ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kolar news: ಕಾರು ಕೆರೆಗೆ ಉರುಳಿ ರೈತ ಸಂಘದ ಜಿಲ್ಲಾಧ್ಯಕ್ಷ ಸಾವು, ಅಪಘಾತದ ಬಗ್ಗೆ ಅನುಮಾನ!

ವೆಂಕಟೇಶ್,​ ತಮ್ಮ ಇಂಡಿಕಾ ಕಾರಿನಲ್ಲಿ ತಮ್ಮೂರು ತೊರಾಂಡಳ್ಳಿ ಕಡೆಗೆ ಹೊರಟಿದ್ದಾರೆ. ಈ ವೇಳೆ ಮುದುವಾಡಿ ಗ್ರಾಮದ ಬಳಿ ಬರುತ್ತಿರುವಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿ ವೆಂಕಟೇಶ್ ಅವರು ಚಲಾಯಿಸುತ್ತಿದ್ದ ಕಾರು ಕೆರೆಗೆ ಬಿದ್ದಿದೆ. ಅಥವಾ ಅವರ ಕಾರಿಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆಯಿತೋ ಎಂಬುದು ಕೂಡ ಗೊತ್ತಾಗಿಲ್ಲ.

ಕಾರು ಕೆರೆಗೆ ಉರುಳಿ ರೈತ ಸಂಘ ಜಿಲ್ಲಾಧ್ಯಕ್ಷ ಸಾವು, ಅಪಘಾತದ ಬಗ್ಗೆ ಅನುಮಾನ!

ಮೃತ ವೆಂಕಟೇಶ್‌, ಕೆರೆ -

ಹರೀಶ್‌ ಕೇರ
ಹರೀಶ್‌ ಕೇರ Mar 9, 2026 10:27 AM

ಕೋಲಾರ, ಮಾರ್ಚ್​ 09: ಕೆರೆಗೆ ಕಾರು ಬಿದ್ದು ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್​ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ ರಾತ್ರಿ 1.30 ಸುಮಾರಿನಲ್ಲಿ ಕೋಲಾರ ತಾಲ್ಲೂಕಿನ ತೊರಾಂಡಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಕಾರು ಕೆರೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತೊರಾಂಡಹಳ್ಳಿ ಗ್ರಾಮದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್​​ ಮೃತಪಟ್ಟಿದ್ದಾರೆ.

ಇಂದಿನಿಂದ ಕೋಲಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ಪಕ್ಷ ರಾಜ್ಯ ಸಮಾವೇಶ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಒಂದು ಗಂಟೆವರೆಗೂ ಜಿಲ್ಲಾಧ್ಯಕ್ಷ ಕಾಮ್ರೆಡ್ ವೆಂಕಟೇಶ್ ಹಾಗೂ ಹಲವು ಕಾರ್ಯಕರ್ತರು ನಗರದಲ್ಲಿ ಬ್ಯಾನರ್, ಬಂಟಿಂಗ್ಸ್​​ಗಳನ್ನು ಕಟ್ಟಿ ನಂತರ ವೆಂಕಟೇಶ್,​ ತಮ್ಮ ಇಂಡಿಕಾ ಕಾರಿನಲ್ಲಿ ತಮ್ಮೂರು ತೊರಾಂಡಳ್ಳಿ ಕಡೆಗೆ ಹೊರಟಿದ್ದಾರೆ. ಈ ವೇಳೆ ಮುದುವಾಡಿ ಗ್ರಾಮದ ಬಳಿ ಬರುತ್ತಿರುವಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿ ವೆಂಕಟೇಶ್ ಅವರು ಚಲಾಯಿಸುತ್ತಿದ್ದ ಕಾರು ಕೆರೆಗೆ ಬಿದ್ದಿದೆ.

