸರ್ಕಾರಿ ಸೇವೆಯಲ್ಲಿನ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡುವಂತೆ ಪ್ರಕಟಣೆ ತಿಳಿಸಿದೆ.
2026ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳು
| ಕ್ರಮ ಸಂಖ್ಯೆ | ದಿನಾಂಕ | ವಾರ | ಪರಿಮಿತ ರಜಾ ದಿನ |
|---|---|---|---|
| 1 | 01.01.2026 | ಗುರುವಾರ | ನೂತನ ವರ್ಷಾರಂಭ |
| 2 | 27.01.2026 | ಮಂಗಳವಾರ | ಮಧ್ವನವಮಿ |
| 3 | 04.02.2026 | ಬುಧವಾರ | ಷಬ್-ಎ-ಬರಾತ್ |
| 4 | 02.03.2026 | ಸೋಮವಾರ | ಹೋಳಿ ಹಬ್ಬ |
| 5 | 17.03.2026 | ಮಂಗಳವಾರ | ಷಬ್-ಎ-ಖಾದರ್ |
| 6 | 20.03.2026 | ಶುಕ್ರವಾರ | ಜುಮತ್-ಉಲ್-ವಿದಾ |
| 7 | 23.03.2026 | ಸೋಮವಾರ | ದೇವರ ದಾಸೀಮಯ್ಯ ಜಯಂತಿ |
| 8 | 27.03.2026 | ಶುಕ್ರವಾರ | ಶ್ರೀರಾಮನವಿ |
| 9 | 04.04.2026 | ಶನಿವಾರ | ಹೋಲಿ ಸ್ಯಾಟರ್ ಡೇ |
| 10 | 21.04.2026 | ಮಂಗಳವಾರ | ಶ್ರೀ ಶಂಕರಾಚಾರ್ಯ ಜಯಂತಿ |
| 11 | 22.04.2026 | ಬುಧವಾರ | ಶ್ರೀ ರಾಮಾನುಜಾಚಾರ್ಯ ಜಯಂತಿ |
| 12 | 21.08.2026 | ಶುಕ್ರವಾರ | ಶ್ರೀ ವರಮಹಾಲಕ್ಷ್ಮೀ ವ್ರತ |
| 13 | 27.08.2026 | ಗುರುವಾರ | ಯಜುರ್ ಉಪಕರ್ಮ |
| 14 | 28.08.2026 | ಶುಕ್ರವಾರ | ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ರಕ್ಷಾ ಬಂಧನ |
| 15 | 04.09.2026 | ಶುಕ್ರವಾರ | ಶ್ರೀಕೃಷ್ಣ ಜನ್ಮಾಷ್ಟಮಿ |
| 16 | 08.09.2026 | ಮಂಗಳವಾರ | ಕನ್ಯಾ ಮರಿಯಮ್ಮ ಜಯಂತಿ |
| 17 | 17.09.2026 | ಗುರುವಾರ | ವಿಶ್ವಕರ್ಮ ಜಯಂತಿ |
| 18 | 25.09.2026 | ಶುಕ್ರವಾರ | ಶ್ರೀ ಅನಂತಪದ್ಮನಾಭ ವ್ರತ |
| 19 | 24.11.2026 | ಮಂಗಳವಾರ | ಗುರು ನಾನಕ್ ಜಯಂತಿ |
| 20 | 26.11.2026 | ಗುರುವಾರ | ಹುತ್ತರಿ ಹಬ್ಬ |
| 21 | 24.12.2026 | ಗುರುವಾರ | ಕ್ರಿಸ್‌ಮಸ್ ಈವ್ |
ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಅಧಿಸೂಚನೆಯ ಆಧಾರದ ಮೇಲೆ ರಜಾ ದಿನಗಳು
| ಕ್ರಮ ಸಂಖ್ಯೆ | ದಿನಾಂಕ | ವಾರ | ಪರಿಮಿತ ರಜಾ ದಿನ |
|---|---|---|---|
| 1 | 15.01.2026 | ಗುರುವಾರ | ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ |
| 2 | 26.01.2026 | ಸೋಮವಾರ | ಗಣರಾಜ್ಯೋತ್ಸವ |
| 3 | 19.03.2026 | ಗುರುವಾರ | ಯುಗಾದಿ ಹಬ್ಬ |
| 4 | 21.03.2026 | ಶನಿವಾರ | ಖುತುಬ್-ಎ-ರಂಜಾನ್ |
| 5 | 31.03.2026 | ಮಂಗಳವಾರ | ಮಹಾವೀರ ಜಯಂತಿ |
| 6 | 03.04.2026 | ಶುಕ್ರವಾರ | ಗುಡ್ ಫ್ರೈಡೆ |
| 7 | 14.04.2026 | ಮಂಗಳವಾರ | ಡಾ.ಬಿ.ಆರ್. ಅಂಬೆಡ್ಕರ್ ಜಯಂತಿ |
| 8 | 20.04.2026 | ಸೋಮವಾರ | ಬಸವ ಜಯಂತಿ, ಅಕ್ಷಯ ತೃತೀಯಾ |
| 9 | 01.05.2026 | ಶುಕ್ರವಾರ | ಕಾರ್ಮಿಕ ದಿನಾಚರಣೆ |
| 10 | 28.05.2026 | ಗುರುವಾರ | ಬಕ್ರೀದ್ |
| 11 | 26.06.2026 | ಶುಕ್ರವಾರ | ಮೊಹರಂ ಕಡೆ ದಿನ |
| 12 | 15.08.2026 | ಶನಿವಾರ | ಸ್ವಾತಂತ್ರ್ಯ ದಿನಾಚರಣೆ |
| 13 | 26.08.2026 | ಬುಧವಾರ | ಈದ್ ಮಿಲಾದ್ |
| 14 | 14.09.2026 | ಸೋಮವಾರ | ವರಸಿದ್ಧಿ ವಿನಾಯಕ ವೃತ |
| 15 | 02.10.2026 | ಶುಕ್ರವಾರ | ಗಾಂಧಿ ಜಯಂತಿ |
| 16 | 20.10.2026 | ಮಂಗಳವಾರ | ಮಹಾನವಮಿ, ಆಯುಧ ಪೂಜೆ |
| 17 | 21.10.2026 | ಬುಧವಾರ | ವಿಜಯದಶಮಿ |
| 18 | 10.11.2026 | ಮಂಗಳವಾರ | ಬಲಿಪಾಡ್ಯಮಿ, ದೀಪಾವಳಿ |
| 19 | 27.11.2026 | ಶುಕ್ರವಾರ | ಕನಕದಾಸ ಜಯಂತಿ |
| 20 | 25.12.2026 | ಶುಕ್ರವಾರ | ಕ್ರಿಸ್‌ಮಸ್ |
2026ರ ಸಾರ್ವತ್ರಿಕ ರಜೆ ಪಟ್ಟಿ: 1) ಜ.15- ಮಕರ ಸಂಕ್ರಾತಿ, ಉತ್ತರಾಯಣ ಪುಣ್ಯಕಾಲ, 2) ಜ.26 - ಗಣರಾಜ್ಯೋತ್ಸವ 3) ಮಾ.19 - ಯುಗಾದಿ , 4) ಮಾ.2 - ರಂಜಾನ್, 5) ಮಾ.31 - ಮಹಾವೀರ ಜಯಂತಿ, 6) ಏ.3 - ಗುಡ್ ಫ್ರೈಡೇ, 7) ಏ.14 - ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, 8) ಏ.20- ಬಸವ ಜಯಂತಿ, 9) ಮೇ 1- ಕಾರ್ಮಿಕ ದಿನಾಚರಣೆ, 10) ಮೇ 28- ಬಕ್ರೀದ್, 11) ಜೂ. 26- ಮೊಹರಂ ಕಡೆ ದಿನ, 12) ಆ.15- ಸ್ವಾತಂತ್ರ್ಯ ದಿನಾಚರಣೆ, 13) ಆ.26 - ಈದ್ ಮಿಲಾದ್ 14) ಸೆ.14- ವರಸಿದ್ಧಿ ವಿನಾಯಕ ವ್ರತ, 15) ಅ.2 - ಗಾಂಧಿಜಯಂತಿ, 16) ಅ.20 - ಆಯುಧಪೂಜೆ, 17) ಅ.21 - ವಿಜಯದಶಮಿ, 18) ನ.10- ಬಲಿಪಾಡ್ಯಮಿ, ದೀಪಾವಳಿ, 19) ನ.27 - ಕನಕದಾಸ ಜಯಂತಿ, 20) ಡಿ.25 - ಕ್ರಿಸ್‌ಮಸ್