ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nandini Milk: ತುಪ್ಪ, ಬೆಣ್ಣೆ ಬೆಲೆ ಇಳಿಕೆ ಹಿಂದೆಯೇ ನಂದಿನಿ ದೇಸಿ ಹಾಲಿನ ದರ ಏರಿಕೆ

KMF: ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ನಂದಿನಿ ಹಾಲಿಗೆ ಗ್ರಾಹಕರು ಹೆಚ್ಚಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಂಸ್ಥೆ ಹಾಲಿನಲ್ಲೂ ವಿವಿಧ ವೆರೈಟಿಗಳನ್ನು ಪರಿಚರಿಸಿದ್ದು, ಅವುಗಳಲ್ಲಿ ದೇಸಿ ಹಾಲಿನ ಪ್ಯಾಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ. ಒಂದು ಲೀಟರ್​ ದೇಸಿ ಹಾಲು ಬೆಲೆ 120 ರೂಪಾಯಿ ಇದೆ.

ತುಪ್ಪ, ಬೆಣ್ಣೆ ಬೆಲೆ ಇಳಿಕೆ ಹಿಂದೆಯೇ ನಂದಿನಿ ದೇಸಿ ಹಾಲಿನ ದರ ಏರಿಕೆ

-

ಹರೀಶ್‌ ಕೇರ ಹರೀಶ್‌ ಕೇರ Sep 23, 2025 1:16 PM

ಬೆಂಗಳೂರು: ಜಿಎಸ್​​ಟಿ (GST) ಇಳಿಕೆ ಹಿನ್ನೆಲೆ ದೇಶದಾದ್ಯಂತ ಮಧ್ಯಮ ವರ್ಗದವರಿಗೆ ಬೆಲೆ ಏರಿಕೆ (price hike) ಹೊರೆ ಕಡಿಮೆಯಾಗಿದೆ. ಕೆಎಂಎಫ್ (KMF) ಕೂಡ ಕೆಲವು ಉತ್ಪನ್ನಗಳ ಬೆಲೆ ಇಳಿಸಿ ಗ್ರಾಹಕರಿಗೆ ಲಾಭದ ಫಲ ನೀಡಲು ಮುಂದಾಗಿದೆ. ಜೊತೆಗೇ ಬೆಲೆ ಏರಿಕೆ ಶಾಕ್ ಕೂಡ ನೀಡಿದೆ. ನಂದಿನಿ ದೇಸಿ ಹಾಲು ಬಳಸುವವರಿಗೆ ದರ ಏರಿಕೆ ಬಿಸಿ ತಟ್ಟಿದೆ. ಏಕಾಏಕಿ ದೇಸಿ ಹಾಲಿನ ಬೆಲೆ ಏರಿಕೆ (Nandini milk) ಆಗಿದ್ದು, 1 ಲೀಟರ್​ ಹಾಲಿ​ಗೆ 40 ರೂಪಾಯಿ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ತರಲಾಗಿದೆ.

ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ನಂದಿನಿ ಹಾಲಿಗೆ ಗ್ರಾಹಕರು ಹೆಚ್ಚಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಂಸ್ಥೆ ಹಾಲಿನಲ್ಲೂ ವಿವಿಧ ವೆರೈಟಿಗಳನ್ನು ಪರಿಚರಿಸಿದ್ದು, ಅವುಗಳಲ್ಲಿ ದೇಸಿ ಹಾಲಿನ ಪ್ಯಾಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ. ಒಂದು ಲೀಟರ್​ ದೇಸಿ ಹಾಲು ಬೆಲೆ 120 ರೂಪಾಯಿ ಇದೆ. ಅರ್ಧ ಲೀಟರ್ ದೇಸಿ ಹಾಲಿಗೆ 60 ರೂ. ಇದೆ. ಈ ಮೊದಲು ಒಂದು ಲೀಟರ್ ದೇಸಿ ಹಾಲು 80 ರೂ. ಇತ್ತು. ಅರ್ಧ ಲೀಟರ್ 40 ರೂ. ಇತ್ತು. ಇದೀಗ ಏಕಾಏಕಿ ಕೆಎಂಎಫ್​ 40 ರೂಪಾಯಿ ಹೆಚ್ಚಳ ಮಾಡಿದೆ.

ದೇಸಿ ಹಾಲಿಗೆ ಹೆಚ್ಚಿದ ಬೇಡಿಕೆ

ಕೆಎಂಎಫ್ ದೇಸಿ ಹಸುವಿನ ಹಾಲು ಮಾರಾಟ ಮಾಡುತ್ತಿದ್ದು, ಇದೀಗ ಬೇಡಿಕೆ ಹೆಚ್ಚಾಗಿದೆ. ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ಕೆಎಂಎಫ್ ಈ ಹಾಲಿನ ಮಾರಾಟಕ್ಕೆ ಮುಂದಾಗಿತ್ತು. ಬೆಂಗಳೂರು ಡೈರಿಗೆ ಪ್ರತಿದಿನ 3 ಸಾವಿರ ಲೀ. ದೇಸಿ ಹಾಲು ಪೂರೈಕೆ ಮಾಡಲಾಗ್ತಿದೆ ಎಂದು ವರದಿ ಆಗಿದೆ. ಬೆಂಗಳೂರಲ್ಲಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿತ್ತು. ದೇಸಿ ಹಸು ದಿನಕ್ಕೆ 1-2 ಲೀಟರ್ ಗರಿಷ್ಠ ಹಾಲು ಕೊಡುತ್ತೆ. ದೇಸಿ ಹಸುವಿನ ಹಾಲಿಗೆ ಡಿಮ್ಯಾಂಡ್ ಹೆಚ್ಚಿದೆ. ಪೂರೈಕೆ ಕಡಿಮೆ ಆದ ಕಾರಣ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗಿದೆ. ಶೇ. 90ರಷ್ಟು ಹಣವನ್ನು ದೇಸಿ ಹಸು ರೈತರಿಗೆ ಕೊಡಲಾಗುತ್ತಿತ್ತು ಎಂದು ಕೆಎಂಎಫ್ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Nandini prices: ನಂದಿನಿ ತುಪ್ಪ, ಬೆಣ್ಣೆ, ಪನೀರ್‌ ದರ ಇಳಿಕೆ; ಹಾಲು- ಮೊಸರು ಯಥಾಸ್ಥಿತಿ