Physical Abuse: ಮಂಡ್ಯದಲ್ಲಿ ಕಾಮುಕರ ಅಟ್ಟಹಾಸ; 8 ವರ್ಷದ ಬಾಲಕಿ ಮೇಲೆ ಮೂವರಿಂದ ಲೈಂಗಿಕ ದೌರ್ಜನ್ಯ
Physical Abuse: ಸರ್ಕಾರಿ ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಜ.31ರಂದು ಘಟನೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ: ನಗರದಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲೆ ಆವರಣದಲ್ಲೇ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ನಗರದ ಹೊರ ವಲಯದಲ್ಲಿ ಘಟನೆ ನಡೆದಿದ್ದು, ಕೇಕ್ ಕೊಡಿಸಿ, ಚಾಕುವಿನಿಂದ ಇರಿಯುವುದಾಗಿ ಬೆದರಿಸಿ ಸರ್ಕಾರಿ ಶಾಲಾ ಆವರಣದಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಜ.31ರಂದು ಘಟನೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ ಯಾರೊಂದಿಗೆ ಹೇಳಿಕೊಂಡಿರಲಿಲ್ಲ. ಬಾಲಕಿ ಋತುಮತಿಯಾಗಿ ಎರಡು ದಿನ ಕಳೆದರೂ ಆಕೆಗೆ ಹೊಟ್ಟೆ ನಾವು, ರಕ್ತಸ್ರಾವ ನಿಂತಿರಲಿಲ್ಲ. ಇದರಿಂದ ಅನುಮಾನಗೊಂಡ ಬಾಲಕಿ ಚಿಕ್ಕಮ್ಮ ಬಂದು ವಿಚಾರಿಸಿದಾಗ ಬಾಲಕಿ ನಡೆದ ಘಟನೆ ವಿವರಿಸಿದ್ದಾಳೆ.
ಸದ್ಯ ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಂದ ಪೊಲೀಸರು ಬಾಲಕಿಯ ಆರೋಗ್ಯ ವಿಚಾರಣೆ ನಡೆಸಿದ್ದು, ಆಕೆಯ ಆರೋಗ್ಯದ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Road Accident: ಬೈಕ್ ಸ್ಟಂಟರ್‌ಗಳ ಹಾವಳಿ; ಕಾರು ಪಲ್ಟಿಯಾಗಿ ಕುಂಭಮೇಳದಿಂದ ಮರಳುತ್ತಿದ್ದ 5 ನೇಪಾಳಿ ಪ್ರಜೆಗಳ ದುರ್ಮರ
ಕ್ರೈಂ ಬ್ರಾಂಚ್ ಆಫೀಸರ್ ಎಂದು ಯುವತಿಯರ ರೂಂಗೆ ನುಗ್ಗಿದ ಹೋಂ ಗಾರ್ಡ್ !
ಬೆಂಗಳೂರು: ಮಹಿಳೆಯರಿಗೆ ಬೆಂಗಳೂರು (Bengaluru) ಎಷ್ಟು ಸುರಕ್ಷಿತ ಎಂಬುದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಇದೀಗ ವ್ಯಕ್ತಿಯೊಬ್ಬ ಯುವತಿಯರಿಗೆ ಕಿರುಳುವ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಯುವತಿಯರ ರೂಂಗೆ ನುಗ್ಗಿ 'ನಾನು ಕ್ರೈಂ ಬ್ರಾಂಚ್ ಆಫೀಸರ್' ಎಂದು ಕಾಮುಕನೋರ್ವ ಯುವತಿಯರಿಗೆ ಕಿರುಕುಳ ನೀಡಿದ (harassment) ಘಟನೆ ನಡೆದಿದೆ.
ಸಂತ್ರಸ್ತೆ ಯುವತಿಯರು ಕೇರಳ ಮೂಲದವರಾಗಿದ್ದು, ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ 2ನೇ ವರ್ಷದ ಬಿಎಸ್ ಸಿ ಓದುತ್ತಿದ್ದಾರೆ. ಜನವರಿ 25ರಂದು ಊಟ ಮಾಡಿ ಮಲಗಿಕೊಂಡಿದ್ದಾಗ ರಾತ್ರಿ ಯಾರೋ ಬಾಗಿಲು ತಟ್ಟಿದ್ದಾರೆ. ಯುವತಿ ಬಾಗಿಲು ತೆಗೆದಿದ್ದಾಳೆ. ಆಗ ಹೊರಗೆ ನಿಂತ ವ್ಯಕ್ತಿ ನಾನು ಪೊಲೀಸ್ ಅಂತಾ ಹೇಳಿಕೊಂಡಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಆಕೆಯ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದಾರೆಂದು ತಿಳಿಸಿದ್ದಾಳೆ. ಅಷ್ಟರಲ್ಲೇ ಏಕಾಏಕಿ ರೂಮ್ ಒಳಗೆ ನುಗ್ಗಿ ಡೋರ್ ಲಾಕ್ ಮಾಡಿ, ಎಲ್ಲರ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾನೆ.
ಯುವತಿ ಕೈನಲ್ಲಿದ್ದ ಹಾವಿನ ಟ್ಯಾಟೋ ನೋಡಿ, ಅಶ್ಲೀಲವಾಗಿ ಮಾತಾನಾಡಿದ್ದಾನೆ. ಜೊತೆಗೆ ಯುವತಿ ಸ್ನೇಹಿತನಿಗೆ ಕರೆ ಮಾಡಿದ್ದಕ್ಕೆ ಆಕೆಯ ಸ್ನೇಹಿತೆಯರಿಗೂ ಕಿರುಕುಳ ನೀಡಿದ್ದಾನೆ. ಘಟನೆಯ ಬಗ್ಗೆ ತಿಳಿಯುತ್ತಲೇ ಸಂತ್ರಸ್ತ ಯುವತಿಯ ಸ್ನೇಹಿತ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದಾಗ ಕಾಮುಕನ ನಿಜ ರೂಪ ಬಯಲಾಗಿದೆ.
ವೃತ್ತಿಯಲ್ಲಿ ಹೋಂ ಗಾರ್ಡ್ ಆಗಿರುವ ಆರೋಪಿ ಸುರೇಶ್ ರಾತ್ರಿ ಆಗ್ತಿದ್ದಂತೆ ತಾನು ಪೊಲೀಸ್, ಕ್ರೈಂ ಬ್ರಾಂಚ್ ಆಫೀಸರ್ ಅಂತಾ ಹೇಳಿ ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳಿಂದ ಈತ ಇದೇ ರೀತಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಜರುಗಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: KS Ramji: ಕಿರುತೆರೆ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಅಪಪ್ರಚಾರ ಎಂದು ದೂರು ದಾಖಲಿಸಿದ ರಾಮ್‌ಜೀ
ಇತ್ತೀಚೆಗೆ ಕಮ್ಮನಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿತ್ತು. ಮಧ್ಯರಾತ್ರಿ ಯುವತಿಯೊಬ್ಬಳು ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಬರುತ್ತಿದ್ದಂತೆ ಆಕೆ ಕ್ಯಾಬ್‌ನಲ್ಲಿ ಕೂತಿದ್ದಳು, ಆಗ ಅಪರಿಚಿತರೊಬ್ಬರು ಕ್ಯಾಬ್‌ನ ಒಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನ ಪಟ್ಟಿದ್ದರು. ಆಗ ಆಕೆ ಕೂಗಿಕೊಂಡಿದ್ದಾಳೆ. ತಕ್ಷಣ ನೆರೆಹೊರೆಯವರು ಸೇರಿದ್ದಾರೆ. ಆಗ ಕಾಮುಕರಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.