ಹಲವು ಯುವತಿಯರೊಂದಿಗೆ ರಾಸಲೀಲೆ ವಿಡಿಯೊ ವೈರಲ್; ಕೊಡಗಿನ ಮುಸ್ಲಿಂ ಯುವಕ ಆರೆಸ್ಟ್
ಕೊಡಗಿನ ಆರೋಪಿ ಯುವಕನು ವಿವಿಧ ಯುವತಿಯರೊಂದಿಗೆ ಕಾಮಕೇಳಿ ನಡೆಸಿ, ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಯುವಕನನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೊಹಮ್ಮದ್ ಸವದ್ -
ಮಡಿಕೇರಿ, ಜ. 29: ಜಿಲ್ಲೆಯ ಹಲವು ಯುವತಿಯರೊಂದಿಗೆ ಯುವಕನೊಬ್ಬನ ರಾಸಲೀಲೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಡಿಕೇರಿ (Kodagu News) ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂಬ ಯುವಕನನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯೆನಪೋಯ ಕಾಲೇಜಿನ ಬಿಬಿಎ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಆರೋಪಿಯು ವಿವಿಧ ಯುವತಿಯರೊಂದಿಗೆ ಕಾಮಕೇಳಿ ನಡೆಸಿ, ಖಾಸಗಿ ಕ್ಷಣಗಳನ್ನು ಸ್ವತಃ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ವಿಡಿಯೊಗಳಲ್ಲಿ ಅನ್ಯಧರ್ಮದ ಯುವತಿಯರು, ರಾಜಕಾರಣಿಗಳು ಪುತ್ರಿಯರೂ ಇದ್ದಾರೆ ಎನ್ನಲಾಗಿದೆ. ಈ ವಿಡಿಯೊಗಳು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸವದ್ ಸ್ನೇಹಿತರೇ ಈ ವಿಡಿಯೊಗಳನ್ನು ವೈರಲ್ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
In #Kodagu district, a young man allegedly behaved inappropriately with several young women, and videos of his indecent acts have gone viral on social media, creating a major stir.
— Hate Detector 🔍 (@HateDetectors) January 29, 2026
In connection with this case, the Madikeri Rural Police have arrested a youth named Mohammad Sawad… pic.twitter.com/51FNpvCtNt
ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಯುವಕರ ಮೇಲೆ ಹಲ್ಲೆ ನಡೆದಿರುವ ವಿಡಿಯೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಲ್ಲೆಗಳು ಸವದ್ ಕಡೆಯವರಿಂದ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಸತ್ಯಾಂಶ ಬಯಲಿಗೆಳೆಯಲು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಹೇಳಿದ್ದಾರೆ.
ಬಾಯ್‌ಫ್ರೆಂಡ್ ಜತೆ ಓಡಿಹೋಗಿ ಪತಿ, ಮಾವನ ಸಾವಿಗೆ ಕಾರಣಳಾದ ಮಹಿಳೆ ಆರೆಸ್ಟ್
ಒಂದೇ ಮಹಿಳೆ ಜತೆ ಇಬ್ಬರಿಗೆ ಅನೈತಿಕ ಸಂಬಂಧ; ಚಾಕುವಿನಿಂದ ಇರಿದು ಒಬ್ಬನ ಭೀಕರ ಕೊಲೆ
ಹಾಸನ: ಅನೈತಿಕ ಸಂಬಂಧ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಅಡುಗೆ ಕಾಂಟ್ರಾಕ್ಟರ್‌ನ ಕೊಲೆ ಮಾಡಲಾಗಿದೆ. ಅಡುಗೆ ಗುತ್ತಿಗೆದಾರ ಆನಂದ (48) ಕೊಲೆಯಾದ ವ್ಯಕ್ತಿ.
ಒಂದೇ ಮಹಿಳೆಯ ಜತೆಗೆ ಆನಂದ್ ಮತ್ತು ಧರ್ಮೇಂದ್ರ ಅನೈತಿಕ ಸಂಬಂಧ ಹೊಂದಿದ್ದರು. ಮಹಿಳೆಯ ಜತೆ ಧರ್ಮೇಂದ್ರ ಎಂಟು ವರ್ಷಗಳ ಗೆಳೆತನ ಹೊಂದಿದ್ದ. ಈ ನಡುವೆ ಇದೇ ಮಹಿಳೆ ಜತೆ ಆನಂದ್ ಸಹ ಸಂಬಂಧ ಹೊಂದಿದ್ದ.
ಈ ವಿಚಾರವಾಗಿ ನೆನ್ನೆ ರಾತ್ರಿ ಆನಂದ್ ಮತ್ತು ಧರ್ಮೇಂದ್ರ ನಡುವೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಗುತ್ತಿಗೆದಾರ ಆನಂದ್ ಮನೆಗೆ ತೆರಳಿದ್ದಾನೆ. ಮತ್ತೆ ಫೋನ್ ಮಾಡಿ ಧರ್ಮೇಂದ್ರ ಆನಂದನನ್ನು ಕರೆಸಿಕೊಂಡಿದ್ದಾನೆ. ಕುಡಿದ ಅಮಲಿನಲ್ಲಿ ಆನಂದನನ್ನು ಕೊಲೆ ಮಾಡಿ ಧರ್ಮೇಂದ್ರ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಾಸನ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.