ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Honey Trap: ರಾಜ್ಯ ಸಚಿವರ ಮೇಲೆ 2 ಬಾರಿ ಹನಿಟ್ರ್ಯಾಪ್‌ ಪ್ರಯತ್ನ: ಬಾಂಬ್‌ ಸಿಡಿಸಿದ ಸತೀಶ್‌ ಜಾರಕಿಹೊಳಿ

Satish Jarkiholi: ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಪ್ರಯತ್ನ ನಡೆಸಲಾಗಿದೆ ಎನ್ನುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ''ಪ್ರಭಾವಿ ಸಚಿವರ ಮೇಲೆ 2 ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಆ ಮೂಲಕ ಸಚಿವರ ತೇಜೋವಧೆ ಮಾಡಲು ಯತ್ನಿಸಲಾಗಿದೆ. ಆದರೆ ಇದನ್ನು ಸಕಾಲದಲ್ಲಿ ವಿಫಲಗೊಳಿಸಲಾಗಿದೆʼʼ ಎಂದು ತಿಳಿಸಿದ್ದಾರೆ.

ರಾಜ್ಯ ಸಚಿವರ ಮೇಲೆ 2 ಬಾರಿ ಹನಿಟ್ರ್ಯಾಪ್‌ ಪ್ರಯತ್ನ: ಸತೀಶ್‌ ಜಾರಕಿಹೊಳಿ

ಸತೀಶ್‌ ಜಾರಕಿಹೊಳಿ.

Profile Ramesh B Mar 20, 2025 5:25 PM

ಬೆಂಗಳೂರು: ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ (Honey Trap) ಬಲೆಗೆ ಕೆಡವಲು ಪ್ರಯತ್ನ ನಡೆಸಲಾಗಿದೆ ಎನ್ನುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಸಚಿವರೊಬ್ಬರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಲು ಪ್ರಯತ್ನ ನಡೆದಿತ್ತು. ಆದರೆ ಆ ಪ್ರಯತ್ನವನ್ನು ವಿಫಲಗೊಳಿಸಿದಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಗುರುವಾರ (ಮಾ. 20) ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ''ಪ್ರಭಾವಿ ಸಚಿವರ ಮೇಲೆ 2 ಬಾರಿ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಆ ಮೂಲಕ ಸಚಿವರ ತೇಜೋವಧೆ ಮಾಡಲು ಯತ್ನಿಸಲಾಗಿದೆ. ಆದರೆ ಇದನ್ನು ಸಕಾಲದಲ್ಲಿ ವಿಫಲಗೊಳಿಸಲಾಗಿದೆʼʼ ಎಂದು ತಿಳಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದ ಜಾರಕಿಹೊಳಿ, ʼʼಹನಿಟ್ರ್ಯಾಪ್‌ ಪ್ರಯತ್ನ ನಡೆದಿದ್ದು ನಿಜ. ಆದರೆ ಅವರು ಅದರಲ್ಲಿ ಯಶಸ್ವಿಯಾಗಲಿಲ್ಲ. ರಾಜ್ಯದಲ್ಲಿ ಈ ರೀತಿ ನಡೆಯುತ್ತಿರುವುದು ಇದು ಮೊದಲ ಸಲವಲ್ಲ. ಈ ರೀತಿಯ ಪ್ರಯತ್ನ ಸುಮಾರು 20 ವರ್ಷಗಳಿಂದ ನಡೆಯುತ್ತಲೇ ಇದೆ. ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಹೀಗೆ ಎಲ್ಲ ಪಕ್ಷದಲ್ಲೂ ಸಂತ್ರಸ್ತರಿದ್ದಾರೆʼʼ ಎಂದು ಅವರು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: BY Vijayendra: ಬೆಲೆ ಏರಿಕೆಯ ʼಗ್ಯಾರಂಟಿʼ ಕೊಟ್ಟ ಕಾಂಗ್ರೆಸ್ ಸರ್ಕಾರ- ಬಿ.ವೈ.ವಿಜಯೇಂದ್ರ

ಈ ಬಗ್ಗೆ ದೂರು ದಾಖಲಿಸಲು ಸೂಚಿಸಲಾಗಿದ್ದು, ತನಿಖೆ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ. ʼʼಈ ಬಗ್ಗೆ ದೂರು ನೀಡುವಂತೆ ನಾವು ಸಂತ್ರಸ್ತ ಸಚಿವರಿಗೆ ಸೂಚಿಸಿದ್ದೇವೆ. ದೂರು ನೀಡಿದರೆ ಮಾತ್ರವೇ ತನಿಖೆ ನಡೆದು ಸತ್ಯ ಹೊರ ಬರಲಿದೆʼʼ ಎಂದು ಜಾರಕಿಹೊಳಿ ತಿಳಿಸಿದ್ದಾರೆ. ''ಹನಿಟ್ರ್ಯಾಪ್​ ಮಾಡುವುದಕ್ಕೆಂದೇ ಒಂದು ತಂಡ​ ಇದೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಎಲ್ಲ ಪಕ್ಷದವರೂ ಚರ್ಚಿಸಬೇಕಾದ ವಿಷಯ'' ಎಂದಿದ್ದಾರೆ.

ವಿಜಯೇಂದ್ರ ಕಿಡಿ

ಈತನ್ಮಧ್ಯೆ ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ಕರ್ನಾಟಕ ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಗುರುವಾರ ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅದನ್ನು ಬಲವಂತವಾಗಿ ಅಂಗೀಕರಿಸಿದೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಕರ್ನಾಟಕ ಸರ್ಕಾರ ಬುಧವಾರ ಕೇಂದ್ರ ಸರ್ಕಾರದ ಉದ್ದೇಶಿತ ಶಾಸನದ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು.

ʼʼಕೇಂದ್ರ ಸರ್ಕಾರ ವಕ್ಫ್‌ಗೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಸೂದೆಯನ್ನು ಅಂಗೀಕರಿಸಿದ್ದರು. ಇದರ ಉದ್ದೇಶ ಸ್ಪಷ್ಟ: ವಕ್ಫ್‌ನಲ್ಲಿ ಪಾರದರ್ಶಕತೆ ತರಲು ಪ್ರಧಾನಿ ಮೋದಿ ಆಸಕ್ತಿ ಹೊಂದಿದ್ದರೆ, ಸಿದ್ದರಾಮಯ್ಯ ಸರ್ಕಾರ ಭೂ ಕಬಳಿಕೆದಾರರನ್ನು ರಕ್ಷಿಸಲು ಬಯಸಿದೆ" ಎಂದು ವಿಜಯೇಂದ್ರ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಭೂ ಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ʼʼಬಿಜೆಪಿ ಇಂತಹ ಹಗರಣಗಳನ್ನು ಜನರ ಮುಂದೆ ತೆರೆದಿಡಲಿದೆ. ಈ ಭೂ ಕಬಳಿಕೆ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳವನ್ನು ಬಿಜೆಪಿ ಕರ್ನಾಟಕ ಜನರ ಮುಂದೆ ಬಹಿರಂಗಪಡಿಸಲಿದೆ" ಎಂದು ಹೇಳಿದ್ದಾರೆ.