ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ViRosh Wedding: ರಶ್ಮಿಕಾ ಮದುವೆಗೆ ಬಂದ್ರು ಕ್ಲೋಸ್‌ ಫ್ರೆಂಡ್ಸ್‌, ಸಕ್ಸಸ್‌ ಕೊಟ್ಟ ನಿರ್ದೇಶಕರನ್ನ ಮರೆಯದ ವಿಜಯ್‌ ದೇವರಕೊಂಡ; ಇಲ್ಲಿದೆ ಅತಿಥಿಗಳ ಪಟ್ಟಿ!

ViRosh Wedding: ಉದಯಪುರದಲ್ಲಿ ನಡೆಯಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಆಪ್ತ ಅತಿಥಿಗಳು ಆಗಮಿಸಿದ್ದಾರೆ. ರಶ್ಮಿಕಾ ಗೆಳತಿ ಆಶಿಕಾ ರಂಗನಾಥ್, ಸ್ಟೈಲಿಸ್ಟ್ ಶ್ರಾವ್ಯ ವರ್ಮಾ, ನಿರ್ದೇಶಕರಾದ ತರುಣ್ ಭಾಸ್ಕರ್ ಮುಂತಾದವರು ಆಗಲೇ ಮದುವೆಗೆ ಆಗಮಿಸಿದ್ದು, ತೆಲುಗು ಮತ್ತು ಕೊಡವ ಸಂಪ್ರದಾಯಗಳಂತೆ ವಿವಾಹ ನೆರವೇರಲಿದೆ.

ʻವಿರೋಶ್ʼ ಕಲ್ಯಾಣ: ಗೆಳತಿ ರಶ್ಮಿಕಾ ಮದುವೆಗೆ ಸಾಥ್ ಕೊಟ್ಟ ಆಶಿಕಾ ರಂಗನಾಥ್!

-

Avinash GR
Avinash GR Feb 25, 2026 12:37 PM

ಟಾಲಿವುಡ್‌ ʻರೌಡಿʼ ವಿಜಯ್‌ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ಅತ್ಯಂತ ಖಾಸಗಿಯಾಗಿ ಈ ಮದುವೆಯು ನಡೆಯುತ್ತಿದ್ದು, ಕೆಲವೇ ಕೆಲವು ಆಪ್ತರಿಗಷ್ಟೇ ಮದುವೆಗೆ ಆಹ್ವಾನ ನೀಡಲಾಗಿದೆ. ವಿಜಯ್‌ ಮತ್ತು ರಶ್ಮಿಕಾ ಮದುವೆಗೆ ಯಾರೆಲ್ಲಾ ಹೋಗಿದ್ದಾರೆ ನೋಡಿ.

ರಶ್ಮಿಕಾ ಮದುವೆಗೆ ಬಂದ್ರು ಕ್ಲೋಸ್‌ ಫ್ರೆಂಡ್ಸ್‌

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಅವರು ರಶ್ಮಿಕಾಗೆ ತುಂಬಾ ಹಳೆಯ ಗೆಳತಿ. ಹಾಗಾಗಿ, ರಶ್ಮಿಕಾ ಮದುವೆಗೆ ಆಗಲೇ ಆಶಿಕಾ ಹಾಜರಿ ಹಾಕಿದ್ದಾರೆ. ಟಾಲಿವುಡ್‌ ಸ್ಟೈಲಿಸ್ಟ್‌ ಶ್ರಾವ್ಯ ವರ್ಮಾ ಜೊತೆಗೆ ರಶ್ಮಿಕಾಗೆ ತುಂಬಾ ವರ್ಷಗಳ ನಂಟು ಇದೆ. ವಿಜಯ್‌ ಮತ್ತು ರಶ್ಮಿಕಾಗೆ ಸ್ಟೈಲಿಸ್ಟ್‌ ಆಗಿ ಶ್ರಾವ್ಯಾ ಕೆಲಸ ಮಾಡಿದ್ದಾರೆ. ಇದೀಗ ಅವರು ಕೂಡ ಉದಯಪುರದಲ್ಲಿದ್ದಾರೆ. ಇನ್ನು, ದಿ ಗರ್ಲ್‌ಫ್ರೆಂಡ್‌ ಸಿನಿಮಾ ನಿರ್ದೇಶಿಸಿದ ಮೇಲೆ ರಶ್ಮಿಕಾಗೆ ಆಪ್ತರೆನಿಸಿಕೊಂಡಿರುವ ರಾಹುಲ್‌ ರವೀಂದ್ರನ್‌ ಕೂಡ ವಿರೋಶ್ ಮದುವೆಯಲ್ಲಿ ಭಾಗಿಯಾಗಿದ್ದಾರೆ.

Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

ಸಕ್ಸಸ್‌ ಕೊಟ್ಟವನ್ನು ಮರೆಯಲಿಲ್ಲ ವಿಜು

ಇನ್ನು, ವಿಜಯ್‌ ದೇವರಕೊಂಡ ಅವರನ್ನು ಹೀರೋ ಮಾಡಿದ್ದೇ ತರುಣ್‌ ಭಾಸ್ಕರ್‌. ತಮ್ಮ ಪೆಳ್ಳಿ ಚೂಪುಲು ಚಿತ್ರದ ಮೂಲಕ ವಿಜಯ್‌ಗೆ ಹೀರೋ ಪಟ್ಟ ಕೊಟ್ಟಿದ್ದರು ತರುಣ್‌. ಇದೀಗ ವಿಜಯ್‌ ಪೆಳ್ಳಿಗೆ (ಮದುವೆಗೆ) ಆಗಮಿಸಿದ್ದಾರೆ. ಅವರ ಜೊತೆಗೆ ನಟಿ ಇಶಾ ರೆಬ್ಬಾ ಕೂಡ ಉದಯಪುರದಲ್ಲಿ ಬೀಡುಬಿಟ್ಟಿದ್ದಾರೆ.

ʻಪೆಳ್ಳಿ ಚೂಪುಲುʼ ಮೂಲಕ ವಿಜಯ್‌ ಹೀರೋ ಆದರೂ, ಅವರಿಗೆ ಸ್ಟಾರ್‌ ಪಟ್ಟ ಸಿಕ್ಕಿದ್ದೇ ಅರ್ಜನ್‌ ರೆಡ್ಡಿ ಚಿತ್ರದ ಮೂಲಕ. ಈ ಸಿನಿಮಾವನ್ನು ನಿರ್ದೇಶಿಸಿದವರು ಸಂದೀಪ್‌ ರೆಡ್ಡಿ ವಂಗಾ. ಹಾಗಾಗಿ, ಅವರಿಗೂ ಮದುವೆ ಆಹ್ವಾನ ತಲುಪಿದ್ದು, ಬುಧವಾರ (ಫೆ.25) ಬೆಳಗ್ಗೆ ಸಂದೀಪ್‌ ರೆಡ್ಡಿ ವಂಗಾ ಅವರು ಉದಯಪುರಕ್ಕೆ ಆಗಮಿಸಿದ್ದಾರೆ.

Rashmika Vijay Wedding: ಕುಟುಂಬದೊಂದಿಗೆ ಉದಯಪುರಕ್ಕೆ ರಶ್ಮಿಕಾ-ವಿಜಯ್ ಪ್ರಯಾಣ! ಜೋಡಿ ಲುಕ್‌ ಕಂಡು ಫ್ಯಾನ್ಸ್‌ ಖುಷ್‌

ಹೈದರಾಬಾದ್‌ನಿಂದ ಬಂದ ಪುರೋಹಿತರು

ಇನ್ನು, ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಗೆ ಹೈದರಾಬಾದ್‌ನಿಂದ ಉದಯಪುರಕ್ಕೆ ಪುರೋಹಿತರನ್ನು ಕರೆಸಿಕೊಳ್ಳಲಾಗಿದೆ. ಮದುವೆ ಶಾಸ್ತ್ರಗಳನ್ನು ಈ ಪುರೋಹಿತರೇ ನಡೆಸಿಕೊಡಲಿದ್ದಾರೆ. ಅಂದಹಾಗೆ, ರಶ್ಮಿಕಾ ಮತ್ತು ವಿಜಯ್‌ ಎರಡು ಭಾರಿ ಮದುವೆ ಆಗಲಿದ್ದಾರೆ. ಮೊದಲಿಗೆ ತೆಲುಗು ಸಂಸ್ಕೃತಿಯಂತೆ ಮದುವೆ ನಡೆದರೆ, ನಂತರ ಕೊಡವ ಸಂಪ್ರದಾಯದಂತೆ ಇನ್ನೊಮ್ಮೆ ಮದುವೆ ನಡೆಯಲಿದೆ.