ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kodagu Murder case: ಕೊಡಗಿನಲ್ಲಿ ಭೀಕರ ಹತ್ಯಾಕಾಂಡ; ಕಾಫಿ ತೋಟದ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ

Kodagu murder case: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಳುತೋಡು ಗ್ರಾಮದಲ್ಲಿ ನಡೆದಿದೆ. ಪತ್ನಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಸೇರಿ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ಭೀಕರ ಹತ್ಯಾಕಾಂಡ; ಕಾಫಿ ತೋಟದ ಮನೆಯಲ್ಲಿ ನಾಲ್ವರ ಬರ್ಬರ ಹತ್ಯೆ

Profile Prabhakara R Mar 28, 2025 3:32 PM

ಕೊಡಗು: ಜಿಲ್ಲೆಯಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ. ಪತ್ನಿಗೆ ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ಪತ್ನಿ ಸೇರಿ ನಾಲ್ವರನ್ನು ಬರ್ಬರವಾಗಿ ಹತ್ಯೆ (Kodagu Murder case) ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಳುತೋಡು ಗ್ರಾಮದಲ್ಲಿ ನಡೆದಿದೆ. ಕರಿಯ (75), ಗೌರಿ (70), ನಾಗಿ (35) ಹಾಗೂ 8 ವರ್ಷದ ಕಾವೇರಿಯನ್ನು ಕತ್ತಿಯಿಂದ ಹಲ್ಲೆಗೈದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಿರೀಶ್ (35) ಆರೋಪಿಯಾಗಿದ್ದು, ಈತ ಸದ್ಯ ನಾಪತ್ತೆಯಾದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Assault Case: ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ಮಾಡಿದ 3 ಆರೋಪಿಗಳಿಗೆ ಜಾಮೀನು

ನಾಗಿಯೊಂದಿಗೆ ಗಿರೀಶ್ ಮೂರನೇ ಮದುವೆಯಾಗಿ ತೋಟದ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಕಾಫಿ ಬೀಜ ಮಾರಾಟ ಮಾಡಿದ ಹಣದ ವಿಚಾರಕ್ಕಾಗಿ ನಾಲ್ವರ ನಡುವೆ ಗಲಾಟೆ ನಡೆಯುತ್ತಿತ್ತು. ಅಲ್ಲದೇ ಪತ್ನಿಗೆ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಗಲಾಟೆ ನಡೆದಿತ್ತು, ಇದೇ ಕಾರಣಕ್ಕೆ ಗಿರೀಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೌಟುಂಬಿಕ ಕಲಹ, ಹೆಂಡತಿಯನ್ನು ಕೊಂದು ಗಂಡ ಆತ್ಮಹತ್ಯೆ

ಬಳ್ಳಾರಿ: ಪತಿ ಪತ್ನಿಯರ (wife - husband) ನಡುವಿನ ಕೌಟುಂಬಿಕ ಕಲಹ (Quarrel) ಇಬ್ಬರ ದುರಂತ ಸಾವಿನಲ್ಲಿ ಪರ್ಯವಸಾನವಾದ ಘಟನೆ ಬಳ್ಳಾರಿ (bellary news, bellary crime) ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಹೆಂಡತಿಯನ್ನು ಕೊಂದ (Murder case) ಗಂಡ ಬಳಿಕ ತಾನು ಕೂಡ ಆತ್ಮಹತ್ಯೆಗೆ (Self harming) ಶರಣಾಗಿದ್ದಾನೆ. ಹಲಿಮಾ (42) ಹಾಗು ಪತಿ ಖರೀಂ ಸಾಬ್ (45) ಸಾವನ್ನಪ್ಪಿರುವ ದಂಪತಿಗಳು ಎಂದು ತಿಳಿದುಬಂದಿದೆ. ವೈಯಕ್ತಿಕ ವಿಚಾರಗಳಿಗಾಗಿ ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಗೊತ್ತಾಗಿದೆ.

ಬುಧವಾರ ತಡರಾತ್ರಿ ಇಬ್ಬರ ಮಧ್ಯ ಗಲಾಟೆ ನಡೆದಿದೆ. ಈ ವೇಳೆ ಕೋಪಗೊಂಡಿದ್ದ ಪತಿ ಗುರುವಾರ ಬೆಳಗಿನ ಜಾವ ಪತ್ನಿಯನ್ನು ನೇಣಿಗೆ ಹಾಕಿ ಕೊಂದು ತಾನೂ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಜಗಳಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಕುಡತಿನಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಚೆಕ್‌ಡ್ಯಾಂನಲ್ಲಿ ಮುಳುಗಿ ಬಾಲಕ ಸಾವು

ದಾವಣಗೆರೆ : ಹಳ್ಳದ ಚೆಕ್‌ಡ್ಯಾಂನಲ್ಲಿ ಈಜಾಡಲು ತೆರಳಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬಾನುವಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಬಾನುವಳ್ಳಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಮೊಹ್ಮದ್ ತನ್ವೀರ್ (13) ಎಂದು ಗುರುತಿಸಲಾಗಿದೆ.

ಗ್ರಾಮದ ಸಮೀಪ ರಾಯಪುರ ರಸ್ತೆಯಲ್ಲಿರುವ ದೊಡ್ಡಹಳ್ಳದ ಚೆಕ್‌ಡ್ಯಾಂನಲ್ಲಿ ಈಜಾಡಿ ಬರುವುದಾಗಿ ಸಂಜೆ 4ಕ್ಕೆ ಹೊರಟಿದ್ದ ತನ್ವೀರ್ ಮನೆಗೆ ಮರಳಿರಲಿಲ್ಲ. ಹಳ್ಳಕ್ಕೆ ಈಜುಗಾರರೊಂದಿಗೆ ಹೋಗಿ ಹುಡುಕಾಡಿದಾಗ ಮಧ್ಯರಾತ್ರಿ ಶವ ಪತ್ತೆಯಾಯಿತು. ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.