IND vs PAK: ʻ7ನೇ ಡಿವಿಷನ್ ತಂಡʼ-ಪಾಕಿಸ್ತಾನವನ್ನು ಟೀಕಿಸಿದ ಕೆ ಶ್ರೀಕಾಂತ್!
ಪಾಕಿಸ್ತಾನ ಕ್ರಿಕೆಟ್ ತಂಡದ ಕುಸಿತದ ಬಗ್ಗೆ ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನ ತಂಡ ಏಳನೇ ಡಿವಿಷನ್ ಆಡಬೇಕು. ಆ ಮೂಲಕ ಭಾರತದಂತಹ ದೊಡ್ಡ ತಂಡಗಳ ವಿರುದ್ಧ ಆಡಲು ಅರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡವನ್ನು ಟೀಕಿಸಿದ ಕೆ ಶ್ರೀಕಾಂತ್. -

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆಯಿದೆ. ಆದಾಗ್ಯೂ, ಕಳೆದ ಎರಡು ಮೂರು ವರ್ಷಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಪಾಕಿಸ್ತಾನ ಯಾವುದೇ ಟೂರ್ನಿಯಲ್ಲಿ ಆಡಿದರೂ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಐಸಿಸಿ ಟೂರ್ನಿಗಳಲ್ಲಿ ಹಲವು ಬಾರಿ ನಾಕೌಟ್‌ಗೆ ತಲುಪಿದೆ. ಆದರೆ, ಈಗ ಯಾವುದೇ ತಂಡವು ಪಾಕಿಸ್ತಾನವನ್ನು ಸೋಲಿಸಬಹುದು. ಕಳೆದ ವರ್ಷ ಟಿ20ಐ ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಅಮೆರಿಕ ವಿರುದ್ಧ ಸೋಲು ಅನುಭವಿಸಿತ್ತು. 2025 ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಪಾಕಿಸ್ತಾನ ಎರಡೂ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿದೆ. ಒಮಾನ್ ಮತ್ತು ಯುಎಇ ವಿರುದ್ಧದ ಪಂದ್ಯಗಳಲ್ಲಿಯೂ ಪಾಕಿಸ್ತಾನ ಕಠಿಣ ಹೋರಾಟ ನಡೆಸಿ ಗೆಲುವು ಪಡೆದಿತ್ತು.
ಏಷ್ಯಾ ಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನವನ್ನು ತೋರುತ್ತಿರುವ ಪಾಕಿಸ್ತಾನ ತಂಡವನ್ನು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಟೀಕಿಸಿದ್ದಾರೆ. ಪಾಕಿಸ್ತಾನ ತಂಡ, ಚೆನ್ನೈನ ಸ್ಥಳೀಯ ತಂಡದಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಸೂಪರ್ ಫೋರ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ. 1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಶ್ರೀಕಾಂತ್, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, "ಮುಂದಿನ ದಿನಗಳಲ್ಲಿ ಪಾಕಿಸ್ತಾನ, ಮುಖ್ಯ ತಂಡಗಳೊಂದಿಗೆ ಆಡಬಾರದು. ಅವರನ್ನು ಅಸೋಸಿಯೇಟ್ ರಾಷ್ಟ್ರಗಳಲ್ಲಿ ಸೇರಿಸಿ ಮತ್ತು ಇತರ ಕೆಲವು ತಂಡಗಳನ್ನು ಕರೆತನ್ನಿ. ಇಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಅವರಿಗೆ ಅವಕಾಶ ನೀಡಲಾಗುತ್ತಿರುವುದು ಪಾಕಿಸ್ತಾನದ ದೊಡ್ಡ ಸಾಧನೆಯಾಗಿದೆ," ಎಂದು ತಿಳಿಸಿದ್ದಾರೆ.
Asia Cup 2025: ಪಾಕಿಸ್ತಾನ ತಂಡದ ವೈಫಲ್ಯಕ್ಕೆ ಸಲ್ಮಾನ್ ಆಘಾ ಕಾರಣ ಎಂದ ಶೋಯೆಬ್ ಅಖ್ತರ್!
ಪಾಕಿಸ್ತಾನವನ್ನು ಅಗ್ರ ಏಳು ತಂಡಗಳಿಂದ ತೆಗೆದುಹಾಕಬೇಕು ಎಂದು ಶ್ರೀಕಾಂತ್ ಹೇಳಿದರು. "ಪಾಕಿಸ್ತಾನವನ್ನು ಅಗ್ರ ಏಳು ತಂಡಗಳಿಂದ ತೆಗೆದುಹಾಕಬೇಕು. ಇಂದಿನಿಂದ, ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಜನಸಂದಣಿ ಇರುವುದಿಲ್ಲ. ಭಾರತ-ಪಾಕಿಸ್ತಾನ ಪೈಪೋಟಿ ಇತಿಹಾಸ. ಈ ಪಾಕಿಸ್ತಾನ ತಂಡವು ನಮ್ಮನ್ನು ಬೆದರಿಸುವುದಿಲ್ಲ. ಅವರು ಚೆನ್ನೈ ಲೀಗ್‌ನಲ್ಲಿ ಏಳನೇ ಡಿವಿಷನ್ ರೀತಿಯ ತಂಡವಾಗಿದೆ," ಎಂದು ಅವರು ಹೇಳಿದ್ದಾರೆ.
Asia Cup 2025: ಕೆಣಕಿದ ರೌಫ್‌ಗೆ ಚಳಿ ಬಿಡಿಸಿದ ಅಭಿಷೇಕ್, ಗಿಲ್; ವಿಡಿಯೊ ವೈರಲ್
ಮುಖ್ಯ ಕೋಚ್ ಮೈಕ್ ಹೇಸನ್ ಅವರ ನೇತೃತ್ವದಲ್ಲಿ ಪಾಕಿಸ್ತಾನ ತಂಡ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಶ್ರೀಕಾಂತ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಹಿಂದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮತ್ತು ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಹೇಸನ್, 2025ರ ಮೇ ನಲ್ಲಿ ಪಾಕಿಸ್ತಾನದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.
"ನಮ್ಮ ತಂಡ ಎಷ್ಟು ಉತ್ತಮವಾಗಿ ಹಾಗೂ ಕಳೆದ ರಾತ್ರಿ ಭಾರತ ವಿರುದ್ಧದ ಪಂದ್ಯದಲ್ಲಿ ನಮ್ಮ ಪಾಲಿಗೆ ಅದೃಷ್ಟ ಸರಿ ಇರಲಿಲ್ಲ ಎಂಬಂತಹ ಹೇಳಿಕೆಗಳನ್ನು ಮೈಕ್ ಹೇಸನ್ ನೀಡುತ್ತಿದ್ದಾರೆ. ಮೈಕ್ ಹೇಸನ್ ಕೋಚ್ ಆಗಿದ್ದರೆ ನೀವು ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ,ʼ ಎಂದು ಕೆ ಶ್ರೀಕಾಂತ್ ತಿಳಿಸಿದ್ದಾರೆ.