ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೈಕೋರ್ಟ್ ಹೇಳಿದೆ ಜಾಹೀರಾತಲ್ಲಿದೆ: ಎಚ್.ಡಿ.ಕುಮಾರಸ್ವಾಮಿ ನೈಸ್‌ ಉವಾಚ

ಮಂಡ್ಯದ ಮೇಲುಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಹೀರಾತನ್ನು ಯಾರು ಕೂಡ ಕಲ್ಪನೆ ಮಾಡಿ ಕೊಟ್ಟಿಲ್ಲ. ಇತ್ತೀಚೆಗೆ ಹೈಕೋರ್ಟ್‌ʼನ ದ್ವಿಸದಸ್ಯ ಪೀಠ ನೈಸ್ ಯೋಜನೆ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಅದೇ ಇವತ್ತು ಜಾಹೀರಾತು ರೂಪದಲ್ಲಿ ಪ್ರಕಟವಾಗಿದೆ. ಈ ಸರಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ ಎಂದಿದ್ದಾರೆ.

ಟೋಲ್ ದೊಡ್ಡ ಹಗರಣ ಜಾಹೀರಾತಿಗೆ ಕೇಂದ್ರ ಸಚಿವ ಪ್ರತಿಕ್ರಿಯೆ

ಮಂಡ್ಯ: ರಾಜ್ಯ ಹೈಕೋರ್ಟ್ ದಾಖಲಿಸಿರುವ ಕಟುವಾದ ಅಭಿಪ್ರಾಯಗಳನ್ನು ಒಳಗೊಂಡ ಅಂಶಗಳೇ ಭಾನುವಾರ ಪತ್ರಿಕೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿವೆ. ಇದೇನು ಕಪೋಲಕಲ್ಪಿತ ಜಾಹೀರಾತಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ನೈಸ್ ಯೋಜನೆ ಕುರಿತು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಜಾಹೀರಾತು ವಿಚಾರದ ಬಗ್ಗೆ ಮಂಡ್ಯದ ಮೇಲುಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಹಿರಾತನ್ನು ಯಾರು ಕೂಡ ಕಲ್ಪನೆ ಮಾಡಿಕೊಟ್ಟಿಲ್ಲ.

ಇತ್ತೀಚೆಗೆ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನೈಸ್ ಯೋಜನೆ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಅದೇ ಇವತ್ತು ಜಾಹೀರಾತು ರೂಪದಲ್ಲಿ ಪ್ರಕಟವಾಗಿದೆ. ನೈಸ್ ಯೋಜನೆ ರಾಜ್ಯ ದಲಿಯೇ ಅತಿದೊಡ್ಡ ಹಗರಣ ಎಂದರೆ ತಪ್ಪಲ್ಲ. ಈ ಸರಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ. ಇದೊಂದೇ ಅಲ್ಲ, ಹಿಂದಿನ ಸರಕಾರಗಳು ಹಾಗೂ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಎಲ್ಲರೂ ಯೋಜನಾ ಚೌಕಟ್ಟು ಒಪ್ಪಂದ (ಪ್ರೇಮ್ ವರ್ಕ್ ಅಗ್ರಿಮೆಂಟ್) ಅನ್ನು ಉಲ್ಲಂಘನೆ ಮಾಡಿದ್ದಾರೆ.

ಕಂಪನಿ ಮಾಲೀಕನಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ರೈತರ ಭೂಮಿಗಳನ್ನು ಲೂಟಿ ಹೊಡೆದಿದ್ದಾರೆ. 20 ವರ್ಷಗಳಾದರೂ ಸಹ ಇನ್ನೂ ರೈತರಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು. ನೈಸ್ ಕಂಪನಿ ಯೋಜನೆ ಹೆಸರಿನಲ್ಲಿ ರೈತರಿಂದ ಕಸಿದುಕೊಂಡಿರುವ ಬೆಲೆ ಬಾಳುವ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಂಡಿದೆ. ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಜಂಟಿ ಒಪ್ಪಂದ ಗಳನ್ನು ಮಾಡಿಕೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿರುವ ನ್ಯಾಯಾಲಯ ಟೋಲ್ ಸಂಗ್ರಹ ಕಾನೂನುಬಾಹಿರ ಎಂದು ಹೇಳಿದೆ. ಈ ಸರಕಾರ ಇನ್ನೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ಟೀಕಿಸಿದರು.

