ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ನಮ್ಮ ಭವಿಷ್ಯ ನಮ್ಮ ಕೈಯಲ್ಲಿಲ್ಲ'; ಟಿ20 ವಿಶ್ವಕಪ್ ಸೆಮಿಫೈನಲ್ ನಿರೀಕ್ಷೆಯ ಬಗ್ಗೆ ಶಾಹೀನ್ ಅಫ್ರಿದಿ ಹೇಳಿಕೆ

England vs Pakistan: ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಫರ್ಹಾನ್ ಅವರ 63 ರನ್‌ಗಳ (45 ಎಸೆತ) ನೆರವಿನಿಂದ 9 ವಿಕೆಟ್‌ಗೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಐದು ಎಸೆತಗಳಿರುವಂತೆ 8 ವಿಕೆಟ್‌ಗೆ 166 ರನ್ ಗಳಿಸಿ ಗೆಲುವಿನ ದಡ ಸೇರಿತು.

'ನಮ್ಮ ಭವಿಷ್ಯ ನಮ್ಮ ಕೈಯಲ್ಲಿಲ್ಲ'; ಸೋಲಿನ ಬಳಿಕ ಮರುಗಿದ ಅಫ್ರಿದಿ

Shaheen Afridi -

Abhilash BC
Abhilash BC Feb 25, 2026 12:31 PM

ಪಲ್ಲೆಕೆಲೆ, ಫೆ.25: ಮಂಗಳವಾರ ನಡೆದ ಟಿ20 ವಿಶ್ವಕಪ್(T20 World Cup 2026) ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಇಂಗ್ಲೆಂಡ್(England vs Pakistan) ವಿರುದ್ಧ ಎರಡು ವಿಕೆಟ್‌ಗಳಿಂದ ಸೋಲನುಭವಿಸಿದ ಪಾಕಿಸ್ತಾನದ ಪಾಕಿಸ್ತಾನದ ಸೆಮಿಫೈನಲ್ ಕನಸು ಬಹುತೇಕ ಕಮರಿತು. ಸೋಲಿನ ಬಳಿಕ, ಪಾಕಿಸ್ತಾನದ ವೇಗಿ ಶಾಹೀನ್ ಶಾ ಅಫ್ರಿದಿ(Shaheen Shah Afridi) ತಮ್ಮ ತಂಡದ ಭವಿಷ್ಯ ಇನ್ನು ಮುಂದೆ ನಮ್ಮ ಕೈಯಲ್ಲಿಲ್ಲ ಎಂದು ಒಪ್ಪಿಕೊಂಡರು.

ಪಾಕಿಸ್ತಾನ ತಂಡವು ಎರಡು ಸೂಪರ್ ಎಂಟನೇ ಪಂದ್ಯಗಳಿಂದ ಕೇವಲ ಒಂದು ಅಂಕವನ್ನು ಮಾತ್ರ ಹೊಂದಿದೆ, ಆದ್ದರಿಂದ ಈಗ ತನ್ನ ಕೊನೆಯ ಪಂದ್ಯವನ್ನು ಗೆದ್ದು ಸೆಮಿಫೈನಲ್ ತಲುಪುವ ಭರವಸೆಯನ್ನು ಹೊಂದಲು ಇತರ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಹೀನ್ ಶಾ ಅಫ್ರಿದಿ, "ನಮ್ಮ ಅದೃಷ್ಟ ನಮ್ಮ ಕೈಯಲ್ಲಿಲ್ಲ ಎಂದು ನಮಗೆ ತಿಳಿದಿದೆ. ಆದರೆ ಶನಿವಾರ ನಡೆಯುವ ನಮ್ಮ ಕೊನೆಯ ಪಂದ್ಯದಲ್ಲಿ ನಾವು ಶ್ರೀಲಂಕಾವನ್ನು ಸೋಲಿಸುವ ವಿಶ್ವಾಸವಿದೆ" ಎಂದು ಹೇಳಿದರು. ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್‌ ಅವರಿಗೆ ಶ್ಲಾಘನೆ ವ್ಯಕ್ತಪಡಿಸಿ, ಇದು ವಿಶ್ವ ದರ್ಜೆಯ ಶತಕ ಎಂದರು.

"ನನ್ನ ಅಭಿಪ್ರಾಯದಲ್ಲಿ ಇದು ಅವರ(ಬ್ರೂಕ್‌) ಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಗಿರುತ್ತದೆ" ಎಂದು ಅಫ್ರಿದಿ ಸುದ್ದಿಗಾರರಿಗೆ ತಿಳಿಸಿದರು. "ಇದು ಬ್ಯಾಟಿಂಗ್ ಮಾಡಲು ಸುಲಭವಾದ ಪಿಚ್ ಆಗಿರಲಿಲ್ಲ ಆದರೆ ಅವರು ನಮ್ಮಿಂದ ಪಂದ್ಯವನ್ನು ಕಸಿದುಕೊಂಡರು" ಎಂದರು.‌

'ಹಾರ್ದಿಕ್ ಪಾಂಡ್ಯರನ್ನು ನಂಬಿರಿ'; ಭಾರತ ತಂಡಕ್ಕೆ ಕುಂಬ್ಳೆ ಸಲಹೆ

ಅಫ್ರಿದಿ ಪಂದ್ಯದಲ್ಲಿ ನಾಲ್ಕು ಓವರ್‌ ಬೌಲಿಂಗ್‌ ಮಾಡಿ 30 ರನ್‌ ವೆಚ್ಚದಲ್ಲಿ 4 ಪ್ರಮುಖ ವಿಕೆಟ್‌ ಕಿತ್ತರು. ಆದರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಕಂಡು ಬಾರದ ಕಾರಣ ಪಂದ್ಯ ಸೋತಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಫರ್ಹಾನ್ ಅವರ 63 ರನ್‌ಗಳ (45 ಎಸೆತ) ನೆರವಿನಿಂದ 9 ವಿಕೆಟ್‌ಗೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಐದು ಎಸೆತಗಳಿರುವಂತೆ 8 ವಿಕೆಟ್‌ಗೆ 166 ರನ್ ಗಳಿಸಿ ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರು

ಪಾಕಿಸ್ತಾನ: 20 ಓವರುಗಳಲ್ಲಿ 9 ವಿಕೆಟ್‌ಗೆ 164 (ಫರ್ಹಾನ್ 63, ಬಾಬರ್ 25, ಫಖರ್ ಜಮಾನ್‌ 25, ಶದಾಬ್ ಖಾನ್ 23, ಜೋಫ್ರಾ ಆರ್ಚರ್ 32ಕ್ಕೆ2, ಜೇಮಿ ಓವರ್ಟನ್ 26ಕ್ಕೆ2, ಲಿಯಾಮ್ ಡಾಸನ್ 24ಕ್ಕೆ3). ಇಂಗ್ಲೆಂಡ್: 19.1 ಓವರುಗಳಲ್ಲಿ 8 ವಿಕೆಟ್‌ಗೆ 166 (ಹ್ಯಾರಿ ಬ್ರೂಕ್ 100, ವಿಲ್‌ ಜಾಕ್ಸ್‌ 28; ಶಾಹೀನ್ ಶಾ ಅಫ್ರೀದಿ 30ಕ್ಕೆ4, ಉಸ್ಮಾನ್ ತಾರಿಖ್ 31ಕ್ಕೆ2, ಮೊಹ್ಮದ್ ನವಾಜ್ 26ಕ್ಕೆ2).