#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Koppal News: ಕೊಪ್ಪಳ ಫ್ಯಾಕ್ಟರಿಯಲ್ಲಿ ಕಾರ್ಬನ್‌ ಮಾನಾಕ್ಸೈಡ್‌ ಸೋರಿಕೆಯಾಗಿ ಒಬ್ಬ ಕಾರ್ಮಿಕ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Koppal News: ಕೊಪ್ಪಳ ತಾಲೂಕಿನ ಅಲ್ಲಾನಗರ ಗ್ರಾಮದ ಬಳಿಯ ಫ್ಯಾಕ್ಟರಿಯಲ್ಲಿ ಕಾರ್ಬನ್‌ ಮಾನಾಕ್ಸೈಡ್‌ ಅನಿಲ ಸೋರಿಕೆಯಾಗಿ ದುರಂತ ಸಂಭವಿಸಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪಳ ಫ್ಯಾಕ್ಟರಿಯಲ್ಲಿ ಕಾರ್ಬನ್‌ ಮಾನಾಕ್ಸೈಡ್‌ ಸೋರಿಕೆಯಾಗಿ ಒಬ್ಬ ಕಾರ್ಮಿಕ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Profile Prabhakara R Jan 28, 2025 9:53 PM

ಕೊಪ್ಪಳ: ತಾಲೂಕಿನ ಅಲ್ಲಾನಗರ ಗ್ರಾಮದ (Koppal News) ಬಳಿಯ ಫ್ಯಾಕ್ಟರಿಯಲ್ಲಿ ಕಾರ್ಬನ್‌ ಮಾನಾಕ್ಸೈಡ್‌ ಅನಿಲ ಸೋರಿಕೆಯಾಗಿ ಒಬ್ಬ ಕಾರ್ಮಿಕ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮಂಗಳವಾರ ನಡೆದಿದೆ. ಇಸ್ಪಾಟ್ ಸ್ಟ್ರೀಲ್ ಫ್ಯಾಕ್ಟರಿಯಲ್ಲಿ ದುರಂತ ನಡೆದಿದ್ದು, ಅಸ್ವಸ್ಥರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಅಲ್ಲಾನಗರ ಗ್ರಾಮದ ನಿವಾಸಿ ಮಾರುತಿ ಕೊರಗಲ್ (24) ಎಂಬಾತ ಮೃತಪಟ್ಟಿದ್ದಾನೆ. ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಕಾರ್ಖಾನೆಯ ಸಿಡಿ ಡಿಸ್ಟಾರ್ಜ್ ಘಟಕ ಸುಮಾರು ದಿನಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿತ್ತು. ಅದನ್ನು ಸ್ವಚ್ಛಗೊಳಿಸಿ ಮತ್ತೆ ಕೆಲಸ ಆರಂಭಿಸಬೇಕೆಂದು ನಾಲ್ಕು ಜನ ಕಾರ್ಮಿಕರನ್ನು ಕಳುಹಿಸಲಾಗಿತ್ತು. ಸ್ವಚ್ಛಗೊಳಿಸಲು ಇಳಿದಾಗ ಆಮ್ಲಜನಕದ ಕೊರತೆಯಾಗಿ ಅಲ್ಲೆ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಒಬ್ಬರು ಮೃತಪಟ್ಟಿದ್ದಾರೆ. ಕಾರ್ಬನ್‌ ಮಾನಾಕ್ಸೈಡ್‌ ಅನಿಲ ಸೋರಿಕೆಯಿಂದ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಕಾರ್ಬನ್ ಮಾನಾಕ್ಸೈಡ್ ಅಪಾಯಕಾರಿ ವಿಷಾನಿಲವಾಗಿದೆ. ಇದು ಶ್ವಾಸಕೋಶದ ಮೂಲಕ ದೇಹವನ್ನು ಪ್ರವೇಶಿಸಿ, ರಕ್ತದ ಮೂಲಕ ಸಾಗಿಸಲ್ಪಡುತ್ತದೆ. ಕಾರ್ಬನ್ ಮಾನಾಕ್ಸೈಡ್, ರಕ್ತವನ್ನು ದೇಹದ ಅಂಗಾಂಗಗಳಿಗೆ ಆಮ್ಲಜನಕವನ್ನು ಸಾಗಿಸದಂತೆ ತಡೆಯುತ್ತದೆ. ಇದರಿಂದ ಹೃದಯ ಮತ್ತು ಮೆದುಳಿನ ಕಾರ್ಯನಿರ್ವಹಣೆಗೆ ಅಡಚಣೆಯಾಗಿ ಮನುಷ್ಯನ ಜೀವಕ್ಕೆ ಹಾನಿಯಾಗಲಿದೆ.

ಈ ಸುದ್ದಿಯನ್ನೂ ಓದಿ | Viral News: ವಿಮಾನ ಟೇಕ್‌-ಆಫ್ ಮುಂಚೆಯೇ ಎಮರ್ಜೆನ್ಸಿ ಎಕ್ಸಿಟ್‌ ಡೋರ್‌ ತೆಗೆದ ವ್ಯಕ್ತಿ ಅರೆಸ್ಟ್!

ಸಾಲಗಾರರಿಂದ ತಪ್ಪಿಸಿಕೊಳ್ಳಲು ಬುರ್ಖಾ ಧರಿಸಿ ಓಡಾಡ್ತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ!

Bagalkot assault case

ಬಾಗಲಕೋಟೆ: ಸಾಲಗಾರರಿಂದ ತಪ್ಪಿಸಿಕೊಳ್ಳಲು ಬುರ್ಖಾ ಧರಿಸಿ ಓಡಾಡ್ತಿದ್ದ ವ್ಯಕ್ತಿಗೆ ಗೂಸಾ ಬಿದ್ದಿರುವ ಘಟನೆ (Assault Case) ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 47ರಲ್ಲಿ ನಡೆದಿದೆ. ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಸಾಲ ನೀಡಿದವರು ಮನೆಯಿಂದ ಹೊರಗಡೆ‌ ಎಳೆದು, ಬುರ್ಕಾ ಕಳಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಹ್ಮದ್ ಜನಮಸಾಗರ್ ಹಲ್ಲೆಗೊಳಗಾದವರು. ಈತ ಸಾಲಗಾರರ ಬಳಿ ಲಕ್ಷಾಂತರ ರೂ. ಸಾಲ ಪಡೆದು, ಅವರಿಗೆ ಸಿಗದೇ ಓಡಾಡ್ತಿದ್ದ ಎನ್ನಲಾಗಿದೆ. ಅಲ್ಲದೇ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಓಡಾಡುತ್ತಿದ್ದ. ಸಾಲಗಾರರು ಅಹ್ಮದ್ ಮನೆಗೆ ಹೋದಾಗ ಬುರ್ಕಾ ಹಾಕಿಕೊಂಡು ಇದ್ದ ವ್ಯಕ್ತಿಯನ್ನು ನೋಡಿದ್ದಾರೆ. ಬಳಿಕ ವೇಷ ಬದಲಿಸಿದವನು ಅಹ್ಮದ್ ಎಂದು ತಿಳಿದ ಸಾಲಾಗಾರರು, ಮನೆಯಿಂದ ಹೊರಗಡೆ‌ ಎಳೆದು, ಬುರ್ಕಾ ಕಳಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.