ಖೇಣಿಗೆ ಏನೂ ಹೇಳಬೇಕಿಲ್ಲ: ಅಶೋಕ್ ಖೇಣಿ ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ನನಗೆ ಖೇಣಿ ಏನು ಹೇಳಬೇಕಿಲ್ಲ. ಅವರನ್ನು ಕಟ್ಟಿಕೊಂಡು ನನಗೆ ಏನು ಆಗಬೇಕಿಲ್ಲ. ನಾನು ಆತನಿಗೇನು ಹೇಳುತ್ತಿಲ್ಲ. ನಾನು ಹೇಳುತ್ತೀರೋದು ಈ ಸರಕಾರಕ್ಕೆ. ಕೋರ್ಟ್ ಆದೇಶ ಕೊಟ್ಟಿರುವುದು ಸರಕಾರಕ್ಕೆ, ಖೇಣಿಗೆ ಅಲ್ಲ ಎಂದರು. ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ: ನೈಸ್ ರಸ್ತೆ ಟೋಲ್ ವಿಷಯಕ್ಕೆ ಸಂಬಂಧಿಸಿ ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ. ಆದರೆ, ಜನರು ಇಷ್ಟೊತ್ತಿಗೆ ನುಗ್ಗಬೇಕಿತ್ತು. ಅದು ಆಗಬೇಕಿದೆ. ನಾನು ಅವನ್ಯಾರಿಗೋ ಉತ್ತರ ಕೊಡೋಕೆ ಬಂದಿಲ್ಲ. ಅನ್ಯಾರೋ ಲೂಟಿ ಮಾಡಲು ಬಂದಿರೋನು. ನೈಸ್ ಯೋಜನೆಗೆ ಐದು ರುಪಾಯಿ ಹಣ ಹಾಕಿಲ್ಲ ಅವನು. ರಾಜ್ಯ ಸರಕಾರ ಈ ಯೋಜನೆಗೆ 10 ರುಪಾಯಿ ಲೆಕ್ಕದಲ್ಲಿ ಭೂಮಿಯನ್ನು ಲೀಸ್ ಗೆ ಕೊಟ್ಟಿದ್ದಾರೆ. ರಾಜ್ಯದ ಆಸ್ತಿಯನ್ನು ಐಸಿಐಸಿಐ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದಿದ್ದಾನೆ. ಸಾಲ ಹಣದಿಂದ ಆಟ ಆಡಿಕೊಂಡು ಕೂತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರದು ಸೂಟ್‌ಕೇಸ್ ಸಂಸ್ಕೃತಿ

ರಾಮನಗರ: ನಾವು ಕೈಮುಗಿಯುವುದು ಸಂಸ್ಕೃಯ ಪ್ರತೀಕ, ಪೂಜನೀಯ ಬೃಂದಾವನಕ್ಕೆ. ಆದರೆ ಕಾಂಗ್ರೆಸ್ ನಾಯಕರದ್ದು ಸೂಟ್‌ಕೇಸ್ ಸಂಸ್ಕೃತಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರು ಮಹಾನ್ ನಾಯಕರು, ಅಭಿವೃದ್ಧಿಯ ಹರಿಕಾರರು ನಮ್ಮ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂದಿದ್ದಾರೆ. ಹೌದು.. ನಾವು ಪೂಜಿಸುವುದು ಸಂಸ್ಕೃತಿಯ ಪ್ರತೀಕವಾದ ಬೃಂದಾವನವನ್ನು. ಆದರೆ ಅವರದ್ದು ಸೂಟ್‌ಕೇಸ್ ಬೃಂದಾವನ. ಎಲ್ಲಿ ಭೂಮಿ ಸಿಗುತ್ತದೆಯೋ ಅಲ್ಲೆಲ್ಲ ಲಪಟಾಯಿಸಿ ಬೃಂದಾವನ ಕಟ್ಟುವುದು ಅವರ ಸಂಸ್ಕೃತಿ ಎಂದು ಸಚಿವರು ಲೇವಡಿ ಮಾಡಿದರು. ನೈಸ್ ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರದ ದುಡ್ಡು ಕೊಟ್ಟಿಲ್ಲ. ಟೇಪ್ ಹಿಡಿದುಕೊಂಡು ಅಳತೆ ಮಾಡಿ ಭೂಮಿ ಲಪಟಾಯಿಸಿ ದೋಖಾ ಮಾಡುವವರು ಅವರು. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿ ಕೊಂಡು 20 ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಹಗರಣ. ಆ ರಸ್ತೆ ರಾಷ್ಟ್ರೀಯ ಹೆದ್ದಾರಿ ಅಲ್ಲ, ರಾಜ್ಯ ಸರಕಾರಕ್ಕೆ ಸೇರಿದ್ದು. ಅಲ್ಲಿ ಟೋಲ್ ಸಂಗ್ರಹ ಮಾಡುತ್ತಿರುವುದೇ ಅಕ್ರಮ. ಸರಕಾರ ಕೂಡಲೇ ಟೋಲ್ ಸಂಗ್ರಹಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.

ಲೋಕೋಪಯೋಗಿ ಸಚಿವರಿಗೆ ಎಚ್‌ಡಿಕೆ ತರಾಟೆ ಲೋಕೋಪಯೋಗಿ ಸಚಿವರು ನೈಸ್ ಜತೆ ಇನ್ನೂ 20 ವರ್ಷ ಅಗ್ರಿಮೆಂಟ್ ಇದೆ ಅಂತಾರೆ. ಯಾವ ಅಗ್ರಿಮೆಂಟ್ ಇದೆ? ಸರಕಾರದವರು ಆ ಕಂಪನಿ ಜತೆ ಸೇರಿಕೊಂಡು ಇನ್ನೂ ಲೂಟಿ ಹೊಡೆಯಿರಿ. ರೈತರು ದಿನ ಕೋರ್ಟ್ ಮುಂದೆ ನಿಂತಿರುತ್ತಾರೆ. ಸರಕಾರ ಇರೋದು ಯಾವೋನೋ ಒಬ್ಬ ವ್ಯಕ್ತಿಗೆ ರಕ್ಷಣೆ ಕೊಡಲು ಅಲ್ಲ. ನಾಡಿನ ಆರೂವರೆ ಕೋಟಿ ಜನರ ರಕ್ಷಣೆಗೆ ಇರೋದೆಂದು ಕೋರ್ಟ್ ತೀರ್ಪು ಕೊಟ್ಟಿದೆ. ಸರಕಾರ ಈ ಕಂಪನಿಗೆ ಸಂಪೂರ್ಣ ಶರಣಾಗತಿಯಾಗಿದೆ. ಸರಕಾರ ಮಾಡಿರುವ ಅವ್ಯವಹಾರವಾಗಿದೆ. ಕರ್ನಾ ಟಕದ ನಂ.1 ಹಗರಣ ಇದು ಎಂದು ಹೇಳಲಾಗಿದೆ. ಈ ಸರಕಾರದಲ್ಲಿನ ಮುಖ್ಯಮಂತ್ರಿಗಳು, ಮಂತ್ರಿಗಳು ಈ ಕಂಪನಿ ಜತೆ ವ್ಯವಹಾರದ ಇಟ್ಟುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಕುಮಾರ ಸ್ವಾಮಿ ನೇರ ಆರೋಪ ಮಾಡಿದರು.

ಎಚ್‌ಡಿಕೆ ಹೇಳಿದ್ದೇನು?

ರೈತರ ಭೂಮಿ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದು ಆಟ

20 ವರ್ಷ ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ

ದೊಡ್ಡ ದೊಡ್ಡ ಕಂಪನಿಗಳೊಂದಿಗೆ ಜಂಟಿ ಒಪ್ಪಂದ

ರಿಯಲ್ ಎಸ್ಟೇಟ್ ಉದ್ದೇಶಕ್ಕೆ ರೈತರ ಭೂಮಿ ಬಳಕೆ

ಟೋಲ್ ಸಂಗ್ರಹ ಕಾನೂನುಬಾಹಿರ: ಎಚ್‌ಡಿಕೆ

ಈ ಸರಕಾರ ಕ್ರಮ ಯಾಕೆ ತೆಗೆದುಕೊಂಡಿಲ್ಲ

ಖೇಣಿಗೆ ನಾನೇನು ಹೇಳಲ್ಲ, ನನ್ನ ಆರೋಪ ಸರಕಾರಕ್ಕೆ

ಸಿಎಂ ಸೇರಿ ಮಂತ್ರಿಗಳು ನೈಸ್ ಜತೆ ವ್ಯವಹಾರ

image

2006-07ರಲ್ಲಿ ನಾನು ವಿಧಾನಸಭಾ ಕಲಾಪದಲ್ಲಿ ಪ್ರಶ್ನೆ ಮಾಡಿದ್ದೇನೆ. ಸದನ ಒಪ್ಪುವುದಾದರೆ ನೈಸ್ ಯೋಜನೆಯನ್ನು ರದ್ದು ಮಾಡೋಣ ಎಂದು ಕೇಳಿದೆ. ಆಗ ಇವರು ಏನು ಹೇಳಲಿಲ್ಲ. ನನಗೆ ಬೆಂಬಲ ಇರಲಿಲ್ಲ. 38 ಶಾಸಕರ ಬೆಂಬಲ ಅಷ್ಟೇ ಇತ್ತು. 38 ಜನ ಶಾಸಕರಿಂದ ನಾನು ಏನು ರದ್ದು ಮಾಡಲಿ. ಕ್ಯಾಬಿನೆಟ್ ಮುಂದೆ ತಂದಾಗ ನಮ್ಮ ಜತೆ ಅಧಿಕಾರ ಹಂಚಿಕೊಂಡಿದ್ದವರು ಸಂಪುಟ ಸಭೆಗೆ ಬಹಿಷ್ಕಾರ ಹಾಕಿದ್ದರು. ನನಗೆ 134 ಶಾಸಕರು ಇದ್ದಿದ್ದರೆ ಇಂತವರೆಲ್ಲರೂ ಜೈಲಿನಲ್ಲಿ ಇರುತ್ತಿದ್ದರು.

-ಕುಮಾರಸ್ವಾಮಿ, ಕೇಂದ್ರ ಸಚಿವ