ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kolar News: ಮಾಲೂರಿನಲ್ಲಿ ಅವಧಿ ಮುಗಿದ ಬಿಯರ್ ಕುಡಿದು ಹಲವರು ಅಸ್ವಸ್ಥ; ಬಾರ್ ಮುಚ್ಚಿಸಲು ಆಗ್ರಹ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಅವಧಿ ಮೀರಿದ ಬೀರ್‌ ಕುಡಿದು ಅಸ್ವಸ್ಥರಾದವರನ್ನು ಮಾಲೂರಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಹೀಗಾಗಿ ಬಾರ್‌ ಮಾಲೀಕನ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಮಾಲೂರಿನಲ್ಲಿ ಅವಧಿ ಮುಗಿದ ಬಿಯರ್ ಕುಡಿದು ಹಲವರು ಅಸ್ವಸ್ಥ

ಮಾಲೂರು ತಾಲೂಕಿನ ಹುಳದೇನಹಳ್ಳಿಯ ಬಾರ್ ಅಂಡ್ ರೆಸ್ಟೋರೆಂಟ್‌. -

Prabhakara R
Prabhakara R Jan 16, 2026 10:27 PM

ಕೋಲಾರ: ಅವಧಿ ಮೀರಿದ ಬಿಯರ್ (Expired Beer) ಕುಡಿದ ಪರಿಣಾಮ ಹಲವರಲ್ಲಿ ವಾಂತಿ ಕಾಣಿಸಿಕೊಂಡು, ಅಸ್ವಸ್ಥರಾಗಿ ಆಸ್ಪತ್ರೆ ಪಾಲಾದ ಘಟನೆ ಜಿಲ್ಲೆಯ ಮಾಲೂರು (Malur News) ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಗುರುವಾರ ಸಂಜೆ ಯುವಕರ ಗುಂಪೊಂದು ಒಂದು ಕೇಸ್ ಬಡ್‌ ವೈಸರ್‌ ಬಿಯರ್ ಖರೀದಿಸಿ ಸೇವಿಸಿದ ನಂತರ ವಾಂತಿ ಆಗಿದ್ದು, ಅವರನ್ನು ತಕ್ಷಣ ಮಾಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಬ್ಯುಲೆನ್ಸ್ ಬಳಸಿದರೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸಿಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಯುವಕರು ರಹಸ್ಯವಾಗಿ ಟ್ರೀಟ್‌ಮೆಂಟ್ ಪಡೆದುಕೊಂಡಿದ್ದಾರೆ. ವೈದ್ಯರು ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ಭರವಸೆ ಕೊಟ್ಟ ನಂತರ ಬಾರ್ ಬಳಿ ಬಂದ ಗೆಳೆಯರ ಗುಂಪು ಗಲಾಟೆ ಮಾಡಿದೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಮಧ್ಯೆ ಪ್ರವೇಶವಾಗಿದ್ದು, ರಾಜಿ ಪಂಚಾಯತಿ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಲಾಗಿದೆ.

ಬಾರ್ ಮಾಲೀಕ ನಾಗರಾಜ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದರಿಂದ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದ ಕಾರಣ ಗಲಾಟೆ ಬೆಳಕಿಗೆ ಬಂದಿರಲಿಲ್ಲ. ಶುಕ್ರವಾರ ರಾತ್ರಿ ವೇಳೆಗೆ ವಿಷಯ ಬಯಲಾಗಿದೆ. ಅಬಕಾರಿ ಇಲಾಖೆ ನಿಯಮಾವಳಿ ಪ್ರಕಾರ, ಅಧಿಕಾರಿಗಳು ಪ್ರತಿಯೊಂದು ಮದ್ಯದಂಗಡಿಗೂ ಭೇಟಿ ನೀಡಿ ಪರಿಶೀಲಿಸಿ, ಅವಧಿ ಮೀರಿದ ಮದ್ಯವನ್ನು ನಾಶಪಡಿಸಬೇಕು ಎಂಬ ನಿಯಮಾವಳಿ ಇದೆ. ಆದರೂ ಸಿಬ್ಬಂದಿ ಕೊರತೆಯ ನೆಪವೊಡ್ಡಿ ಮಾಲೂರಲ್ಲೇ ಕುಳಿತುಕೊಂಡು ಮಾಮೂಲಿ ಪಡೆದುಕೊಳ್ಳುತ್ತಿರುವುದು ಮಾಲೀಕರಿಗೆ ಅಕ್ರಮ ಎಸಗಲು ದಾರಿ ಮಾಡಿಕೊಟ್ಟಂತಾಗಿದೆ ಎಂಬುದು ಮದ್ಯ ಪ್ರಿಯರ ಆರೋಪವಾಗಿದೆ.

Hangal News: ಪದೇಪದೆ ತವರು ಮನೆಗೆ ಹೋಗುತ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ ಪತಿ!

ಮಾಲೂರು ಇನ್ಸ್ಪೆಕ್ಟರ್ ಶಶಿಕಲಾ, ಸಬ್ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಬಾಲಕೃಷ್ಣ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಅವಧಿ ಮುಗಿದ ಬಿಯರ್ ಮಾರಾಟ ಮಾಡಿದ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.