ಅವರ ಕಾರಿಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆಯಿತೋ ಎಂಬುದು ಕೂಡ ಗೊತ್ತಾಗಿಲ್ಲ. ಜಿಲ್ಲಾ ಕೇಂದ್ರದಿಂದ ಪಕ್ಕದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಗೂ ರಾಜ್ಯ ಹೆದ್ದಾರಿ ಇದಾಗಿದ್ದು, ರಸ್ತೆಯ ಪಕ್ಕದಲ್ಲಿರುವ ದೊಡ್ಡ ಕೆರೆಯ ಎರಡೂ ಬದಿಯಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಈ ಭೀಕರ ಅವಘಡ ನಡೆದಿದೆ

ಭೀಕರ ರಸ್ತೆ ಅಪಘಾತ; ಲಾರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಮೂವರು ಸಾವು

ವೆಂಕಟೇಶ್ ಕಾರಿನಿಂದ ಹೊರಬರಲು ಪ್ರಯತ್ನ ಮಾಡಿದ್ದಾರೆ, ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ವೆಂಕಟೇಶ್ ಕಾರಿನಲ್ಲೇ ಮೃತಪಟ್ಟಿದ್ದಾರೆ. ಕಾರು ಅಪಘಾತವಾಗಿ ಕೆರೆಗೆ ಬಿದ್ದಿರುವ ವಿಷಯ ಬೆಳಿಗ್ಗೆ 9 ಗಂಟೆಯವರೆಗೂ ಯಾರಿಗೂ ತಿಳಿದಿಲ್ಲ. ವೆಂಕಟೇಶ್ ರಾತ್ರಿ ಮನೆಗೆ ಬಂದಿಲ್ಲ. ಅವರ ಮೊಬೈಲ್​ ಕೂಡ ಕೆಲಸ ಮಾಡುತ್ತಿಲ್ಲವೆಂದು ಹುಡುಕಾಡುವ ವೇಳೆ ವೆಂಕಟೇಶ್ ಅವರ ಕಾರಿನ ಮುಂಭಾಗದ ನಂಬರ್ ಪ್ಲೇಟ್​ ಇದ್ದ ಮಡ್‌ಗಾರ್ಡ್ ಕೆರೆಯ ಕಟ್ಟೆ ಮೇಲೆ ಕಂಡುಬಂದಿದೆ. ಕೆರೆಯಲ್ಲಿ ಕಾರಿನಿಂದ ಲೀಕ್‌ ಆದ ಡೀಸೆಲ್​ ಕಂಡುಬಂದಿದೆ. ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್​ ಶವ ಇರುವುದು ತಿಳಿದು ಬಂದಿದೆ.

ಕಾರು ಅಪಘಾತದ ಕುರಿತು ಅನುಮಾನ?

ವೆಂಕಟೇಶ್ ಅವರಿದ್ದ ಕಾರು ಅಪಘಾತದ ಕುರಿತು ಕೂಡ ಅನುಮಾನ ವ್ಯಕ್ತವಾಗಿದೆ. ವೆಂಕಟೇಶ್ ಅವರಿದ್ದ ಕಾರು ತಾವಾಗಿ ಆಯತಪ್ಪಿ ಅಪಘಾತಕ್ಕೀಡಾಯಿತಾ ಅಥವಾ ಯಾವುದಾದರೂ ವಾಹನ ಡಿಕ್ಕಿಯಾಗಿ ಅವಘಡ ಸಂಭವಿಸಿದೆಯಾ ಅನ್ನೋದರ ಕುರಿತು ತನಿಖೆ ನಡೆಯಬೇಕಿದೆ. ಜೊತೆಗೆ ಕೂಡಲೇ ಈ ಕೆರೆಗೆ ಕಟ್ಟೆಯ ಮೇಲಿನ ರಸ್ತೆ ಅಗಲೀಕರಣ ಮಾಡಿ ಕೆರೆಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

Gadag News: ಆರ್ಕೆಸ್ಟ್ರಾ ನೋಡಿ ಮರಳುತ್ತಿದ್ದವರಿಗೆ ಅಪಘಾತ, ಇಬ್ಬರು ಸಾವು

ಕೋಲಾರ ತಾಲ್ಲೂಕಿನ ಮುದುವಾಡಿ ಕೆರೆ ಕೋಲಾರ ಜಿಲ್ಲೆಯಲ್ಲೇ ದೊಡ್ಡ ಕೆರೆ. ಈ ರಸ್ತೆ ಕೋಲಾರ ಮತ್ತು ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆಂಧ್ರದ ಮದನಪಲ್ಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೂಡ ಇದಾಗಿದ್ದು, ಇಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕೆರೆಯನ್ನು ನಿರ್ವಹಣೆ ಮಾಡುವ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಮುದುವಾಡಿ ಕರೆಯ ಮೇಲೆ ತಡೆಗೋಡೆ ನಿರ್ಮಾಣ ಮಾಡದೆ ಇರುವುದು ಇಂಥದೊಂದು ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.