ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

CJ Roy death: ʼಸಿಜೆ ರಾಯ್‌ ತಾವೇ ಗುಂಡು ಹೊಡೆದುಕೊಂಡ್ರಾ ಅಥವಾ...ʼ ಪ್ರದೀಪ್‌ ಈಶ್ವರ್‌ ಗುಮಾನಿ

ಘಟನೆ ಆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ, ಇದ್ದವರು ಐಟಿಯವರು (IT) ಮಾತ್ರ. ಒಳಗಡೆ ಏನಾಗಿದ್ಯೋ ಏನೋ ಗೊತ್ತಿಲ್ಲ. ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ನೂರಾರು ಕೋಟಿ ದುಡ್ಡು ಕೇಳಿದ್ದಾರೆ. ಅವರು ಹಣ ಕೊಡದಿದ್ದಕ್ಕೆ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಇಂತಹ ಭ್ರಷ್ಟ ಬಿಜೆಪಿಯಿಂದ (BJP) ನಮ್ಮ ದೇಶ ಅಭಿವೃದ್ಧಿ ಆಗಲ್ಲ ಎಂದು ಆರೋಪಿಸಿದ್ದಾರೆ.

ʼಸಿಜೆ ರಾಯ್‌ ತಾವೇ ಗುಂಡು ಹೊಡೆದುಕೊಂಡ್ರಾ ಅಥವಾ...ʼ: ಪ್ರದೀಪ್‌ ಈಶ್ವರ್‌

ಪ್ರದೀಪ್‌ ಈಶ್ವರ್‌, ಸಿಜೆ ರಾಯ್ -

ಹರೀಶ್‌ ಕೇರ
ಹರೀಶ್‌ ಕೇರ Feb 1, 2026 10:46 AM

ರಾಮನಗರ, ಫೆ.1: ಉದ್ಯಮಿ ಸಿಜೆ ರಾಯ್ (CJ Roy death) ಅವರೇ ಗುಂಡು ಹೊಡೆದುಕೊಂಡ್ರಾ ಅಥವಾ ಬೇರೆ ಯಾರಾದ್ರು ಗುಂಡು ಹೊಡೆದ್ರಾ? ಎಂದು ರಾಯ್ ಆತ್ಮಹತ್ಯೆ ಬಗ್ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕನಕಪುರದಲ್ಲಿ ಮಾತನಾಡಿದ ಅವರು, ಘಟನೆ ಆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ, ಇದ್ದವರು ಐಟಿಯವರು (IT) ಮಾತ್ರ. ಒಳಗಡೆ ಏನಾಗಿದ್ಯೋ ಏನೋ ಗೊತ್ತಿಲ್ಲ. ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ನೂರಾರು ಕೋಟಿ ದುಡ್ಡು ಕೇಳಿದ್ದಾರೆ. ಅವರು ಹಣ ಕೊಡದಿದ್ದಕ್ಕೆ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಇಂತಹ ಭ್ರಷ್ಟ ಬಿಜೆಪಿಯಿಂದ (BJP) ನಮ್ಮ ದೇಶ ಅಭಿವೃದ್ಧಿ ಆಗಲ್ಲ. ಅಶೋಕಣ್ಣ, ಸುನೀಲಣ್ಣ, ಯತ್ನಾಳ್ ಅವ್ರು ಮೈಸೂರಿನ ಒಂದು ಕೋತಿ ಎಲ್ಲದಕ್ಕೂ ಬಾಯಿ ಬಡಿದುಕೊಳ್ತಾರೆ. ಇದರ ಬಗ್ಗೆ ಯಾಕೆ ಯಾರೂ ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಒಬ್ಬ ಕಾಮನ್ ಮ್ಯಾನ್ ಹಣ ಸಂಪಾದನೆ ಮಾಡೋಕೆ ಬಿಜೆಪಿ ಬಿಡುತ್ತಿಲ್ಲ. ಅವರಿಗೆ ಸಾಲ ಇಲ್ಲ, ಯಾವುದೇ ಸಮಸ್ಯೆ ಇಲ್ಲ ಕಳೆದ ಒಂದು ತಿಂಗಳಿನಿಂದ ಐಟಿ ಅವರಿಗೆ ಕಿರುಕುಳ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಇದ್ದರೆ ಇದೇ ಕಿರುಕುಳ ಮುಂದುವರಿಯುತ್ತದೆ. ಈ ಬಗ್ಗೆ ಎಸ್‌ಐಟಿ ತನಿಖೆ ಆಗಲಿ. ಇದನ್ನ ಸಿಬಿಐಗೆ ಕೊಟ್ರೆ ಅದೂ ಅವರ ಕೈಯಲ್ಲೇ ಇದೆ, ನ್ಯಾಯ ಸಿಗಲ್ಲ. ಹಾಗಾಗಿ ಎಸ್‌ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು.

CJ Roy Death Case: ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