ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suresh Kumar: ಉಪ್ಪಿ 2 ಚಿತ್ರದಲ್ಲಿ ನಟಿಸಿದ್ದ ಕೋಲಾರ ಮೂಲದ ಸುರೇಶ್‌ ಕುಮಾರ್‌ ಅಮೆರಿಕದಲ್ಲಿ ಸಾವು

Kolar News: ಕೋಲಾರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್ ಹಾಗೂ ಮಾಡೆಲ್​ ಸುರೇಶ್ ಕುಮಾರ್​ (42), ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಉಪೇಂದ್ರ ಅಭಿನಯದ ಉಪ್ಪಿ 2 ಸಿನಿಮಾದಲ್ಲೂ ಸುರೇಶ್‌ ಕಾಣಿಸಿಕೊಂಡಿದ್ದರು.

ಕೋಲಾರ ಮೂಲದ ಫಿಟ್ನೆಸ್ ಟ್ರೈನರ್ ಸುರೇಶ್‌ ಅಮೆರಿಕದಲ್ಲಿ ಸಾವು

-

Prabhakara R Prabhakara R Sep 3, 2025 3:34 PM

ಕೋಲಾರ: ಅಮೆರಿಕದಲ್ಲಿ ನೆಲೆಸಿದ್ದ ಕೋಲಾರ ಮೂಲದ ಫಿಟ್ನೆಸ್ ಟ್ರೈನರ್, ಬಾಡಿ ಬಿಡ್ಡರ್ ಹಾಗೂ ಮಾಡೆಲ್​ ಸುರೇಶ್ ಕುಮಾರ್​ (42) (Suresh Kumar) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ಲೋರಿಡಾದಿಂದ ಟೆಕ್ಸಾಸ್​ಗೆ ಹೋಗುವ ಮಾರ್ಗ ಮಧ್ಯೆ ನಡೆದ ಕಾರು​ ಅಪಘಾತದಲ್ಲಿ ಸುರೇಶ್​ ಬಾಬು ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸದ್ಯ ಅಮೆರಿಕದಲ್ಲಿ ಅಪಘಾತದ ಕುರಿತು ಪೊಲೀಸರು ತನಿಖೆ ನಡೆಸಿ, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕುಟುಂಬಸ್ಥರು ಸುರೇಶ್ ಕುಮಾರ್ ಶವವನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸುತ್ತಿದ್ದು, ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸುರೇಶ್ ಕುಮಾರ್ ಹುಟ್ಟಿ ಬೆಳೆದಿದ್ದು ಕೋಲಾರದ ಗಾಂಧಿನಗರದಲ್ಲಿ. ಚಲಪತಿ- ಮುನಿಯಮ್ಮ ದಂಪತಿಯ ಮೊದಲ ಮಗನಾದ ಸುರೇಶ್​ ಕೋಲಾರದಲ್ಲಿ ಕೆಲಕಾಲ ನೆಲೆಸಿದ್ದರು. ಬಳಿಕ ಬೆಂಗಳೂರು ಸೇರಿದ್ದ ಸುರೇಶ್​ ಬಾಡಿಬಿಲ್ಡರ್ ಆಗಿ ವೃತ್ತಿ ಜೀವನ ಆರಂಭಿಸಿ, ಉಪೇಂದ್ರ ಸೇರಿ ಹಲವಾರು ನಟ, ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ್ದರು. ಇನ್ನು ಇವರು ಮಾಡೆಲ್​ ಆಗಿ ಪ್ರೇಮಾ, ಪ್ರಿಯಾಮಣಿ ಸೇರಿ ಹಲವರ ಜತೆ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಉಪ್ಪಿ 2 ಸಿನಿಮಾದಲ್ಲಿ ನಟನೆ

ಉಪೇಂದ್ರ ಅಭಿನಯದ ಉಪ್ಪಿ 2 ಸಿನಿಮಾದಲ್ಲೂ ಸುರೇಶ್‌ ಕಾಣಿಸಿಕೊಂಡಿದ್ದರು. ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಸುರೇಶ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಹಲವು ವರ್ಷಗಳ ಕಾಲ ಲಂಡನ್‌ನಲ್ಲಿ ಇವರು, ಕಳೆದ ಏಳು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಆಗಾಗ್ಗೆ ಕೋಲಾರಕ್ಕೆ ಬಂದು ಹೋಗುತ್ತಿದ್ದರು.

ಈ ಸುದ್ದಿಯನ್ನೂ ಓದಿ | Director SS David: ಕನ್ನಡದ ಖ್ಯಾತ ನಿರ್ದೇಶಕ ಎಸ್‌.ಎಸ್‌.ಡೇವಿಡ್‌ ಹೃದಯಾಘಾತದಿಂದ ನಿಧನ

ಅಮೆರಿಕದಲ್ಲಿ ಪಿಜಿಯೋತೆರಪಿಸ್ಟ್​ ಆಗಿ ಕೆಲಸ ಮಾಡಿಕೊಂಡು ಪತ್ನಿ ಮಕ್ಕಳೊಂದಿಗೆ ನೆಲಸಿದ್ದರು. ಆಗಸ್ಟ್ 1 ರಂದು ಕೋಲಾರಕ್ಕೆ ಬಂದಿದ್ದ ಸುರೇಶ್​ ಆಗಸ್ಟ್​ 24 ರಂದು ಅಮೆರಿಕಕ್ಕೆ ವಾಪಸ್​ ತೆರಳಿದ್ದರು. ಅಮೆರಿಕಗೆ ಹೋಗುವ ಮೊದಲು ತನ್ನ ಇಡೀ ಕುಟುಂಬಸ್ಥರಿಗೆ ಕೋಲಾರದ ಅಂತರಗಂಗೆಯ ರೆಸಾರ್ಟ್​ನಲ್ಲಿಔತಣಕೂಟ ಏರ್ಪಡಿಸಿ ಕುಟುಂಬಸ್ಥರೊಂದಿಗೆ ಕಾಲಕಳೆದು ಸಂತೋಷದಿಂದ ತೆರಳಿದ್ದರು. ಅಮೆರಿಕಾಗೆ ತೆರಳಿದ ಕೆಲವೇ ದಿನಗಳಲ್ಲಿ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ.